Home » ಸಂಪ್ರದಾಯದಂತೆ ವಧುವಿನ ಕುತ್ತಿಗೆಗೆ ಹಾರ ಹಾಕುವ ಬದಲು ಎಸೆದ ವರ|ಕೋಪಗೊಂಡು ಮದುವೆಯನ್ನೇ ಕ್ಯಾನ್ಸಲ್ ಮಾಡಿಸಿದ ವಧು

ಸಂಪ್ರದಾಯದಂತೆ ವಧುವಿನ ಕುತ್ತಿಗೆಗೆ ಹಾರ ಹಾಕುವ ಬದಲು ಎಸೆದ ವರ|ಕೋಪಗೊಂಡು ಮದುವೆಯನ್ನೇ ಕ್ಯಾನ್ಸಲ್ ಮಾಡಿಸಿದ ವಧು

0 comments

ಇತ್ತೀಚಿನ ಕೆಲವೊಂದು ಮದುವೆಗಳು ಸಿನಿಮೀಯವಾಗಿದ್ದು,ಹಾಸ್ಯಮಯವಾಗಿರುತ್ತೆ ಎಂದರೆ ತಪ್ಪಲ್ಲ. ಯಾಕಂದ್ರೆ ಮಂಟಪಕ್ಕೆ ಬಂದ ಮೇಲೆ ಮದುವೆ ಮುರಿಯೋದೆ ಮಾಮೂಲ್ ಆಗಿದ್ದು, ಇದೇನು ಹೊಸತಲ್ಲ ಎಂಬಂತಾಗಿದೆ.ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವುದೇ ಇಂತಹ ಮದುವೆಗಳು. ವಧು ಡ್ಯಾನ್ಸ್ ಮಾಡಿದಳೆಂದು ಕಪಾಳಮೋಕ್ಷ ಮಾಡಿದ ವರ. ಬಳಿಕ ಆಕೆ ಅದೇ ಮಂಟಪದಲ್ಲಿ ಇನ್ನೊಬ್ಬನೊಂದಿಗೆ ಮದುವೆ ಆದ ವಿಷಯ ವೈರಲ್ ಆಗಿತ್ತು. ಅದೇ ತರ ಇಲ್ಲೊಂದು ಘಟನೆ ನಡೆದಿದೆ.

ಹೌದು.ಇಲ್ಲೊಂದು ಜೋಡಿ,ಸಂಪ್ರದಾಯದಂತೆ ವರನು, ವಧು ಕುತ್ತಿಗೆಗೆ ಹಾರವನ್ನು ಹಾಕುವ ಬದಲು ಎಸೆದಿದ್ದಾನೆ. ವರನ ವರ್ತನೆಯಿಂದ ಅಸಮಾಧಾನಗೊಂಡ ವಧು, ಅವನನ್ನು ಮದುವೆಯಾಗಲು ನಿರಾಕರಿಸಿ ಕ್ಯಾನ್ಸಲ್ ಮಾಡಿ ಹೋಗಿರುವ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಬಿದುನಾ ಪೊಲೀಸ್ ವೃತ್ತದ ವ್ಯಾಪ್ತಿಯ ನವೀನ್ ಬಸ್ತಿಯಲ್ಲಿ ನಡೆದಿದೆ.

ವಧು ಆತನೊಂದಿಗೆ ಮದುವೆ ಬೇಡ ಎಂದು ಹೇಳಿದ್ದು,ಈ ವೇಳೆ ಎರಡೂ ಕುಟುಂಬಗಳ ನಡುವೆ ಜಗಳವಾಗಿದೆ. ಮದುವೆ ಮುಂದುವರಿಸಲು ವಧುವಿನ ಮನವೊಲಿಸಲು ಕುಟುಂಬದವರು ಪ್ರಯತ್ನಿಸಿದರು. ಆದರೆ ವಧು ಈ ವಿಚಾರವಾಗಿ ಯಾರ ಮಾತನ್ನೂ ಕೇಳಿಲ್ಲ. ಕೊನೆಗೆ ಈ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ. 2 ಕುಟುಂಬಗಳ ನಡುವೆ ರಾಜಿ ಮಾಡಲು ಪ್ರಯತ್ನಿಸಿದ್ದಾರೆ. ಸಾಧ್ಯವಾಗದೇ ಇದ್ದಾಗ ಎರಡು ಕುಟುಂಬಗಳು ವಿನಿಮಯ ಮಾಡಿಕೊಂಡ ಉಡುಗೊರೆಗಳನ್ನು ಹಿಂದಿರುಗಿಸಿ, ಮದುವೆ ಮುರಿದುಕೊಂಡು ಹೋಗಿದ್ದಾರೆ.

You may also like

Leave a Comment