Mohini Actress: ಕಲ್ಯಾಣ ಮಂಟಪ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಿತರಾದವರು ನಟಿ ಮೋಹಿನಿ ಶ್ರೀನಿವಾಸನ್ (Mohini Actress) . ಈಕೆ ಮೂಲತಃ ತಮಿಳಿನವರಾದರೂ, ಕನ್ನಡತಿಯಂತೆ ನಮ್ಮೊಂದಿಗೆ ಬೆರೆತು ಹೋಗಿದ್ದರು. ಅಲ್ಲದೇ ಕನ್ನಡದಲ್ಲಿ ಜ್ವಾಲಾ, ಸಿಡಿದೆದ್ದ ಪಾಂಡವರು, ಗಡಿಬಿಡಿ ಅಳಿಯ, ರೌಡಿ, ಲಾಲಿ, ನಿಶ್ಯಬ್ಧ ಸಿನಿಮಾಗಳಲ್ಲೂ ನಟಿಸಿದ ಮೋಹಿನಿ, ಉತ್ತಮ ನಟಿಯಾಗಿ ಹೊರಹೊಮ್ಮಿದರು. ಜೊತೆಗೆ ದಕ್ಷಿಣ ಭಾರತದ ಇನ್ನುಳಿದ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿಯೂ ಮೋಹಿನಿ ಸಕ್ರಿಯರಾಗಿ ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದರು.
ಈ ಸಿನಿಮಾ ನಡುವೆ 2006ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ 2011ರಲ್ಲಿ ಮಲಯಾಳಂನಲ್ಲಿ ಬಂದ ಕಲೆಕ್ಟರ್ ಚಿತ್ರವೇ ಅಂತಿಮ ಚಿತ್ರ ಆಗಿದ್ದು, ಅದಾದ ಮೇಲೆ ಮೋಹಿನಿ ಸಿನಿಮಾರಂಗದಿಂದ ದೂರ ಉಳಿದರು.
ಹೌದು, ಈ ನಿರ್ಧಾರದ ಹಿಂದಿನ ಸತ್ಯವನ್ನು ತಮಿಳಿನ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಮೋಹಿನಿ ಕ್ರಿಸ್ಟೀನಾ. ಹೌದು, ಮತಾಂತರವಾಗದಿದ್ದರೆ, ನಾನು ಬದುಕುತ್ತಲಿರಲಿಲ್ಲ. ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದೆ ಎಂದು ಒಂದಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ.
“ಕೆಲವೊಮ್ಮೆ ನಾನೇಕೆ ಬದುಕಬೇಕು? ಈ ಜೀವನ ಏಕೆ ಬೇಕು ಎಂಬ ಆಲೋಚನೆ ಬಂದಿತ್ತು. ಇದಾದ ನಂತರ ಖಿನ್ನತೆಗೆ ಒಳಗಾದೆ. ಕೆಟ್ಟ, ಕೆಟ್ಟ ಕನಸುಗಳನ್ನು ಕಾಣಲಾರಂಭಿಸಿದೆ. ನಿದ್ದೆಯೂ ಹಾಳಾಗುತ್ತ ಹೋಯಿತು. ಆರೋಗ್ಯದಲ್ಲೂ ಕೊಂಚ ಏರಿಳಿತ ಕಾಣುತ್ತ ಬಂತು.
ಇದನ್ನೂ ಓದಿ: 500ರೂ. ಗೋಸ್ಕರ ಕಾಲೇಜ್ ಡೇಸ್‌ನಲ್ಲೇ ಆ.. ಕೆಲಸ ಮಾಡಿದ್ರಂತೆ ನಟಿ ಅನುಸೂಯ !!
“ನಂತರ ಜ್ಯೋತಿಷ್ಯ, ಜಾತಕ, ಕಾಲ, ಕರ್ಮ ಎಲ್ಲವನ್ನೂ ಮೀರಿದ ದೇವರು ಯಾರು ಎಂದು ಹುಡುಕತೊಡಗಿದೆ. ಆಗ ಯೇಸು ಕ್ರಿಸ್ತನು ನನ್ನ ಕನಸಿನಲ್ಲಿ ಬಂದನು” “ಜೀಸಸ್ ಕ್ರೈಸ್ಟ್ ನನ್ನ ಕನಸಿನಲ್ಲಿ ಬಂದಾಗ, ನಾನು ಸ್ವಾತಂತ್ರ್ಯ ಪಡೆಯಲು ಪ್ರಾರಂಭಿಸಿದೆ. ಕೆಟ್ಟ ಕನಸುಗಳು ನಿಧಾನಕ್ಕೆ ಕಡಿಮೆಯಾದವು. ನನ್ನ ಆರೋಗ್ಯ ಸುಧಾರಿಸಲು ಪ್ರಾರಂಭಿಸಿತು. ಆತ್ಮಹತ್ಯೆ ಆಲೋಚನೆ ನಿಂತಿತು. ಮನಸ್ಸು ನಿರಾಳವಾಗತೊಡಗಿತು. ನಿಜ ಹೇಳಬೇಕೆಂದರೆ ಯೇಸು ಕ್ರಿಸ್ತನೇ ನನ್ನನ್ನು ಅನೇಕ ಬಾರಿ ಕಾಪಾಡಿದ್ದಾನೆ ”
ನನ್ನ ಜೀವನದಲ್ಲಿ “ಕೆಟ್ಟ ವಿಚಾರ ತಲೆಗೆ ಬಂದಾಗ, ಒಮ್ಮೆ ನನ್ನ ಕೈಯನ್ನೇ ನಾನು ಚಾಕುವಿನಿಂದ ಘಾಸಿ ಮಾಡಿಕೊಂಡಿದ್ದೆ. ಅದೇ ರೀತಿ ಇನ್ನೊಂದು ಸಲ ಕೋಕ ಕೋಲಾಗೆ ಇಲಿ ವಿಷ ಬೆರೆಸಿ ಕುಡಿದಿದ್ದೆ. ದೇಹಕ್ಕೆ ಏನಾದ್ರೂ ಆಗುತ್ತೆ ಅಂತ ನಾನೂ ಕಾಯ್ತಾ ಇದ್ದೆ. ಆದರೆ ನನಗೆ ಏನೂ ಆಗಲಿಲ್ಲ. ಇನ್ನೊಂದು ಬಾರಿ ಸುಮಾರು 136 ನಿದ್ರೆ ಮಾತ್ರೆಗಳನ್ನು ತೆಗೆದುಕೊಂಡೆದ್ದೆ” ಈ ಎಲ್ಲಾ ಸಮಯದಲ್ಲೂ ನನ್ನನ್ನ ಯೇಸು ಕಾಪಾಡಿದ್ದಾನೆ ಎಂದೂ ಮೋಹಿನಿ ಹೇಳಿಕೊಂಡಿದ್ದಾರೆ.
