Home » KGF Actress: “ಹಾಸಿಗೆಯ ಸುಖಕ್ಕಾಗಿ ವೃತ್ತಿ ಜೀವನವನ್ನೇ ಹಾಳು ಮಾಡಿದ್ದಾರೆ”: ಕೆಜಿಎಫ್ ನಟಿ ಬಿಚ್ಚಿಟ್ಟ ಕರಾಳ ಸತ್ಯ

KGF Actress: “ಹಾಸಿಗೆಯ ಸುಖಕ್ಕಾಗಿ ವೃತ್ತಿ ಜೀವನವನ್ನೇ ಹಾಳು ಮಾಡಿದ್ದಾರೆ”: ಕೆಜಿಎಫ್ ನಟಿ ಬಿಚ್ಚಿಟ್ಟ ಕರಾಳ ಸತ್ಯ

216 comments
KGF Actress

KGF Actress:  ಚಿತ್ರರಂಗದ ಅಂದಮೇಲೆ ಎಷ್ಟೇ ದೊಡ್ಡ ಸ್ಟಾರ್ ನಟ ನಟಿಯರಿಗೂ ಸಾವಿರಾರು ಕಮಿಟ್ಮೆಂಟ್ ಗಳು, ಕಾಸ್ಟಿಂಗ್ ಕೌಚ್ ಸಮಸ್ಯೆ ಇದ್ದೇ ಇರುತ್ತದೆ. ಇದೀಗ ಕೆಜಿಎಫ್ ನಟಿ ತನಗೆ ಎದುರಾದ ಕಾಸ್ಟಿಂಗ್ ಕೌಚ್‌ನ ಕಹಿ ಅನುಭವದ ಬಗ್ಗೆ ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಅವರೇ ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ KGF ನಟಿ ರವೀನಾ ಟಂಡನ್.

ಹೌದು, ಇತ್ತೀಚಗೆ ಕಾಸ್ಟಿಂಗ್ ಕೌಚ್ ಬಗ್ಗೆ ಪ್ರತಿಕ್ರಿಯಿಸಿದ ರವೀನಾ ಟಂಡನ್ “ನನ್ನ ವೃತ್ತಿಜೀವನವನ್ನು ನಾಶಮಾಡಲು ಅನೇಕರು ಪ್ಲಾನ್ ಮಾಡಿದ್ದಾರೆ. ಮತ್ತು ಮಾಡುತ್ತಿದ್ದಾರೆ. ಎಲ್ಲದರ ಹಿಂದೆ ಒಂದು ಕಾರಣ ಇರುತ್ತೆ. ಅದುವೇ ನಾನು ಅವರು ಮಲಗುವ ಕೋಣೆಗೆ ಹೋಗಲಿಲ್ಲ ಎನ್ನುವುದು, ಹೌದು, ಕೇವಲ ಹಾಸಿಗೆಯ ಸುಖಕ್ಕಾಗಿ ನಾಯಕಿಯರ ವೃತ್ತಿ ಜೀವನವನ್ನೇ ಹಾಳು ಮಾಡುವ ತಂಡ ಬಾಲಿವುಡ್ ನಲ್ಲಿ ಈಗಲೂ ಇದೆ” ಎಂದು ನಟಿ ಚಿತ್ರರಂಗದ ಕರಾಳ ಸೀಕ್ರೆಟ್ ನ್ನು ಬಹಿರಂಗ ಮಾಡಿದ್ದಾರೆ.

ಖ್ಯಾತ ನಿರ್ಮಾಪಕ ರವಿ ಟಂಡನ್ ಅವರ ಮಗಳು ರವೀನಾ ಟಂಡನ್, ಸಲ್ಮಾನ್ ಅಭಿನಯದ ‘ಪತ್ತರ್ ಕೆ ಫೂಲ್’ ಚಿತ್ರದ ಮೂಲಕ ನಾಯಕಿಯಾಗಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಅದರ ನಂತರ, ‘ಮೊಹ್ರಾ’, ‘ಅಂದಾಜ್ ಅಪ್ನಾ ಅಪ್ನಾ’ ಮತ್ತು ‘ದಿಲ್ ವಾಲೆ’ ನಂತಹ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಜನಪ್ರಿಯ ನಟಿ ಅನ್ನೋದರಲ್ಲಿ ಎರಡು ಮಾತಿಲ್ಲ. ಇನ್ನು ಈ ನಟಿ ಕೆಜಿಎಫ್ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿ ಹೆಚ್ಚಿನ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಎನ್ನುವುದು ಅಪ್ಪಟ ಸತ್ಯ.

You may also like

Leave a Comment