Home » ನಯನತಾರಾಗೆ ಅವಳಿ ಮಕ್ಕಳು | ಮದುವೆಯಾಗಿ ಕೇವಲ 4 ತಿಂಗಳಿನಲ್ಲೇ ಹೈ ಪರ್ಫಾರ್ಮೆನ್ಸ್ ಹೆರಿಗೆ

ನಯನತಾರಾಗೆ ಅವಳಿ ಮಕ್ಕಳು | ಮದುವೆಯಾಗಿ ಕೇವಲ 4 ತಿಂಗಳಿನಲ್ಲೇ ಹೈ ಪರ್ಫಾರ್ಮೆನ್ಸ್ ಹೆರಿಗೆ

0 comments

ಮೂರ್ನಾಲ್ಕು ತಿಂಗಳ‌ ಹಿಂದೆ ಮದುವೆಯಾದ ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಹಾಗೂ ಖ್ಯಾತ ನಟಿ ನಯನತಾರಾ ಖುಷಿ ಸುದ್ದಿಯನ್ನು ನೀಡಿದ್ದಾರೆ. ಮದುವೆ ಆಗಿ ನಾಲ್ಕೇ ತಿಂಗಳಿಗೆನೇ ನಾಲ್ಕುಮಕ್ಕಳ ಪೋಷಕರಾಗಿದ್ದೇವೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಎರಡೂ ಮಕ್ಕಳ ಕಾಲುಗಳ ಫೋಟೋವನ್ನು ಅಪ್ ಲೋಡ್ ಮಾಡಿ, ಟ್ರೋಲ್ ಗೆ ಗುರಿಯಾಗಿದ್ದಾರೆ.

ಹೌದು ಮದುವೆಯಾಗಿ 4 ತಿಂಗಳಿಗೆ ಹೇಗೆ ಮಗುವಾಗಲು ಸಾಧ್ಯ ಎಂದು ಟ್ರೋಲ್ ಮಾಡಿರುವ ನೆಟ್ಟಿಗರಿಗೆ, ದಂಪತಿ ಉತ್ತರ ಕೊಟ್ಟಿದ್ದಾರೆ.ಬಾಡಿಗೆ ತಾಯಿ ಮೂಲಕ ಜವಳಿ ಮಕ್ಕಳಿಗೆ ತಾಯಿ ಆಗಿದ್ದೇನೆ ಎಂದು ನಯನತಾರಾ ಹೇಳುತ್ತಿದ್ದಂತೆ, ನೆಗೆಟಿವ್ ಕಾಮೆಂಟ್ ಮಾಡಿದವರೇ ಹೆಚ್ಚು.

ಎರಡು ಮಕ್ಕಳು ನಿಮ್ಮಂತೆಯೇ ಸಿನಿಮಾ ರಂಗದಲ್ಲೇ ಮುಂದುವರೆಯಲಿ ಎಂದು ಕಾಮೆಂಟ್ ಮಾಡಿದ್ದಾರೆ.
ಮದುವೆಯಾದ ಮೂರೇ ತಿಂಗಳಿಗೆ ಇದು ಹೇಗೆ ಸಾಧ್ಯ ಎನ್ನುವವರಿಗೆ ಉತ್ತರವನ್ನೂ ಕೊಟ್ಟಿರುವ ದಂಪತಿ, ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳ ಪಾಲಕರಾಗಿದ್ದಾರೆ ಈ ಜೋಡಿ.

ಮಾರ್ಚ್ ನಲ್ಲಿ ಈ ಜೋಡಿ ಇನ್ನೂ ಮದುವೆ ಆಗದೇ ಇದ್ದ ಸಮಯದಲ್ಲಿ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದುಕೊಳ್ಳುವ ಪ್ಲ್ಯಾನ್ ಮಾಡಲಿದ್ದಾರೆ ಎಂಬ ಸುದ್ದಿ ತಮಿಳು ಸಿನಿಮಾ ರಂಗದಲ್ಲಿ ಹರಡಿತ್ತು. ಈಗ ಅದು ನಿಜವಾಗಿದೆ. ಮದುವೆಗೂ ಮುನ್ನ ಬಾಡಿಗೆ ತಾಯಿಯನ್ನು ಫಿಕ್ಸ್ ಮಾಡಿಯೇ ಇವರು ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅವಳಿ ಮಕ್ಕಳ ದಂಪತಿ ಆಗುವ ಮೂಲಕ ಅದನ್ನೂ ನಿಜ ಮಾಡಿದ್ದಾರೆ.

You may also like

Leave a Comment