Home » Bigg Boss Kannada : ಬಿಗ್‌ಬಾಸ್‌ ಫೈನಲ್‌ ವಾರ | 6 ಮಂದಿಯಲ್ಲಿ 5 ಮಂದಿಗೆ ಮಾತ್ರ ಅವಕಾಶ, ಈ ಬಾರಿ ರೂಪೇಶ್‌ ಶೆಟ್ಟಿ ಹೊರ ಹೋಗಿದ್ದಾ?

Bigg Boss Kannada : ಬಿಗ್‌ಬಾಸ್‌ ಫೈನಲ್‌ ವಾರ | 6 ಮಂದಿಯಲ್ಲಿ 5 ಮಂದಿಗೆ ಮಾತ್ರ ಅವಕಾಶ, ಈ ಬಾರಿ ರೂಪೇಶ್‌ ಶೆಟ್ಟಿ ಹೊರ ಹೋಗಿದ್ದಾ?

0 comments

ಮನರಂಜನೆಯ ಉಣಬಡಿಸುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ದೊಡ್ಮನೆಯ ಆಟಗಳು ಜನರಿಗೆ ಕುತೂಹಲ ಮೂಡಿಸುತ್ತಾ ಮಂದೆನಾಗಲಿದೆಯೋ ಎಂಬ ಕಾತುರ ಅಭಿಮಾನಿಗಳಲ್ಲಿ ಮನೆ ಮಾಡಿದೆ. ‘ಬಿಗ್ ಬಾಸ್​ ಕನ್ನಡ ಸೀಸನ್ 9’ (BBK 9) ಕೊನೆಯ ಹಂತಕ್ಕೆ ತಲುಪಿದೆ. ಇದೀಗ, ಬಿಗ್ ಬಾಸ್ ಫಿನಾಲೆಗೆ 6ರಲ್ಲಿ ಐವರಿಗೆ ಮಾತ್ರ ಅವಕಾಶ ಇರುವುದರಿಂದ ಹೊರ ಹೋಗಿದ್ದು ಯಾರು ಎಂಬ ಪ್ರಶ್ನೆ ಸಹಜವಾಗಿ ಅಭಿಮಾನಿಗಳಲ್ಲಿ ಮೂಡಿದೆ.

ಬಿಗ್ ಬಾಸ್ ಸೀಸನ್ 9ರ ಫಿನಾಲೆ ವೀಕ್ ನಡೆಯುತ್ತಿದ್ದು, ಇರುವ 6 ಜನ ಅಭ್ಯರ್ಥಿಗಳಲ್ಲಿ ಇವತ್ತು ದೊಡ್ಮನೆ ಯಿಂದ ಒಬ್ಬರು ಹೊರ ಬೀಳಲಿದ್ದಾರೆ. ಫಿನಾಲೆಯಲ್ಲಿ 5 ಜನರಿಗೆ ಮಾತ್ರ ಅವಕಾಶ ಇದ್ದು, ಹೀಗಾಗಿ, ಇಂದು ಒಬ್ಬರ ಆಟ ಕೊನೆಗೊಳ್ಳಲಿದ್ದು, ಇಂದು ಒಬ್ಬ ಅಭ್ಯರ್ಥಿ ದೊಡ್ಮನೆ ಆಟದಿಂದ ಔಟ್ ಆಗಲಿದ್ದಾರೆ ಎಂದು ಬಿಗ್ ಬಾಸ್ ಮನೆಯವರಿಗೆ ಮಾಹಿತಿ ನೀಡಿದ್ದಾರೆ.

ಯಾವುದೇ ಹಂತದಲ್ಲಿ ವೇದಿಕೆ ಮೇಲೆ ಬಂದ ಸಂದರ್ಭ ಒಬ್ಬ ಸದಸ್ಯ ಕಾಣಿಸದೇ ಇದ್ದಲ್ಲಿ ಎಲಿಮಿನೇಷನ್ ಪ್ರಕ್ರಿಯೆ ಮುಗಿಯಲಿದೆ ಎಂಬ ಅಚ್ಚರಿಯ ವಿಷಯ ಬಿಗ್ ಬಾಸ್ ಹೇಳಿದ್ದು, ಹೀಗಾಗಿ ದೊಡ್ಮನೆಯಲ್ಲಿ ಉಳಿದ ಸದಸ್ಯರಲ್ಲಿ ಆತಂಕ ಹೆಚ್ಚಾಗಿದೆ.

