Home » Kamal Haasan: ಇಂದು ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ ಕಮಲ್‌ ಹಾಸನ್‌ ನಟನೆಯ ʼಇಂಡಿಯನ್‌ʼ ಸಿನಿಮಾ

Kamal Haasan: ಇಂದು ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ ಕಮಲ್‌ ಹಾಸನ್‌ ನಟನೆಯ ʼಇಂಡಿಯನ್‌ʼ ಸಿನಿಮಾ

0 comments
Kamal Haasan

Kamal Haasan: ಎಸ್.‌ ಶಂಕರ್‌ ನಿರ್ದೇಶನದ ಸಿನಿಮಾ ನಟ ಕಮಲ್‌ ಹಾಸನ್‌ ಅವರ ಚಿತ್ರ ಇಂಡಿಯನ್‌ 2 (Indian 2 Box Office) ಭಾರತದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಈ ಸಿನಿಮಾ ಅಭಿಮಾನಿಗಳನ್ನು ತನ್ನತ್ತ ಸೆಳೆಯುವಲ್ಲಿ ವಿಫಗೊಂಡಿದ್ದು, ವಿಮರ್ಶಕರು, ಪ್ರೇಕ್ಷಕರಿಂದ ನೆಗೆಟಿವ್‌ ಪ್ರತಿಕ್ರಿಯೆ ಪಡೆದುಕೊಂಡಿದೆ.

ಅಂದ ಹಾಗೆ ಇಂಡಿಯನ್‌ 2 ಡಿಜಿಟಲ್‌ ಸ್ಟ್ರೀಮಿಂಗ್‌ ಹಕ್ಕನ್ನು NETFLIX ಪಡೆದುಕೊಂಡಿದೆ. ಇಂಡಿಯನ್‌ -2 ಗಿಂತ 28 ವರ್ಷಗಳ ಹಿಂದೆ ಬಂದಿದ್ದ ಪ್ರೀಕ್ವೆಲ್‌ ನ್ನು ಜನ ತುಂಬಾ ಇಷ್ಟ ಪಡುತ್ತಿದ್ದಾರೆ. ಇಂಡಿಯನ್‌ʼ ಸಿನಿಮಾ ನೋಡದವರು ಇದೀಗ ನೋಡಲು ಬಯಸುತ್ತಿದ್ದಾರೆ. ನೆಟ್‌ಫಿಕ್ಸ್‌ ನಲ್ಲಿ ಸಿನಿಮಾ ಸ್ಟ್ರೀಮಿಂಗ್‌ ಆಗುತ್ತಿದೆ ಎನ್ನಲಾಗಿದೆ.

ಇಂಡಿಯನ್‌ ಪ್ರೀಕ್ವೆಲ್‌ ಸಿನಿಮಾ ನೋಡಬಹುದು, ಆದರೆ ಸೀಕ್ವೆಲ್‌ ಸಿನಿಮಾ ನೋಡಲು ಆಗುವುದಿಲ್ಲ ಎಂದಿದ್ದಾರೆ. ಇವೆಲ್ಲದವರ ನಡುವೆ ಕೆಲವರು ʼಇಂಡಿಯನ್‌ʼ ಸಿನಿಮಾ ನೋಡಬೇಕು ಎಂದು ಬಯಸುತ್ತಿದ್ದು, ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್‌ ಆಗುತ್ತಿದೆ. ಇಂದು ರಾತ್ರಿಯಿಂದ (ಜುಲೈ 14) ಅಂದರೆ ಇಂದು ರಾತ್ರಿಯಿಂದಲೇ ʼಇಂಡಿಯನ್‌ʼ ಸಿನಿಮಾ ರಿಲೀಸ್‌ ಆಗಲಿದೆ. 4K ವರ್ಷನ್‌ ನಲ್ಲಿ ನೋಡಲು ಸಿಗಲಿದೆ ಎನ್ನಲಾಗಿದೆ.
ಇಂಡಿಯನ್‌ -2 ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬರಲಿದೆ. ಆಗಸ್ಟ್‌ 15ಕ್ಕೆ ಸ್ಟ್ರೀಮಿಂಗ್‌ ಆಗಲಿದೆ ಎನ್ನಲಾಗಿದೆ.

https://twitter.com/Rockerz2z/status/1812053268618731584

You may also like

Leave a Comment