Janhvi Kapoor: ಬಾಲಿವುಡ್ (Bollywood) ಎವರ್‌ಗ್ರೀನ್ ನಟಿ ಜಾನ್ವಿ ಕಪೂರ್ (Janhvi Kapoor) ಸಾಮಾಜಿಚ್ಚಕ ಜಾಲತಾನದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಹೊಸ ಫೋಟೋ ಅಪ್ಲೋಡ್ ಮಾಡಿದ್ದಾರೆ. ಜಾಹ್ನವಿ ಟ್ರೆಂಡಿ ಸ್ಟೈಲ್ ಆಗಲಿ, ಸಾಂಪ್ರದಾಯಿಕ ಉಡುಗೆಯಾಗಲಿ ಯಾವುದೇ ಡ್ರೆಸ್ ತೊಟ್ಟರು ತುಂಬಾ ಮುದ್ದಾಗಿ ಕಾಣುತ್ತಾರೆ.

ಇದೀಗ ನಟಿ ಆರೇಂಜ್ ಮತ್ತು ಕೆಂಪು ಕಾಂಬಿನೇಷನ್‌ನ ಸೀರೆ ಧರಿಸಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. ಮನೀಶ್ ಮಲ್ಹೋತ್ರ ಡಿಸೈನರ್ ಮಾಡಿರುವ ಸೀರೆ ಇದಾಗಿದ್ದು ಸಖತ್ ಸಿಂಪಲ್ ಲುಕ್ ನೀಡಿದೆ.
ಮತ್ತೊಂದು ಕೆಂಪು ಸೀರೆಯಲ್ಲಿ ಜಾನ್ವಿ ಕಪೂರ್ (Jhanvi Kapoor) ಮಿಂಚಿದ್ದಾರೆ. ಎರಡು ಕಿವಿಯಲ್ಲೂ ಎರಡು ಪಿಂಕ್ ಹೂವ ಧರಿಸಿ ಮಿಂಚಿದ್ದಾರೆ. ಈ ಸೀರೆಗೆ ಜಾನ್ವಿ ಕಪೂರ್ ಬ್ಲೌಸ್ ಧರಿಸಿಲ್ಲ. ಸದ್ಯ ಈ ಫೋಟೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ.

ಅಂದಹಾಗೆ ಜಾಹ್ನವಿ ಕಪೂರ್ ಶ್ರೀದೇವಿಯ ಮಗಳು ಎಂದು ಎಲ್ಲರಿಗೂ ತಿಳಿದಿದೆ. ‘ಧಡಕ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಜಾಹ್ನವಿ ಎಂಟ್ರಿಯಾದರು. ಈ ಹಿಟ್ ಚಿತ್ರದ ನಂತರ ಜಾಹ್ನವಿ ಹಲವಾರು ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ತಮ್ಮ ಹೊಸ ಫೋಟೋಗಳನ್ನು ಶೇರ್ ಮಾಡುತ್ತ ಹುಡುಗರ ಹೃದಯ ಎದೆಬಡಿತ ಹೆಚ್ಚಿಸುತ್ತಾರೆ.

