Home » BBK-12 : ಅದೊಂದು ರೀಸನ್ ಕೊಟ್ಟಿದ್ರೆ ನಿನ್ನನ್ನು ಈಸಿಯಾಗಿ ನಾಮಿನೇಟ್ ಮಾಡುತ್ತಿದ್ದೆ – ಕಾವ್ಯ ಎದುರು ಸತ್ಯ ಬಾಯ್ಬಿಟ್ಟ ಗಿಲ್ಲಿ

BBK-12 : ಅದೊಂದು ರೀಸನ್ ಕೊಟ್ಟಿದ್ರೆ ನಿನ್ನನ್ನು ಈಸಿಯಾಗಿ ನಾಮಿನೇಟ್ ಮಾಡುತ್ತಿದ್ದೆ – ಕಾವ್ಯ ಎದುರು ಸತ್ಯ ಬಾಯ್ಬಿಟ್ಟ ಗಿಲ್ಲಿ

0 comments

BBK-12 : ಬಿಗ್ ಬಾಸ್ ಕನ್ನಡ ಸೀಸನ್ 12 ಇದೀಗ ಮುಕ್ತಾಯದ ಹಂತದಲ್ಲಿದೆ. ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಬಾಕಿ ಇವೆ. ಇದೀಗ ಈ ಕೊನೆಯ ಹಂತದಲ್ಲಿ ಎಲ್ಲರ ನೆಚ್ಚಿನ ಸ್ಪರ್ಧಿ ಆಗಿರುವ ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಬೇರೆಯವರು ಕ್ಯಾಪ್ಟನ್ ಆದ ಸಂದರ್ಭದಲ್ಲಿ ತನು ವೈಸ್ ಕ್ಯಾಪ್ಟನ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಗಿಲ್ಲಿ, ಈಗ ತಾನೇ ಕ್ಯಾಪ್ಟನ್ ಆದಾಗ ಯಾವೆಲ್ಲ ರೀತಿ ಕೆಲಸ ಕಾರ್ಯಗಳನ್ನು ನಡೆಸಬಹುದು ಎಂಬುದು ಅನೇಕರ ಕುತೂಹಲವಾಗಿತ್ತು. ಇದೀಗ ಗಿಲ್ಲಿಯ ಕ್ಯಾಪ್ಟನ್ ಕಾರ್ಯ ವೈಕರಿ ಅನೇಕರಲ್ಲಿ ಅಸಮಾಧಾನವನ್ನು ತಂದಿದೆ. 

ಈ ವಾರ ಮನೆಯ ಸದಸ್ಯರ ಕಾರಣಗಳನ್ನು ಕೇಳಿ, ಅದನ್ನು ಪರಾಮರ್ಶಿಸಿ, ಸದಸ್ಯರನ್ನು ನಾಮಿನೇಟ್‌ ಮಾಡುವ ಅಧಿಕಾರ ಗಿಲ್ಲಿ ನಟನ ಕೈಯಲ್ಲಿತ್ತು. ಆದರೆ ಕಾವ್ಯ ಹೆಸರನ್ನು ಮೂವರು ತೆಗೆದುಕೊಂಡು, ಕಾರಣಗಳನ್ನು ಕೊಟ್ಟರೂ, ಗಿಲ್ಲಿ ಮಾತ್ರ ಆ ಕಾರಣಗಳನ್ನು ಪರಿಗಣನೆ ತೆಗೆದುಕೊಳ್ಳದೇ ಕಾವ್ಯರನ್ನು ನಾಮಿನೇಟ್ ಮಾಡಲಿಲ್ಲ. ಇದು ಅಶ್ವಿನಿ, ಧನುಷ್‌, ರಾಶಿಕಾ ಶೆಟ್ಟಿ, ರಘು ಮುಂತಾದವರಿಗೆ ಬೇಸರ ಮಾಡಿಸಿದ್ದಂತೂ ಸುಳ್ಳಲ್ಲ. ಈ ವಿಚಾರವಾಗಿ ಗಿಲ್ಲಿ ಕಾವ್ಯಗೆ ತುಂಬಾ ಬಕೆಟ್ ಹಿಡಿಯಬಾರದು, ಕಾವ್ಯ ಗೆ ಫೇವರಿಸಂ ಮಾಡಬಾರದು ಎಂದೆಲ್ಲ ಅನೇಕರು ಕಮೆಂಟ್ ಮಾಡಿದ್ದಾರೆ. ಆದರೆ ಈಗ ಕೊನೆಗೂ ಗಿಲ್ಲಿ ನಟ ಕಾವ್ಯ ಬಳಿ ಬಂದು, ಆ ಒಂದೇ ಒಂದು ರೀಸನ್ ಅನ್ನು ಯಾರಾದರೂ ಹೇಳಿದ್ದರೆ ನಿನ್ನನ್ನು ಈಜಿಯಾಗಿ ಹಿಡಿದು ಹಾಕುತ್ತಿದ್ದೆ,  ಈಜಿಯಾಗಿ ನಾಮಿನೇಟ್ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

