Home » ಅಮ್ಮ‌ ಮಗಳ ಬಾಂಧವ್ಯ | ಆತಂಕಕ್ಕೆ ಒಳಗಾದ ಮಗಳಿಗೆ ತಾಯಿಯಿಂದ ಸಾಂತ್ವನ | ಹೀಗೊಂದು ವಿಶಿಷ್ಟ ವೀಡಿಯೋ ವೈರಲ್!!!

ಅಮ್ಮ‌ ಮಗಳ ಬಾಂಧವ್ಯ | ಆತಂಕಕ್ಕೆ ಒಳಗಾದ ಮಗಳಿಗೆ ತಾಯಿಯಿಂದ ಸಾಂತ್ವನ | ಹೀಗೊಂದು ವಿಶಿಷ್ಟ ವೀಡಿಯೋ ವೈರಲ್!!!

0 comments

ಅಮ್ಮ- ಮಗಳ ಬಾಂಧವ್ಯ ಪದಗಳಿಂದ ವರ್ಣಿಸಲಾಗದ್ದು, ತನ್ನ ಮಕ್ಕಳಿಗೆ ಏನೇ ಸಮಸ್ಯೆಯಾದರೂ ಹೆತ್ತ ತಾಯಿ ಜೊತೆಯಾಗಿರುತ್ತಾಳೆ. ಮಕ್ಕಳನ್ನು ಸದಾ ಜೋಪಾನ ಮಾಡುತ್ತಾಳೆ. ಅದಕ್ಕೆ ಇರಬೇಕು ಮಾತೃ ದೇವೋ ಭವ ಅನ್ನೋದು. ತಾಯಿ ದೇವರಿಗೆ ಸಮಾನ ಎಂದು. ಇದೀಗ ತಾಯಿ- ಮಗಳ ಅದ್ಭುತವಾದ ಬಾಂಧವ್ಯದ ವಿಡಿಯೋವೊಂದು ವೈರಲ್ ಆಗಿದ್ದು, ವ್ಹಾ!! ಎನ್ನುವಂತಿದೆ.

ಈ ವಿಡಿಯೋದಲ್ಲಿ, ಯುವತಿಯೊಬ್ಬಳು ತೀವ್ರವಾಗಿ ಆತಂಕಕ್ಕೆ (Anxiety Attack) ಒಳಗಾಗಿ ರಸ್ತೆಯ ಮೇಲೆ ಮಲಗಿದ್ದಾಳೆ. ಅದಾಗಲೇ ಕಾರಿನಲ್ಲಿ ಬಂದ ಆಕೆಯ ತಾಯಿ, ಕಾರಿನಿಂದ ಇಳಿದು ಸೀದಾ ಮಗಳ ಬಳಿ ಬರುತ್ತಾಳೆ. ಸಾಮಾನ್ಯವಾಗಿ ತಾಯಂದಿರು ಮಕ್ಕಳ ಮೇಲಿನ ಕಾಳಜಿಯಿಂದ ಬೈಯುತ್ತಾರೆ. ಆದರೆ ಈಕೆ ಹಾಗೆ ಮಾಡದೆ, ಮಗಳ ಪಕ್ಕದಲ್ಲಿ ಮಲಗುತ್ತಾಳೆ.

ಈ ವೇಳೆ ಧೋ ಎಂದು ಮಳೆ ಸುರಿಯುತ್ತಿತ್ತು. ಆದರೂ ಮಗಳ ಮೇಲೆ ಗದರದೆ, ಏನೊಂದು ಕೇಳದೆ, ಗೆಳತಿಯ ಹಾಗೆ ಆಕೆಯ ಪಕ್ಕದಲ್ಲಿ ಮಲಗುತ್ತಾಳೆ. ಮಗಳು Anxiety Attack ಗೆ ಒಳಗಾಗಿದ್ದಾಳೆ. ಈ ಸ್ಥಿತಿಯಲ್ಲಿರುವ ಆಕೆಯನ್ನು ಶಾಂತಗೊಳಿಸಲು ಮಗಳಿದ್ದಲ್ಲಿಗೆ ಬಂದು ಆಕೆಯಂತೆಯೇ ಪಕ್ಕದಲ್ಲಿ ಮಲಗಿ ಅವಳ ಕೈ ಹಿಡಿದುಕೊಂಡು ತಾನು ಸದಾ ನಿನ್ನ ಜೊತೆಗೆ ಇರುತ್ತೇನೆ ಎಂಬ ಭಾವದಿಂದ ಸಮಾಧಾನ ಮಾಡುವಂತದ್ದನ್ನು ನೋಡಬಹುದಾಗಿದೆ.

ಇಂತಹ ಮಾನಸಿಕ ಸಮಸ್ಯೆಗಳಿಗೆ ಒಳಗಾದವರನ್ನು ಹೀಗೇ ಆದಷ್ಟು ಪ್ರೀತಿಯಿಂದ ಸಾಂತ್ವನಗೊಳಿಸಬೇಕು. ಬದಲಾಗಿ ಬೈದು ಬುದ್ಧಿ ಹೇಳಲು ಪ್ರಯತ್ನಿಸಿದರೆ ಅವರು ಇನ್ನಷ್ಟು ಖಿನ್ನತೆಗೆ ಒಳಗಾಗುತ್ತಾರೆ. ಕೆಲವೊಂದನ್ನು ನಮ್ಮ ಪ್ರೀತಿ ಮಾತುಗಳಿಂದಲೇ ಸರಿಪಡಿಸಲು ಸಾಧ್ಯ. ಇನ್ನೂ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಮಿಲಿಯನ್ ಗಳಷ್ಟು ಜನರು ವೀಕ್ಷಿಸಿದ್ದಾರೆ. ಹಾಗೇ 1 ಲಕ್ಷಕ್ಕೂ ಅಧಿಕ ಜನರು ಲೈಕ್ ಮಾಡಿದ್ದು, ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ.

https://twitter.com/TansuYegen/status/1606900940199657472?s=20&t=IRYy27Wf3YYh-YUKJB8EIQ

You may also like

Leave a Comment