Home » Milk Bank: ನವಜಾತ ಶಿಶುಗಳ ಬೆಳಕಾದ ನಟಿ ನಮ್ರತಾ ಶಿರೋಡ್ಕರ್: 7200 ಮಕ್ಕಳಿಗಾಗಿ ಎದೆ ಹಾಲಿನ ಬ್ಯಾಂಕ್ ಯೋಜನೆ

Milk Bank: ನವಜಾತ ಶಿಶುಗಳ ಬೆಳಕಾದ ನಟಿ ನಮ್ರತಾ ಶಿರೋಡ್ಕರ್: 7200 ಮಕ್ಕಳಿಗಾಗಿ ಎದೆ ಹಾಲಿನ ಬ್ಯಾಂಕ್ ಯೋಜನೆ

0 comments

Milk Bank: ಮಾಜಿ ಮಿಸ್ ಇಂಡಿಯಾ ಮತ್ತು ಮಹೇಶ್ ಬಾಬು(Actor Mahesh Babu) ಅವರ ಪತ್ನಿ ನಮ್ರತಾ ಶಿರೋಡ್ಕರ್(Namrata Shirodkar) ಅವರು ಆಂಧ್ರಪ್ರದೇಶದ(AP) ಮೊದಲ ತಾಯಂದಿರ ಹಾಲಿನ ಬ್ಯಾಂಕ್(Mother Milk Bank) ಅನ್ನು ವಿಜಯವಾಡದ ಆಂಧ್ರ ಆಸ್ಪತ್ರೆಯಲ್ಲಿ ಪ್ರಾರಂಭಿಸಿದ್ದಾರೆ. ರೋಟರಿ ಇಂಟರ್ನ್ಯಾಷನಲ್ ಬೆಂಬಲದೊಂದಿಗೆ ಆರಂಭವಾದ ಈ ಹೊಸ ಸೌಲಭ್ಯವು ಪ್ರತಿ ವರ್ಷ ಸುಮಾರು 7,200 ನವಜಾತ ಶಿಶುಗಳಿಗೆ(New born baby) ತಾಯಿಯ ಹಾಲನ್ನು ಪಡೆಯಲು ಸಹಾಯ ಮಾಡುತ್ತದೆ.

ಕಾರ್ಯಕ್ರಮ ಉದ್ಘಾಟನೆ ವೇಳೆ, ಎದೆ ಹಾಲಿಲ್ಲದೆ ಎಷ್ಟು ಶಿಶುಗಳು ಕಷ್ಟಪಡುತ್ತಿವೆ ಮತ್ತು ಇದಕ್ಕೆ ಪರ್ಯಾಯ ಕ್ರಮಗಳಿಂದ ನವಜಾತ ಶಿಶುಗಳ ಜೀವಗಳನ್ನು ಹೇಗೆ ಉಳಿಸಬಹುದು ಎಂಬುದರ ಕುರಿತು ನಮ್ರತಾ ಮಾತನಾಡಿದರು. ಈ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಗಿಸಿದ್ದಕ್ಕಾಗಿ ಯೋಜನೆಯ ಹಿಂದಿರುವ ತಂಡಕ್ಕೆ ಅವರು ಧನ್ಯವಾದಗಳನ್ನು ಅರ್ಪಿಸಿದರು.

ಹಾಲಿನ ಬ್ಯಾಂಕಿನ ಜೊತೆಗೆ, ಯುವತಿಯರನ್ನು ರಕ್ಷಿಸಲು ಉಚಿತ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಅಭಿಯಾನವನ್ನು ಪ್ರಾರಂಭಿಸಲಾಯಿತು. ಇದು ನಮೃತ ಅವರ, ಮಹಿಳೆಯರು ಮತ್ತು ಮಕ್ಕಳ ಆರೋಗ್ಯಕ್ಕೆ ಬಲವಾದ ಬದ್ಧತೆಯನ್ನು ತೋರಿಸುತ್ತದೆ.

You may also like