Home » Aunty Anasuya: ಇನ್ಮುಂದೆ ‘ಆಂಟಿ’ ಅಂದ್ರೆ ಕೇಸ್ ಹಾಕ್ತಾಳಂತೆ ಈ ನಟಿ| ಅಷ್ಟಕ್ಕೂ ಆಂಟಿ ಅಂದ್ರೆ ಡಿಕ್ಷನರಿ ಅರ್ಥವೇನು?

Aunty Anasuya: ಇನ್ಮುಂದೆ ‘ಆಂಟಿ’ ಅಂದ್ರೆ ಕೇಸ್ ಹಾಕ್ತಾಳಂತೆ ಈ ನಟಿ| ಅಷ್ಟಕ್ಕೂ ಆಂಟಿ ಅಂದ್ರೆ ಡಿಕ್ಷನರಿ ಅರ್ಥವೇನು?

by ಹೊಸಕನ್ನಡ
1 comment
Aunty Anasuya

Aunty Anasuya: ಆಂಟಿ ಅಂತ ಕರೆದರೆ ಹುಷಾರ್ ಎಂದು ತೆಲುಗು ಚಿತ್ರೋದ್ಯಮದ ನಟಿ, ನಿರೂಪಕಿ ಅನಸೂಯ ಭಾರದ್ವಾಜ್ (Anasuya Bhardwaj) ದಬಾಯಿಸಿದ್ದಾರೆ. ಆಂಟಿ(Aunty Anasuya) ಅನ್ನುವುದು ಅವಮಾನದ ವಿಷ್ಯ. ಆಂಟಿ ಎಂಬ ಪದವು ಕಿರುಕುಳದ ವ್ಯಾಪ್ತಿಗೆ ಬರುತ್ತದೆ, ಆ ರೀತಿಯಲ್ಲಿ ಕಾಮೆಂಟ್ ಮಾಡುವವರಿಗೆ ಕಾನೂನು (Leagal action) ಕ್ರಮಕ್ಕೆ ಮುಂದಾಗುತ್ತೇನೆ ಎಂದಿದ್ದಾಳೆ.

ಹೌದು, ನಟಿ ಕಮ್ ನಿರೂಪಕಿ ಅನಸೂಯ ಭಾರದ್ವಾಜ್ ಅತೀ ಹೆಚ್ಚು ಟ್ರೋಲ್ ಆಗುವವರ ಸಾಲಿನಲ್ಲಿ ಸದಾ ಮುಂದು. ಆಕೆ ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಪೋಸ್ಟ್ ಹಾಕುತ್ತಾ, ತಮ್ಮ ಹಿಂಬಾಲಕರಿಗೆ ಮನರಂಜನೆ ನೀಡುತ್ತಾ ಇರ್ತಾಳೆ. ಆದ್ರೆ ಕೆಲವು ವಿಷಯಗಳಿಗೆ ಆಕೆ ತುಂಬಾ ಕಿರಿಕ್ ಪ್ರದರ್ಶಿಸುತ್ತಾ ಇರ್ತಾಳೆ. ಅವಮಾನ ಆದ್ರೆ ಆಕೆ ತಿರುಗಿ ಬೀಳ್ತಾಳೆ. ಆಕೆ ಒಂದು ರೀತಿಯ ಗಟ್ಟಿಗಿತ್ತಿ ಕೂಡಾ. ಆದ್ರೆ ಆಕೆ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಕಿರಿಕ್ ಮಾಡ್ತಾ ಇರ್ತಾಳೆ.

ಮೊನ್ನೆ ಕೂಡಾ ಹಾಗೆಯೇ ಆಯ್ತು. ಆಕೆ ಪೋಸ್ಟ್ ಮಾಡಿದ ಫೋಟೋಗಳಿಗೆ ಕೆಲ ದಿನಗಳಿಂದ ಬೇಜಾನ್ ನೆಗೆಟಿವ್ ಕಾಮೆಂಟ್ ಬರ್ತಿದೆ. ಮೊನ್ನೆ ಕೆಲವರಂತೂ. ಆಕೇನ ಕಿಚಾಯಿಸಲು ‘ಆಂಟಿ’ (Aunty) ಎಂದು ಕರೆದಿದ್ದಾರೆ. ಈ ‘ಆಂಟಿ ‘ ಪದ ಕೇಳಿಯೇ ಅನಸೂಯಾ ‘ anty ‘ ಆಗಿದ್ದಾಳೆ. ಆಂಟಿ ಈ ಪದವನ್ನು ಹೇಳುವುದರ ಹಿಂದಿನ ಉದ್ದೇಶದ ಬಗ್ಗೆ ಆಕೆ ಮಾತನಾಡಿದ್ದಾರೆ.

