Home » ಭಾರತದ ‘ಕೂ’ ಖಾತೆ ರದ್ದುಗೊಳಿಸಿದ ಟ್ವಿಟರ್

ಭಾರತದ ‘ಕೂ’ ಖಾತೆ ರದ್ದುಗೊಳಿಸಿದ ಟ್ವಿಟರ್

0 comments

ಎಲಾನ್ ಮಸ್ಕ್ ಒಡೆತನದ ಟ್ವಿಟರ್ (Twitter), ಭಾರತೀಯ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ(Koo) ಖಾತೆಯನ್ನು ಅಮಾನತುಗೊಳಿಸಿದೆ. ಬಳಕೆದಾರರ ಪ್ರಶ್ನೆಗಳಿಗಾಗಿ ಸ್ಥಾಪಿಸಲಾದ @kooeminence ಟ್ವಿಟರ್ ಹ್ಯಾಂಡಲ್ ಅನ್ನು ಅಮಾನತುಗೊಳಿಸಲಾಗಿದೆ.

ಬಿಲಿಯನೇರ್ ಎಲೋನ್ ಮಸ್ಕ್ ಒಡೆತನದ ಟ್ವಿಟರ್ ನ್ಯೂಯಾರ್ಕ್ ಟೈಮ್ಸ್, ಸಿಎನ್‌ಎನ್ ಮತ್ತು ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ಹಲವಾರು ಪ್ರಮುಖ ಜಾಗತಿಕ ಪತ್ರಕರ್ತರ ಖಾತೆಗಳನ್ನು ಅಮಾನತುಗೊಳಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಖಾತೆಯನ್ನು ಅಮಾನತುಗೊಳಿಸಿದ ಕುರಿತಂತೆ ಸ್ವದೇಶಿ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನ ಸಹ ಸಂಸ್ಥಾಪಕ ಮಯಾಂಕ್ ಬಿಡವಟ್ಕಾ ಸರಣಿ ಟ್ಚೀಟಿ ಮಾಡಿದ್ದು, ಎಲಾನ್ ಮಸ್ಕ್ ಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.ಮಾಸ್ಟೋಡಾನ್ ಟ್ವಿಟರ್‌ನ ಸಾಮಾಜಿಕ ಮಾಧ್ಯಮದ ಪ್ರತಿಸ್ಪರ್ಧಿಯಾಗಿದ್ದಾರೆ.

ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ಪೋಸ್ಟ್ ಮಾಡುವುದು ಡಾಕ್ಸಿಂಗ್ ಅಲ್ಲ. ಲಿಂಕ್‌ಗಳನ್ನು ಪೋಸ್ಟ್ ಮಾಡಿದ ಪತ್ರಕರ್ತರು ಯಾವುದೇ ತಪ್ಪನ್ನು ಮಾಡಿಲ್ಲ. ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗೆ ಲಿಂಕ್ ಅನ್ನು ಪೋಸ್ಟ್ ಮಾಡುವುದು ಆನ್‌ಲೈನ್ ಲೇಖನಕ್ಕೆ ಲಿಂಕ್ ಅನ್ನು ಪೋಸ್ಟ್ ಮಾಡುವ ರೀತಿಯಲ್ಲಿ ಡಾಕ್ಸ್ ಮಾಡುವುದು ಅಲ್ಲ ಎಂದು ಹೇಳಿದ್ದಾರೆ.

ಪತ್ರಕರ್ತರಿಗೆ ಉತ್ತರಿಸದೆ ಖಾತೆಗಳನ್ನು ತಡಗೆದು ಹಾಕುವುದು ಸರಿಯಲ್ಲ, ನಿಮಗೆ ಸರಿಹೊಂದುವಂತೆ ನೀತಿಗಳನ್ನು ರಚಿಸುವುದು ಕೆಟ್ಟದು. ಪ್ರತಿ ದಿನವೂ ನಿಮ್ಮ ನಿಲುವನ್ನು ಬದಲಾಯಿಸುವುದು ಅಸಮಂಜಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

You may also like

Leave a Comment