Kiccha Sudeep : ಮಾರ್ಕ್ ಸಿನಿಮಾದ ಫ್ರೀ ರಿಲೀಸ್ ಕಾರ್ಯಕ್ರಮದಲ್ಲಿ ‘ನಾವು ಮಾತಿಗೆ ಬದ್ದ, ನೀವು ಯುದ್ಧಕ್ಕೆ ಸಿದ್ಧವೇ’ ಎನ್ನುವುದರ ಮುಖಾಂತರ ಕಿಚ್ಚ ಸುದೀಪ್ ಯಾರಿಗೋ ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದರು. ಇದು ದರ್ಶನ್ ಅಭಿಮಾನಿಗಳಿಗೆ ಹೇಳಿದ ಮಾತು ಎಂಬಂತೆ ಅನೇಕರು ಬಿಂಬಿಸಿದ್ದರು. ಅಲ್ಲದೆ ದಾವಣಗೆರೆಯಲ್ಲಿ ಇದಕ್ಕೆ ವಿಜಯಲಕ್ಷ್ಮಿ ದರ್ಶನ್ ಕೂಡ ತಮ್ಮದೇ ದಾಟಿಯಲ್ಲಿ ‘ಕೆಲವರು ದರ್ಶನ್ ಹೊರಗಡೆ ಇದ್ದಾಗ ಸುಮ್ಮನೆ ಇರುತ್ತಾರೆ. ಜೈಲಿಗೆ ಹೋದಾಗ ವೇದಿಕೆ ಮೇಲೆ ಏನೇನು ಮಾತನಾಡುತ್ತಾರೆ’ ಎಂದು ಟಾಂಗ್ ನೀಡಿದ್ದರು. ಈ ವಿಚಾರವಾಗಿ ಸುದೀಪ್ ಕೊನೆಗೂ ಮೌನ ಮೌರಿದಿದ್ದು, ವಿಜಯಲಕ್ಷ್ಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುದೀಪ್ ಅವರು ನಾನು ಯಾರ ಬಗ್ಗೆನೂ ಮಾತನಾಡಿಲ್ಲ. ಯಾರನ್ನು ಉದ್ದೇಶಿಸಿ ಮಾತನಾಡಿಲ್ಲ. ನನ್ನ ಮಾತು ನೇರವಾಗಿಯೇ ಪೈರಸಿಯ ವಿಚಾರಕ್ಕೇನೆ ಸಂಬಂಧಿಸಿದ್ದೇ ಆಗಿದೆ. ಆದರೆ, ನನ್ನ ಮಾತಿನ ಬಳಿಕ ಅದ್ಯಾರೊ ಮಾತನಾಡಿದ್ದಾರೆ ಅಂದ್ರೆ ಅದರ ಬಗ್ಗೆ ನನ್ನ ಕೇಳ್ಬೇಡಿ. ಅವರನ್ನು ಹೋಗಿ ಕೇಳಿ. ನೀವು ಯಾರ ಬಗ್ಗೆ ಮಾತನಾಡಿದ್ದಿರಿ ಅಂತ ಅವರನ್ನೆ ಹೋಗಿ ಕೇಳಿ. ಅವರ ನನ್ನ ಹೆಸರು ಹೇಳಿದರೆ ಆಯಿತು. ಆಗ ನಾನು ರಿಯಾಕ್ಟ್ ಮಾಡುತ್ತೇನೆ. ಆದರೆ, ಒಂದು ವೇಳೆ ಅವರು ನನ್ನ ಹೆಸರು ತೆಗೆದುಕೊಂಡಿದ್ದರೇ ನಾನು ಅದರ ಬಗ್ಗೆ ಹೇಳುತ್ತಿದ್ದೆ. ಆದರೆ, ಈ ಪ್ರಶ್ನೆಯನ್ನ ನನ್ನ ಅಲ್ಲ. ಅವರನ್ನೆ ಹೋಗಿ ಕೇಳಿ ಅಂತಲೇ ಸುದೀಪ್ ಹೇಳಿದ್ದಾರೆ.
ಅಲ್ಲದೆ ನಮ್ಮ ಚಿತ್ರವನ್ನ ನಾವು ಉಳಿಸಲೇಬೇಕು. ಪೈರಸಿ ಅದನ್ನ ತಿಂದು ಹಾಕುತ್ತದೆ ಅಂದ್ರೆ ಯಾರು ಬಿಡ್ತಾರೆ. ನಾವಂತು ಬಿಡೋದಿಲ್ಲ. ಹುಬ್ಬಳ್ಳಿಗೆ ಹೋಗುವಾಗ ಸಿಕ್ಕ ಮಾಹಿತಿ ಆಧಾರದ ಮೇಲೇನೆ ವೇದಿಕೆ ಮೇಲೆ ಏನು ಹೇಳ್ಬೇಕು. ಹೇಗೆ ಹೇಳ್ಬೇಕು ಅಂತ ಯೋಚನೆ ಮಾಡಿದ್ದೇನೆ. ಆ ಮೇಲೇನೆ ವೇದಿಕೆ ಮೇಲೆ ಅದನ್ನ ಹೇಳಿದ್ದೇನೆ ಎಂದು ಹೇಳಿದ್ದಾರೆ.
