Home » Tech Tips: ನಿಮ್ಮ ವಾಟ್ಸಪ್ ಡಿಪಿ ಯಾರೆಲ್ಲಾ ನೋಡಿದ್ದಾರೆ ಎಂದು ತಿಳಿಯಬೇಕೇ? ಇಲ್ಲಿದೆ ಸುಲಭೋಪಾಯ

Tech Tips: ನಿಮ್ಮ ವಾಟ್ಸಪ್ ಡಿಪಿ ಯಾರೆಲ್ಲಾ ನೋಡಿದ್ದಾರೆ ಎಂದು ತಿಳಿಯಬೇಕೇ? ಇಲ್ಲಿದೆ ಸುಲಭೋಪಾಯ

0 comments

ಇಂದಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಜೀವನದ ಒಂದು ಭಾಗವಾಗಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ವಾಟ್ಸಪ್ ಅನ್ನು ಅತಿಹೆಚ್ಚು ಬಳಕೆ ಮಾಡುತ್ತಾರೆ. ಇತ್ತೀಚೆಗೆ ವಾಟ್ಸಪ್ ತನ್ನ ಹೊಸ ಹೊಸ ಫೀಚರ್ಸ್ ಗಳಿಂದ ಜನರನ್ನು ಸೆಳೆಯುತ್ತಿದೆ. ಹಾಗೇ ಇಂದಿನ ದಿನಗಳಲ್ಲಿ ವಾಟ್ಸಪ್​ ಟ್ರಿಕ್ಸ್​​​​ಗಳಿಗೆಂದೇ ಅದೆಷ್ಟೋ ಥರ್ಡ್​ ಪಾರ್ಟಿ ಆಪ್ ಗಳು ಕೂಡ ಇವೆ. ಇದರಲ್ಲಿ ನಿಮ್ಮ ವಾಟ್ಸಪ್ ಡಿಪಿ ಯಾರು ನೋಡಿದ್ದಾರೆ ಎಂದು ಕೂಡ ತಿಳಿಯಬಹುದಾಗಿದೆ. ಹೇಗೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಇನ್ನೂ ವಾಟ್ಸಪ್ ಡಿಪಿಗೆ ಸೆಟ್ಟಿಂಗ್ಸ್ ನಲ್ಲಿ ಹೋಗಿ ಕಾಂಟ್ಯಾಕ್ಟ್ ನಲ್ಲಿರುವವರಿಗೆ ಮಾತ್ರ ಡಿಪಿ ಕಾಣುವ ಹಾಗೆ ಸೆಟ್ ಮಾಡಿದ್ದರೂ ಕೂಡ ಬೇರೆ ಅವರ ಡಿಪಿ ನೋಡಲು ಸಾಧ್ಯವಾಗುತ್ತದೆ. ಆದರೆ ಇದಕ್ಕೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ನ ಅಗತ್ಯವಿದೆ. ಈ ಆಪ್ ಮೂಲಕ ವಾಟ್ಸಪ್ ನಲ್ಲಿ ನಿಮ್ಮ ಡಿಪಿಯನ್ನು ಯಾರು ನೋಡುತ್ತಾರೆ ಎಂಬುದನ್ನು ತಿಳಿಯಬಹುದಾಗಿದೆ.

ಇದಕ್ಕಾಗಿ ನೀವು ಗೂಗಲ್ ಪ್ಲೇ ಸ್ಟೋರ್​ನಿಂದ WhatsApp- Who Viewed Me ಅಥವಾ Whats Tracker ಎಂಬ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಜೊತೆಗೆ 1mobile market ಡೌನ್ಲೋಡ್ ಮಾಡಬೇಕು. 1mobile market ಆಪ್ ಇಲ್ಲದೆ WhatsApp- Who Viewed Me ಡೌನ್ಲೋಡ್ ಆಗುವುದಿಲ್ಲ. ಇನ್ನೂ, ಈ ಅಪ್ಲಿಕೇಶನ್ ಮೂಲಕ ಕಳೆದ 24 ಗಂಟೆಗಳಲ್ಲಿ ನಿಮ್ಮ ವಾಟ್ಸಪ್ ಡಿಪಿಯನ್ನು ಯಾರು ನೋಡಿದ್ದಾರೆ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಇನ್ನೂ ನೀವು ಯಾವುದೇ ಒಂದು ಥರ್ಡ್ ಪಾರ್ಟಿ ಆಪ್ ಅನ್ನು ಇನ್​ಸ್ಟಾಲ್ ಮಾಡುವ ಮುನ್ನ ಎಚ್ಚರವಹಿಸಬೇಕಿದೆ. ಕಾರಣ ಥರ್ಡ್ ಪಾರ್ಟಿ ಆಪ್ ಗಳು ನಿಮ್ಮ ಸ್ಮಾರ್ಟ್ ಫೋನ್ ಗೆ ಸುರಕ್ಷಿತವೇ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇರುವುದಿಲ್ಲ. ಹಾಗಾಗಿ ಈ ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿರುವ ಡೇಟಾವನ್ನು ತನ್ನ ವಶಕ್ಕೆ ಪಡೆಯಬಹುದು. ಅದಕ್ಕೆ ಇನ್ಸ್ಟಾಲ್ ಮಾಡುವ ಮುನ್ನ ಎಚ್ಚರವಹಿಸಿ.

You may also like

Leave a Comment