ಯಸ್, ನಾಮಿನೇಷನ್‌ ಪ್ರಕ್ರಿಯೆ ಮುಗಿದ ಬಳಿಕ ಗಾರ್ಡನ್‌ ಏರಿಯಾದಲ್ಲಿ ಕಾವ್ಯ ಜೊತೆ ಗಿಲ್ಲಿ ನಟ ಮಾತನಾಡುತ್ತಿದ್ದರು. ಆಗ ಕಾವ್ಯ ನಾಮಿನೇಷನ್‌ ಮಾಡುವುದು ನನಗೆ ಏನೂ ಅನ್ನಿಸುವುದಿಲ್ಲ. ಮಾಡಿದಾಗ, ನಮಗೂ ಒಂದು ಕ್ಲಾರಿಟಿ ಸಿಗುತ್ತದೆ. ಜನ ನಮ್ಮನ್ನು ಇಷ್ಟಪಡ್ತಾ ಇದ್ದಾರೆ, ಸೇವ್‌ ಮಾಡ್ತಿದ್ದಾರೆ ಎಂದು ಖುಷಿಯಾಗುತ್ತದೆ ಎಂದು ಹೇಳಿದ್ದಾರೆ. ಆಗ ಗಿಲ್ಲಿ, ನಾನು ಒಂದು ಮಾತು ಹೇಳ್ತಿನಿ ಕೇಳು, ಸೂಕ್ತ ಕಾರಣ ಎಂದರೆ ಏನು ಗೊತ್ತಾ? ಕಳೆದ ವಾರದ ಫ್ಯಾಮಿಲಿ ವೀಕ್‌ ಅಲ್ಲಿ ನಡೆದ ಘಟನೆಯನ್ನು ಮೆನ್ಷನ್‌ ಮಾಡಿದ್ರೆ, ನಿನ್ನ ಆರಾಮಾಗಿ ಹಿಡಿದು ಹಾಕಬಹುದಿತ್ತು ಅಂದಿದ್ದಾರೆ. ಯಾರಾದರೂ ಒಬ್ಬರು ಅದನ್ನು ಹೇಳಿಯೇ ಹೇಳ್ತಾರೆ ಅಂತ ಗೆಸ್ ಮಾಡಿದ್ದೆ ಅಂತ ಕಾವ್ಯ ಅದಕ್ಕೆ ಉತ್ತರಿಸಿದ್ದಾರೆ.

ಕಳೆದ ವಾರದ ನಡೆದ ಫ್ಯಾಮಿಲಿ ರೌಂಡ್‌ನಲ್ಲಿ ಕಾವ್ಯ ಮನೆಯವರಿಂದ ಬಿಗ್‌ ಬಾಸ್‌ನ ಮೂಲ ನಿಯಮ ಉಲ್ಲಂಘನೆ ಆಗಿತ್ತು. ಹಾಗಾಗಿ, ಕಾವ್ಯ ಅಮ್ಮ ಮತ್ತು ತಮ್ಮನನ್ನು ಕೂಡಲೇ ಹೊರಗೆ ಕಳುಹಿಸಲಾಗಿತ್ತು. ಈ ವಿಚಾರವನ್ನು ಯಾರಾದರೂ ನಾಮಿನೇಷನ್‌ಗೆ ಕಾರಣವಾಗಿ ನೀಡಿದ್ದರೆ, ಕಾವ್ಯ ಅವರನ್ನು ಗಿಲ್ಲಿ ನಾಮಿನೇಟ್‌ ಮಾಡುತ್ತಿದ್ದರು. ಅದನ್ನೀಗ ಅವರೇ ಹೇಳಿಕೊಂಡಿದ್ದಾರೆ.

You may also like