Home » Kiccha Sudeep : ಕಿಚ್ಚ ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ – ಮಗಳ ಕೆನ್ನೆಗೆ ಅರಿಶಿನ ಹಚ್ಚುವ ಫೋಟೋಸ್ ವೈರಲ್

Kiccha Sudeep : ಕಿಚ್ಚ ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ – ಮಗಳ ಕೆನ್ನೆಗೆ ಅರಿಶಿನ ಹಚ್ಚುವ ಫೋಟೋಸ್ ವೈರಲ್

0 comments

Kiccha Sudeep : ಸ್ಯಾಂಡಲ್​ವುಡ್ ಬಾದ್​ ಷಾ ಕಿಚ್ಚ ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದ್ದು, ಮಗಳ ಕೆನ್ನೆಗೆ ಕಿಚ್ಚ ಅರಿಶಿನ ಹಚ್ಚುವಂತಹ ಫೋಟೋಸ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ಆದ ಫೋಟೋಗಳನ್ನು ನೋಡಿ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿಯ ಮದುವೆ ನಡೆಯುತ್ತಿದೆ ಎಂದು ನೆಟ್ಟಿಗರು ಅಂದುಕೊಂಡಿದ್ದಾರೆ. ಆದರೆ ಇದು ಸುದೀಪ್ ಮಗಳ ಮದುವೆ ಅಲ್ಲ. ಬದಲಿಗೆ ಅವರ ಅಕ್ಕನ ಮಗನ ಮದುವೆ ಆಗಿದೆ.

ಹೌದು, ಸುದೀಪ್ ಅವರ ಅಕ್ಕನ ಮಗನ‌ ಮದುವೆ ಶ್ರೀಲಂಕಾದಲ್ಲಿ ನಡೆದಿದ್ದು. ಆಪ್ತರು ಹಾಗೂ ಕುಟುಂಬಸ್ಥರ ಮಧ್ಯೆ ಅದ್ಧೂರಿಯಾಗಿ ನಡೆದಿದೆ. ಸುದೀಪ್ ಅಕ್ಕನ ಮಗನ (ಸೋದರಳಿಯ) ಮದುವೆ ಶಾಸ್ತ್ರದಲ್ಲಿ ಸುದೀಪ್ ಕುಟುಂಬ ಭಾಗಿಯಾಗಿದೆ. ಅರಿಶಿನ ಶಾಸ್ತ್ರದಲ್ಲಿ ನವಜೋಡಿ ಜೊತೆ ತಮ್ಮ ಪ್ರೀತಿಯ ಮಗಳಿಗೂ ಸುದೀಪ್ ಮತ್ತು ಪ್ರಿಯಾ ಸುದೀಪ್ ಅರಿಶಿಣ ಹಚ್ಚಿದ್ದಾರೆ. ಅರಿಶಿನ ಶಾಸ್ತ್ರದ ಫೋಟೋಗಳನ್ನು ಸಾನ್ವಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ವೈರಲ್ ಆಗಿದೆ.

You may also like