Home » Bigg Boss: ಬಿಗ್ ಬಾಸ್ ಮನೆಗೆ ನುಗ್ಗಿ ಬಂದ್ರು ಇವರ ಹೆಂಡತಿ – ಎಲ್ಲರೆದುರೇ ಗಂಡನಿಗೆ ಬಿತ್ತು ಚಪ್ಪಲಿ ಏಟು !!

Bigg Boss: ಬಿಗ್ ಬಾಸ್ ಮನೆಗೆ ನುಗ್ಗಿ ಬಂದ್ರು ಇವರ ಹೆಂಡತಿ – ಎಲ್ಲರೆದುರೇ ಗಂಡನಿಗೆ ಬಿತ್ತು ಚಪ್ಪಲಿ ಏಟು !!

0 comments
Bigg Boss

Bigg Boss: ಬಿಗ್ ಬಾಸ್ ಶೋ ಸಾಮಾಜಿಕ ಜಾಲತಾಣದಲ್ಲಿ ಬಹುತೇಕ ನೆಗೆಟಿವ್ ರೆಸ್ಪಾನ್ಸ್ ಇದ್ದರೂ ಅತೀ ಹೆಚ್ಚು ಟಿ ಆರ್ ಪಿ ಪಡೆದುಕೊಂಡಿದೆ. ಇದೀಗ ಬಿಗ್ ಬಾಸ್ (Bigg Boss) ಹಿಂದಿ 17ನೇ ಸೀಸನ್ ಹವಾ ಬಹಳ ಜೋರಾಗಿಯೇ ಇದೆ. ತಮ್ಮ ವಿಚಿತ್ರ ವರ್ತನೆಯಿಂದಲೇ ಜನರನ್ನು ಬೆರಗುಗೊಳಿಸುತ್ತಾರೆ ಅನ್ನೋದಕ್ಕೆ ಎರಡು ಮಾತಿಲ್ಲ. ಅದಲ್ಲದೆ ಮನೆಯೊಳಗಿರುವ ದಂಪತಿ ವಿಕ್ಕಿ ಜೈನ್ ಮತ್ತು ಅಂಕಿತಾ ಲೋಖಂಡೆ ತಮ್ಮ ಗಲಾಟೆಯಿಂದಲೇ ದಿನ ಕಳೆಯುತ್ತಿದ್ದಾರೆ.

ಹೌದು, ಇತ್ತೀಚಿನ ಸಂಚಿಕೆಯಲ್ಲಿ ಅಂಕಿತಾ ತನ್ನ ಪತಿ ವಿಕ್ಕಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಅಂಕಿತಾ ತನ್ನ ಪತಿಗೆ ಚಪ್ಪಲಿಯಲ್ಲಿ ಹೊಡೆದಿದ್ದೇಕೆ? ಅಲ್ಲಿ ನಿಜಕ್ಕೂ ನಡೆದಿದ್ದೇನು? ಬನ್ನಿ ನೋಡೋಣ.

ಕಾರ್ಯಕ್ರಮದಲ್ಲಿ ‘ದಿಮಾಗ್ ಕಾ ಘರ್’ನಲ್ಲಿ ವಾಸಿಸುವ ವಿಕ್ಕಿ ತನ್ನ ಆಹಾರವನ್ನು ಇಶಾ ಮಾಳವಿಯಾ ಮತ್ತು ಇತರರೊಂದಿಗೆ ಹಂಚಿಕೊಂಡಿದ್ದಾರೋ ಇಲ್ಲವೋ ಎಂಬ ಪ್ರಶ್ನೆಯನ್ನು ಮುನವ್ವರ್ ಫರುಕಿ ಕೇಳಿದ್ದಾರೆ. ಅದಕ್ಕೆ ‘ದಿಲ್ ಕಾ ಘರ್’ನಲ್ಲಿ ವಾಸಿಸುತ್ತಿರುವ ಇಶಾ ಪ್ರತಿಕ್ರಿಯಿಸಿ, ‘ಧಮ್ ಕಾ ಘರ್’ನ ಖಂಜಾಡಿ ಬ್ರೈನ್ ರೂಮ್‌’ನ ಸದಸ್ಯರು ಬೇಯಿಸಿದ ಆಹಾರವನ್ನು ಸೇವಿಸಿದ್ದಾರೆ ಎಂದು ಮುನವ್ವರ್‌’ಗೆ ತಿಳಿಸಿದರು.

ವಿಕ್ಕಿ ಆ ಆರೋಪಗಳನ್ನು ನಿರಾಕರಿಸಿದಾಗ, ನಡೆದ ಘಟನೆ ಬಗ್ಗೆ ತಿಳಿದುಕೊಂಡ ಅಂಕಿತಾ ಬ್ರೈನ್ ರೂಮ್‌’ನ ಸದಸ್ಯರು ಕೊಟ್ಟ ಆಹಾರವನ್ನು ತಿನ್ನುವುದನ್ನು ತಾನು ನೋಡಿದ್ದೇನೆ ಎಂದು ಹೇಳುತ್ತಾಳೆ.
ಇದೇ ವೇಳೆ ವಿಕ್ಕಿ ತಮಾಷೆಯಾಗಿ ಅಂಕಿತಾಳ ಕುತ್ತಿಗೆಯನ್ನು ಹಿಂದಿನಿಂದ ಹಿಡಿದು ಎಳೆದಿದ್ದಾನೆ. ಅಂಕಿತಾ ವಿಕ್ಕಿಯನ್ನು ತಳ್ಳಲು ಪ್ರಯತ್ನಿಸಿದಾಗ, ವಿಕ್ಕಿ ಆಕೆಯ ಕೈಯನ್ನು ಹಿಡಿದಿದ್ದಾರೆ. ಈ ತಮಾಷೆಯ ಸಮಯದಲ್ಲಿ ಅಂಕಿತಾ ವಿಕ್ಕಿಯನ್ನು ಹೊಡೆಯಲೆಂದು ಓಡಿದ್ದಾಳೆ. ಆದರೆ ಆತ ನಿಲ್ಲದಿದ್ದಾಗ ಅಂಕಿತಾ ತನ್ನ ಚಪ್ಪಲಿಯನ್ನು ತೆಗೆದು ವಿಕ್ಕಿಗೆ ಹೊಡೆಯಲು ಪ್ರಾರಂಭಿಸಿದ್ದಾಳೆ. ಸದ್ಯ ಇದೊಂದು ತಮಾಷೆಯ ಫೈಟ್ ಆಗಿದ್ದರೂ ಸಹ ಇದನ್ನು ನೋಡಿದ ಮನೆಮಂದಿ ಹೊಟ್ಟೆ ತುಂಬುವಷ್ಟು ನಕ್ಕಿದ್ದಾರೆ.

You may also like

Leave a Comment