Sapthami Gowda: ದೊಡ್ಮನೆ ಕುಡಿ ಯುವರಾಜ್ ಕುಮಾರ್(Youvraj Kumar) ಹಾಗೂ ಶ್ರೀದೇವಿ(Shridevi) ಡಿವೋರ್ಸ್ ವಿಚಾರ ರಾಜ್ಯದ್ಯಾಂತ ಸದ್ದು ಮಾಡಿ ತಣ್ಣಗಾಗಿದೆ. ಇವರಿಬ್ಬರ ನಡುವೆ ನಟಿ ಸಪ್ತಮಿ ಗೌಡ(Sapthami Gowda) ಬಂದಿದ್ದಾರೆ ಅನ್ನುವ ಅನುಮಾನ ಅನೇಕರಲ್ಲಿತ್ತು. ಖುದ್ದು ಶ್ರೀದೇವಿಯವರೇ ಈ ಆರೋಪವನ್ನ ಮಾಡಿದ್ದು. ಸಪ್ತಮಿ ಗೌಡ ಕೂಡ ಶ್ರೀದೇವಿ ಅವರ ವಿರುದ್ಧ ಮಾನನಷ್ಟ ಮೂಕದ್ದಮೆಯನ್ನೂ ಹೂಡಿದ್ದರು. ಈ ಬೆನ್ನಲ್ಲೇ ಈಗ ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋ(Audio) ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲ ವಿಚಾರಗಳು ಬಹಿರಂಗವಾಗಿವೆ.
ಆಡಿಯೋದಲ್ಲಿ ಏನಿದೆ?
ಹಾಯ್ ಸರ್ ನಿಮಗೆ ಈಗಾಗ್ಲೇ ವಿಷಯ ಗೊತ್ತಿರುತ್ತೆ ಏನಾಗಿದೆ ಏನು ಅಂತ. ನನ್ನ ಸೈಡ್ ಆಫ್ ದಿ ಸ್ಟೋರಿನೂ ಕೇಳಿ. ನನ್ನಿಂದ ತಪ್ಪಾಗಿಲ್ಲ ಎಂದು ನಾನು ಹೇಳ್ತಿಲ್ಲ. ಖಂಡಿತ ನನ್ನಿಂದ ತಪ್ಪಾಗಿದೆ. ನನ್ನ ಅಮ್ಮನ ಮೇಲೆ ಆಣೆ ಮಾಡಿ ಹೇಳ್ತೀನಿ ಸರ್ ನಾನು ಎಂದಿಗೂ ಸಹ ಗುರು(Guru)ನ (ಯುವ ಮೂಲ ಹೆಸರು) ಮನೆ ಬಿಟ್ಟು ಬಾ ಅಂತ ಯಾವತ್ತೂ ಹೇಳಿಲ್ಲ. ನೀವು ಬೇಕಿದ್ದರೆ ಅವನನ್ನು ಕೇಳಬಹುದು. ಯಾರನಾದರೂ ಕೇಳಬಹುದು. ನಾನು ಮೊದಲಿನಿಂದಲೂ ಹೇಳುತ್ತಲೇ ಇದ್ದೆ, ಇದೆಲ್ಲ ವರ್ಕೌಟ್ ಆಗಲ್ಲ ಎಂದು. ಇದನ್ನ ವರ್ಕೌಟ್ ಮಾಡು ಇದು ತಪ್ಪಾಗುತ್ತೆ ಬೇಡ ಎಂದು ನಾನು ತುಂಬಾ ಸಲ ಹೇಳಿದೀನಿ’ ಎಂದು ಹೇಳಿದ್ದಾರೆ.
ಅಲ್ಲದೆ ‘ಗುರು ಬಂದು ಎಲ್ಲವನ್ನೂ ಹೇಳಿಕೊಂಡ ಮೇಲೆ ನಾನು ಮುಂದುವರೆದೆ. ಅದು ನಿಮ್ಮ ಸೆಟ್ನಲ್ಲಿ ಆಯ್ತು, ಆಗಬಾರದಿತ್ತು, ಬೇಸರವಿದ್ದರೆ ದಯವಿಟ್ಟು ಕ್ಷಮಿಸಿ, ನನ್ನ ಸೈಡ್ ಆಫ್ ದಿ ಸ್ಟೋರಿ ಸಹ ದಯವಿಟ್ಟು ಕೇಳಿಸಿಕೊಳ್ಳಿ. ಯಾವತ್ತಾದರೂ ಸಪ್ತಮಿ ಇಷ್ಟು ಕೆಟ್ಟವಳ ಎಂದು ಅಂದುಕೊಳ್ಳುವ ಮುಂಚೆ ಏನಾಯಿತು ಎಂದು ನನ್ನಿಂದ ಒಮ್ಮೆ ಕೇಳಿಸಿಕೊಳ್ಳಿ. ಬೇಕಾದರೆ ನನ್ನನ್ನು ಬೈಯ್ಯಿರಿ, ಗುರು (ಯುವ)ಗೆ ಅದು ಮೊದಲ ಸಿನಿಮಾ. ನಿಮಗೂ ಸಹ ಬಹಳ ಮುಖ್ಯವಾದ ಸಿನಿಮಾ. ನನಗೆ ಗೊತ್ತಿದೆ. ಯಾರಿಗೂ ತೊಂದರೆ ಆಗಬಾರದು ಸರ್. ನಾನು ಇದನ್ನು ಇನ್ನಷ್ಟು ಕಾಂಪ್ಲೆಕ್ಸ್ ಮಾಡುವುದಿಲ್ಲ. ಬೈಯ್ಯುವುದಾದರೆ ಬೈಯ್ಯಿರಿ’ ಎಂದು ಸಪ್ತಮಿ ಅವರದ್ದು ಎನ್ನಲಾದ ಆಡಿಯೋನಲ್ಲಿ ಹೇಳಲಾಗಿದೆ’ ಎಂಬ ಮಾತುಗಳು ಆಡಿಯೋನಲ್ಲಿದೆ.
ಅಂದ್ಹಾಗೇ ಶ್ರೀದೇವಿ ಹಾಗೂ ಯುವ ದಾಂಪತ್ಯದಲ್ಲಿ ಬಿರುಕು ಮೂಡಿದ ಬಳಿಕ ಯುವ ಬಾಳಿಗೆ ಸಪ್ತಮಿ ಗೌಡ ಎಂಬ ವಾದವನ್ನೂ ಅನೇಕರು ಮಾಡುತ್ತಿದ್ದಾರೆ. ಇನ್ನೂ ‘ಯುವ’ ಸಿನಿಮಾದ ಸೆಟ್ನಲ್ಲಿಯೇ ಶ್ರೀದೇವಿ ಬಂದು ಜಗಳ ಸಹ ಮಾಡಿದ್ದರು ಎಂಬ ಮಾತು ಕೂಡ ಕೇಳಿ ಬರುತ್ತಿದೆ.ಈ ಕಾರಣಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಸಪ್ತಮಿ ಹಾಗೂ ಯುವ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದರು ಎಂಬ ಸುದ್ದಿಯೂ ಹರಿದಾಡುತ್ತಿದೆ. ಆ ಸಮಯದಲ್ಲಿ ಸಪ್ತಮಿ ಗೌಡ ಅವರು ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಈ ಕಳಿಸಿದ್ದ ಆಡಿಯೋ ಇದು ಎಂಬ ಮಾತು ಸದ್ಯಕ್ಕೆ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.
