Home » Kantara OTT Release : ಬಂದೇ ಬಿಡ್ತು ಪ್ರೈಮ್ ನಲ್ಲಿ ಕಾಂತಾರ !

Kantara OTT Release : ಬಂದೇ ಬಿಡ್ತು ಪ್ರೈಮ್ ನಲ್ಲಿ ಕಾಂತಾರ !

0 comments

ಎಲ್ಲೆಡೆ ಸಂಚಲನ ಮೂಡಿಸಿದ್ದ ಕನ್ನಡದ ಹಿಟ್ ಸಿನಿಮಾ ಕಾಂತಾರ ಓಟಿಟಿಯಲ್ಲಿ ಯಾವಾಗ ಬರುತ್ತೆ ಎಂದು ಕಾತುರದಿಂದ ಎದುರು ನೋಡುತ್ತಿದ್ದಾರೆ. ಈ ನಡುವೆ ಗಾಳಿ ಸುದ್ದಿಗಳು ಹರಿದಾಡುತ್ತಿದ್ದು, ಅಮೆಜಾನ್ ಪ್ರೈಮ್​ನಲ್ಲಿ ಸಿನಿಮಾ ನೋಡಬಹುದಾದರೂ ಕೂಡ ಕೆಲವೊಂದು ಕಂಡೀಷನ್ಸ್ ಗಳು ಅಪ್ಲೈ ಆಗುತ್ತವೆ ಎನ್ನಲಾಗುತ್ತಿದೆ.

ಕಾಂತಾರ ಸಿನಿಮಾ ಕರ್ನಾಟಕದಲ್ಲಿ ಮಾತ್ರವಲ್ಲದೆ, ಹೊರ ದೇಶದಲ್ಲಿ ಸಹ ಕರಾವಳಿಯ ಕಲೆಯನ್ನು ಬಿಂಬಿಸಿ , ದೈವಿಕ ಶಕ್ತಿ, ಆಚರಣೆಯ ಬಗ್ಗೆ ನಂಬಿಕೆಯನ್ನು ಎಲ್ಲೆಡೆ ಪಸರಿಸಿದೆ. ಅಷ್ಟು ಮಾತ್ರವಲ್ಲದೆ ಬಾಕ್ಸ್ ಆಫೀಸ್ ನಲ್ಲಿಯೂ ದೊಡ್ಡ ಮಟ್ಟದ ಕಮಾಯಿ ಮಾಡಿ ಅಲ್ಲು ಅರ್ಜುನ್ ಅವರ ಪುಷ್ಪ ದಿ ರೈಸ್, ಯಶ್ ಅವರ ಕೆಜಿಎಫ್ 2 ಮತ್ತು ಇತರ ಬ್ಲಾಕ್‌ಬಸ್ಟರ್ ಹಿಟ್‌ಗಳ ದಾಖಲೆಗಳನ್ನು ಕೂಡ ಪುಡಿ ಮಾಡಿದ್ದು ಗೊತ್ತಿರುವ ವಿಚಾರವೇ!!.

ಈ ಚಿತ್ರವನ್ನು 14ರಿಂದ 16 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಚಿತ್ರ ಗಳಿಸಿದ ಹಣ ಒಟ್ಟು 400 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ಈಗ ಎಲ್ಲರ ಚಿತ್ತ ಇರುವುದು ಒಟಿಟಿ ರಿಲೀಸ್ ಬಗ್ಗೆ ಮಾತ್ರ.

ಹೀಗಾಗಿ, ಸಿನಿಮಾ ನವೆಂಬರ್ ಆರಂಭದಲ್ಲಿಯೇ ಒಟಿಟಿಯಲ್ಲಿ ರಿಲೀಸ್ ಆಗುವುದರಲ್ಲಿತ್ತು. ಆದರೆ ಸಿನಿಮಾದ ದೊಡ್ಡಮಟ್ಟಿನ ಯಶಸ್ಸು ಎಲ್ಲವನ್ನೂ ಬದಲಾಯಿಸಿ ಬಿಟ್ಟಿದೆ.

ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದ್ದು, ಕಾಂತಾರ ನವೆಂಬರ್ 18, 2022 ರಂದು ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸುವ ಸಾಧ್ಯತೆ ದಟ್ಟವಾಗಿದೆ.

ಆದರೆ ಇಲ್ಲಿ ಷರತ್ತು ಇದ್ದು, ನೀವು ಅಮೆಜಾನ್ ಪ್ರೈಮ್ ಸಬ್ಸ್ಕ್ರೈಬ್ ಮಾಡಿದ್ದರೂ ಕೂಡ ನೀವು ಅದನ್ನು ಉಚಿತವಾಗಿ ವೀಕ್ಷಿಸಲು ಸಾಧ್ಯವಿಲ್ಲ ಬದಲಿಗೆ, ಸ್ವಲ್ಪ ಹಣವನ್ನು ಪಾವತಿಸಿ ನೀವು ಸಿನಿಮಾ ರೆಂಟ್​ಗೆ ಪಡೆಯಬೇಕಾಗುತ್ತದೆ ಎನ್ನಲಾಗುತ್ತಿದೆ.

ಆದ್ರೇ, ನೀವೇನೇ ಕಂಡೀಷನ್ಸ್ ಇಟ್ಟರೂ ಸರಿ ಸಿನಿಮಾ ಮತ್ತೊಮ್ಮೆ, ಮಗದೊಮ್ಮೆ ನೋಡಲೇಬೇಕು ಎಂದು ಅಭಿಮಾನಿಗಳು ಕಾಯುತ್ತಿದ್ದು, ದಿನದಿಂದ ದಿನಕ್ಕೆ ಕಾಂತಾರ ಹವಾ ಹೆಚ್ಚುತ್ತಲೇ ಇದೆ.

You may also like

Leave a Comment