ಆಂಟಿ ಎಂಬ ಪದವು ಕಿರುಕುಳದ ವ್ಯಾಪ್ತಿಗೆ ಬರುತ್ತದೆ. ಆ ರೀತಿಯಲ್ಲಿ ಕಾಮೆಂಟ್ ಮಾಡುವವರಿಗೆ ಕಾನೂನು (Complaint) ರೀತಿಯ ಕ್ರಮಕ್ಕೆ ಮುಂದಾಗುತ್ತೇನೆ. ನೀವು ಹಾಗೆ ಕರೆಯುವುದರ ಹಿಂದಿನ ಉದ್ದೇಶವನ್ನು ನಾನು ಬಲ್ಲೆ. ಹಾಗಾಗಿ ಎಚ್ಚರಿಕೆಯಿಂದ ಕಾಮೆಂಟ್ ಮಾಡಿ ಎಂದು ಹೇಳಿದ್ದಾರೆ. ಯಾರಿಗೂ ಆಂಟಿ ಅಂತ ಕರೆಯಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

ಕೆಲವರಂತೂ ಈ ರೀತಿ ಹೇಳಿದ ಮೇಲೆ ಇನ್ನೂ ಜಾಸ್ತಿ ಕೀಟಲೆ ಶುರು ಮಾಡಿದ್ದಾರೆ. ಅನಸೂಯರ ಹಳೆಯ ಫೋಟೋಗಳನ್ನು ಹುಡುಕಿ, ಆ ಫೋಟೋಗಳಿಗೆ ಆಂಟಿ ಎಂದು ಬರೆದು ಪೋಸ್ಟ್ ಮಾಡುತ್ತಿದ್ದಾರೆ. ಈ ಎಲ್ಲ ನಡೆಯನ್ನೂ ತಾವು ಗಂಭೀರವಾಗಿ ತೆಗೆದುಕೊಂಡು ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಅಷ್ಟಕ್ಕೂ ಈ ರೀತಿಯಲ್ಲಿ ‘ ಆಂಟಿ ‘ ಕರೆದರೆ ಕೇಸ್ ದಾಖಲಿಸುವುದಾಗಿಯೂ ಆಕೆ ತಿಳಿಸಿದ್ದಾರೆ. ಹಾಗಾದ್ರೆ ಆಂಟಿ ಪದದ ಅರ್ಥ ಏನು ? ಆಂಟಿ ಅಂದಾಗ ಅನಸೂಯಾ ಮೇಡಂ ಅದುರಿ ಬೀಳಲು ಕಾರಣ ಏನಿರಬಹುದು ?

ನಮಗೂ ಈ ಬಗೆಗಿನ ಕುತೂಹಲ ಮೂಡಿ ಡಿಕ್ಷನರಿ ನೋಡಿದರೆ ಆಂಟಿ ಅಂದರೆ ಚಿಕ್ಕಮ್ಮ ಎಂದು ಅರ್ಥ. ಚಿಕ್ಕಮ್ಮ ಎಂದರೆ ಯಾಕೆ ಕೋಪಗೊಳ್ಳಬೇಕು ? ಅದು ಬಿಡಿ, ಕೇಂಬ್ರಿಡ್ಜ್ ಡಿಕ್ಷನರಿಯ ಪ್ರಕಾರ ಆಂಟಿ ಅಂದರೆ ” Any female adult that you know who is older than you ” ಅಂದರೆ, ನಿಮಗಿಂತ ಹಿರಿಯ ಹೆಂಗಸನ್ನು ಆಂಟಿ (Auntie) ಅಂದು ಕರೆಯುತ್ತಾರೆ. ಇನ್ಮುಂದೆ, ಯಾರನ್ನೇ ಆದ್ರೂ ಸರಿ, ಕಾನ್ಫಿಡೆಂಟ್ ಆಗಿ ಆಂಟಿ ಎಂದು ಕರೆಯಿರಿ
ಆದ್ರೆ ಹಾಗೆ ಕರೆಯುವ ಮೊದಲು ನೀವು ಆಕೆಗಿಂತ ಚಿಕ್ಕವರು ಎಂದು ಖಚಿತಪಡಿಸಿಕೊಳ್ಳಿ. ಯಾರಾದರೂ ಕೇಸು.ಹಾಕಿದರೆ ಡಿಕ್ಷನರಿ ತೋರಿಸಿದರಾಯ್ತು !!!

ಇದನ್ನೂ ಓದಿ: Famous Pizzas : ಜಗತ್ತಿನ 5 ಜನಪ್ರಿಯ ಪಿಜ್ಜಾ ಲಿಸ್ಟ್ ಇಲ್ಲಿದೆ! ನಿಮ್ಮ‌ ಫೆವರೇಟ್ ಇದೆಯಾ?

You may also like

Leave a Comment