Bigg Boss-12 : ಬಿಗ್ ಬಾಸ್ ಕನ್ನಡ ಸೀಸನ್ 12 ಇದೀಗ ಮುಕ್ತಾಯದ ಹಂತದಲ್ಲಿದೆ. ಈಗಾಗಲೇ ಮನೆಯಿಂದ ಸ್ಪರ್ಧಿಗಳು ಒಬ್ಬೊಬ್ಬರಾಗಿ ಎಲಿಮಿನೇಟ್ ಆಗುತ್ತಿದ್ದು ಇದೀಗ ಮಿಟ್ ವೀಕ್ ಎಲಿಮಿನೇಷನ್ ಗಳು ಕೂಡ ಆರಂಭವಾಗಿವೆ. ಇದೀಗ ಎಲಿಮಿನೇಟ್ ಆಗಿ ಹೊರಬಂದಿರುವ ಸೂರಜ್ ಮತ್ತು ಮಾಳು ಅವರನ್ನು ಕೆಲವು ಚಾನೆಲ್ ಗಳು ಸಂದರ್ಶನ ಮಾಡುತ್ತಿವೆ. ಸಂದರ್ಶನದ ವೇಳೆ ಮಾಳು ಅವರಿಗೆ ಗಿಲ್ಲಿಯವರು ಈ ಭಾರಿ ಬಿಗ್ ಬಾಸ್ ವಿನ್ ಆಗುತ್ತಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ ಯಾರೇ ಏನಾದರೂ ಬಿಗ್ ಬಾಸ್ ವಿನ್ ಆದ್ರೆ ನಾನು ಅದನ್ನು ಒಪ್ಪುವುದಿಲ್ಲ ಎಂದು ಕಡ್ಡಿ ತುಂಡಾಗುವಂತೆ ಹೇಳಿದ್ದರು. ಇದೀಗ ಮಾಳು ಮಾತ್ರವಲ್ಲ ಅವರ ಪತ್ನಿ ಮೇಘನಾ ಕೂಡ ಇದೀಗ ಕಲರ್ಸ್ ಕನ್ನಡ ಹಾಗೂ ಬಿಗ್‌ಬಾಸ್ ಶೋ ಬಗ್ಗೆ ವ್ಯಂಗ್ಯ ಮಾಡಿ ಪೋಸ್ಟ್ ಮಾಡಿದ್ದಾರೆ.
ಹೌದು, ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಪೇಜ್ ಮೀಮ್‌ವೊಂದು ವೈರಲ್ ಆಗ್ತಿದೆ. “ಸ್ಪಂದನಾ ಹಾಗೂ ಕಾವ್ಯಾಗಿಂತ ಸೂರಜ್, ಮಾಳು, ಸುಧಿ, ಜಾಹ್ನವಿ ಡಮ್ಮಿ ಆಗಿರೋದಕ್ಕೆ ಸಾಧ್ಯವಿಲ್ಲ. ಈ ವೀಕೆಂಡ್ ಇಡೀ ಕರ್ನಾಟಕ ಜನತೆಗೆ ಬಿಗ್‌ಬಾಸ್-12 ಅತಿಹೆಚ್ಚು ಪಕ್ಷಪಾತ ಮಾಡಿರುವ ಸೀಸನ್ ಅನ್ನೋದು ಕನ್ಫರ್ಮ್ ಆಯ್ತು. ಸ್ಪಂದನಾ ಕಲರ್ಸ್ ಕನ್ನಡದ ದತ್ತು ಪುತ್ರಿ” ಎನ್ನುವಂತೆ ವ್ಯಂಗ್ಯ ಮಾಡಿರುವ ಮೀಮ್ ಅದು. ಮಾಳು ಪತ್ನಿ ಮೇಘನಾ ಇದೀಗ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಇದನ್ನು ಹಂಚಿಕೊಂಡಿದ್ದಾರೆ. “ಎಲ್ಲಿದೆಯೋ ನ್ಯಾಯ ಅಣ್ಣಾ?” ಎಂಬ ಶೋವನ್ನು ಟ್ರೋಲ್ ಮಾಡಿದ್ದಾರೆ.
ಮಾಳು ಅವರು ನಾನೇ ಬಿಗ್ ಬಾಸ್ ಗೆಲ್ಲಬೇಕಿತ್ತು. ನನ್ನನ್ನು ಮೋಸದಿಂದ ಹೊರಗಡೆ ಕಳಿಸಿದ್ದಾರೆ ಎಂಬುದಾಗಿ ಪರೋಕ್ಷವಾಗಿ ಮಾತನಾಡುತ್ತಿದ್ದಾರೆ. ಮಾಳು ಅವರ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ರೋಲ್ ಆಗುತ್ತಿವೆ. ಇದೀಗ ಫ್ಯಾನ್ ಪೇಜ್ ಟ್ರೋಲ್ ಮೀಮ್ ಅನ್ನು ಹಂಚಿಕೊಂಡು ಮಾಳು ಹಾಗೂ ಆತನ ಪತ್ನಿ ನಗೆಪಾಟಲಿಗೆ ಈಡಾಗುತ್ತಿದ್ದಾರೆ ಎಂದು ನೆಟ್ಟಿಗರು ತಿರುಗೇಟು ಕೊಡುತ್ತಿದ್ದಾರೆ.
