Home » Kiccha Sudeep: ಬಿಗ್ ಬಾಸ್ ನಿರೂಪಣೆಗೆ ಸುದೀಪ್ ಪಡೆಯೋ ಸಂಭಾವನೆ ಎಷ್ಟು? ಪ್ರೆಸ್ ಮೀಟಲ್ಲಿ ಕಿಚ್ಚ ಕೊಟ್ಟ ಉತ್ತರ ಹೀಗಿತ್ತು

Kiccha Sudeep: ಬಿಗ್ ಬಾಸ್ ನಿರೂಪಣೆಗೆ ಸುದೀಪ್ ಪಡೆಯೋ ಸಂಭಾವನೆ ಎಷ್ಟು? ಪ್ರೆಸ್ ಮೀಟಲ್ಲಿ ಕಿಚ್ಚ ಕೊಟ್ಟ ಉತ್ತರ ಹೀಗಿತ್ತು

0 comments

Kiccha Sudeep: ಕನ್ನಡ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್(Bigg Boss).‌ ಸೆಪ್ಟೆಂಬರ್‌ 29 ರಿಂದ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗಲಿದೆ. ಕನ್ನಡ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್.‌ ಸೆಪ್ಟೆಂಬರ್‌ 29 ರಿಂದ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ವಾಹಿನಿಯು ಪ್ರೆಸ್ ಮೀಟ್ ಕರೆದು ಹಲವು ವಿಚಾರಗಳನ್ನು ಚರ್ಚಿಸಿ ಕುತೂಹಲ ಹುಟ್ಟಿಸುತ್ತಿದೆ.

ಅಂತೇಯೇ ಸೀಸನ್ 11 ರ ಹೋಸ್ಟ್‌ ಸುದೀಪ್‌(Kiccha Sudeep) ಎಂಬ ಮಾಹಿತಿ ರಿವೀಲ್‌ ಆದ ಬೆನ್ನಲ್ಲೇ ಅವರ ಸಂಭಾವನೆಯ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ ಕಲರ್ಸ್ ಕನ್ನಡ ಏರ್ಪಡಿಸಿದ್ದ ಪ್ರೆಸ್ ಮೀಟಿನಲ್ಲೂ ಈ ವಿಚಾರ ಮುನ್ನಲೆಗೆ ಬಂದಿದೆ. ನೇರವಾಗಿ ಸುದೀಪ್ ಅವರಿಗೇ ಈ ಪ್ರಶ್ನೆ ಎದುರಾಗಿದೆ. ಇದಕ್ಕೆ ಕಿಚ್ಚ ಸುದೀಪ್ ಅವರು ಅಚ್ಚರಿಯ ಉತ್ತರ ನೀಡಿದ್ದಾರೆ.

ಹೌದು, ನಿಮ್ಮ ಸಂಭಾವನೆ ಹೆಚ್ಚಾಗಿದೆಯೇ ಎಂಬ ಪ್ರಶ್ನೆಗೆ “ನಾನು ನನ್ನ ತಟ್ಟೆ ಎಷ್ಟು ದೊಡ್ಡದಾಗಿದೆಯೇ ಅಷ್ಟೇ ತಿನ್ನೋದು, ನನ್ನ ಯೋಗ್ಯತೆ ಎಷ್ಟಿದೆಯೋ ಅಷ್ಟೇ ದುಡಿಯೋದು” ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಅಲ್ಲದೆ ಇದು 11ನೇ ಸೀಸನ್‌, ಅಷ್ಟೇ ಡಿಮ್ಯಾಂಡ್‌ ಇರಬೇಕಲ್ವ ಎಂದು ಪ್ರಶ್ನಿಸಿದಾಗ ನಗುತ್ತಲೇ ಪ್ರತಿಕ್ರಿಯಿಸಿದ ಕಿಚ್ಚ, “ಈ ಸೀಸನ್‌ ಹೊಸ ಅಧ್ಯಾಯ. ಈ ಸಂದರ್ಭದಲ್ಲಿ ಒಂದು ವಿಚಾರ ಹೇಳ್ತಿನಿ. ನಾನು ಈ ಸೀಸನ್‌ ಹೋಸ್ಟ್‌ ಮಾಡೋದಿಲ್ಲ ಎಂದು ಹೇಳಿದ್ದು ಸಂಭಾವನೆ ವಿಚಾರಕ್ಕೆ ಅಲ್ವೇ ಅಲ್ಲ. ಸಿನಿಮಾಗಳಿಗೆ ಸಮಯ ಹೊಂದಿಸಲು ಕಷ್ಟವಾಗುತ್ತಿದೆ ಎನ್ನುವ ಕಾರಣಕ್ಕೆ ಆರಂಭದಲ್ಲಿ ಹಿಂದೆ ಸರಿದಿದ್ದೆ. ಬಳಿಕ ಬಿಗ್‌ಬಾಸ್‌ ತಂಡದವರು ಮನೆಗೆ ಬಂದು ಒಪ್ಪಿಸಿದರು. ನೀವೆಲ್ಲರೂ ತಿಳಿದಿರಬೇಕು, ಎಲ್ಲದಕ್ಕೂ ಮಾರುಕಟ್ಟೆ ಇದೆ. ನನಗೆ ಏನು ದುಡಿಯಬೇಕೋ ಅದನ್ನು ದುಡಿಯುತ್ತೇನೆʼʼ ಎಂದರು.

ಅಂದಹಾಗೆ ಈ ಹಿಂದಿನ ವರದಿಗಳ ಆಧಾರದಲ್ಲಿ ಹೇಳುವುದಾರೆ ಬಿಗ್‌ಬಾಸ್‌ ಕನ್ನಡ ಹೋಸ್ಟ್‌ ಮಾಡಲು ಸುದೀಪ್‌ ಹಲವು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. 2015ರಲ್ಲಿ ಸುದೀಪ್‌ ಅವರು ಕಲರ್ಸ್‌ ಕನ್ನಡದ ಜತೆ ಬಿಗ್‌ಬಾಸ್‌ ನಿರೂಪಣೆಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಮೊದಲು ಇದು ಐದು ವರ್ಷದ ಅಗ್ರಿಮೆಂಟ್‌ ಆಗಿತ್ತು. ವರದಿಗಳ ಪ್ರಕಾರ ಆ ಸಮಯದಲ್ಲಿ 20 ಕೋಟಿ ರೂಪಾಯಿಯ ಒಪ್ಪಂದಕ್ಕೆ ಸುದೀಪ್‌ ಸಹಿ ಹಾಕಿದ್ದರು. ಇದಾದ ಬಳಿಕ ಇವರ ಮುಂದಿನ ವರ್ಷಗಳ ಬಿಗ್‌ಬಾಸ್‌ ಕನ್ನಡ ನಿರೂಪಣೆಯ ಸಂಭಾವಣೆ ಗಮನಾರ್ಹವಾಗಿ ಏರಿಕೆ ಕಂಡಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಇನ್ನೂ ಹಲವು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ. ಸದ್ಯ ಸುದೀಪ್‌ಗೆ ಬಿಗ್‌ಬಾಸ್‌ ಎಷ್ಟು ಸಂಭಾವನೆ ನೀಡುತ್ತದೆ ಎಂಬ ರಹಸ್ಯ ಹೊರಬಿದ್ದಿಲ್ಲ.

You may also like

Leave a Comment