ಒಮ್ಮೆ ಔಟ್ ಆಗಿ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ದೀಪಿಕಾ ದಾಸ್ ಆಟದ ವೈಖರಿ ಮೂಲಕ ಎಲ್ಲರ ಗಮನ ಸೆಳೆದು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.ಮಾತುಗಳು ಕಡಿಮೆ ಬರುತ್ತಿವೆ ಎಂದು ದಿವ್ಯಾ ಉರುಡುಗ ಹೇಳಿಕೊಂಡಿದ್ದು, ಅವರು 9 ಎಂಬ ವೇದಿಕೆಯಿಂದ ಕೆಳಗೆ ಹೋಗುತ್ತಿದ್ದು, ಹೀಗಾಗಿ ಮನೆಯ ಸದಸ್ಯರೆಲ್ಲ ಬೇಜಾರಾಗಿದ್ದಾರೆ.

ಈ ನಡುವೆ ಬಿಗ್ ಬಾಸ್ ಮನೆ ಯಿಂದ ಬದುಕುವ ಪಾಠ ಕಲಿತಿರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು ಆರ್ಯವರ್ಧನ್ ಗುರೂಜಿ, ಕೆಳಗೆ ಹೋಗಿ ಮೇಲೆ ಬಂದಿದ್ದು, ಮನೆಯಲ್ಲಿ ಉಳಿಯುವ ಮೂಲಕ ಸ್ಥಾನ ಪಡೆದಿದ್ದಾರೆ.

ಈ ನಡುವೆ ರೂಪೇಶ್ ಶೆಟ್ಟಿ ಮನೆಯಿಂದ ಹೊರ ಬೀಳಲಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಹೌದು!!?ನಾನು ಹೋದ್ರೆ ನನ್ನ ಮಿಸ್ ಮಾಡಿಕೊಳ್ಳಿ ಎಂದು ರೂಪೇಶ್ ಶೆಟ್ಟಿ ಕೆಳಗೆ ಹೋಗಿದ್ದು, ಆ ಬಳಿಕ ಮೇಲೆ ಬಂದಿಲ್ಲ. ಇದೊಂದು ಟ್ವಿಸ್ಟ್ ಎಂದು ಹೇಳಿದ್ದು ಓ ಮೈ ಗಾಡ್ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ, ರೂಪಿ ಔಟ್ ಆಗಿರುವ ಸಂಭವ ಇದ್ದು, ಆದರೆ ಹೊರ ಬಿದ್ದಿರುವ ಸದಸ್ಯ ಎಂಬ ಪ್ರಶ್ನೆಗೆ ಉತ್ತರ ಸದ್ಯ ಲಭ್ಯವಾಗಿಲ್ಲ.

ಪ್ರೋಮೋದ ಪ್ರಕಾರ ಮನೆಯಲ್ಲಿ ಗುರೂಜಿ, ರಾಜಣ್ಣ, ರಾಕೇಶ್ ಇದ್ದು, ಇನ್ನಿಬ್ಬರು ಸದಸ್ಯರು ಯಾರು ಎಂಬ ಗುಟ್ಟು ರಟ್ಟಾಗಿಲ್ಲ. ಆದರೆ ಗುರೂಜಿ ಮಾತ್ರ ಹೊರ ಹೋದ ಸದಸ್ಯನಿಂದ ಬೇಸರ ಗೊಂಡಿದ್ದು ಕಣ್ಣೀರು ಹಾಕಿದ್ದಾರೆ. ಹೀಗಾಗಿ, ರೂಪೇಶ್ ಶೆಟ್ಟಿಯೇ ಔಟ್ ಆಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತಾದ ಮಾಹಿತಿ ಇಂದಿನ ಸಂಚಿಕೆಯ ಮೂಲಕ ತಿಳಿಯಬೇಕಾಗಿದೆ.

You may also like

Leave a Comment