Home » Oldest Book Market in the World: ಪ್ರಪಂಚದಲ್ಲೇ ಅತ್ಯಂತ ಹಳೆಯ ಪುಸ್ತಕ ಮಾರುಕಟ್ಟೆ ಇರುವುದು ಎಲ್ಲಿ ಗೊತ್ತಾ? ಈ ಸ್ಥಳದ ವಿಶೇಷತೆ ತಿಳಿದರೆ ಮೂಗಿನ ಮೇಲೆ ಬೆರಳಿಡ್ತೀರಾ…

Oldest Book Market in the World: ಪ್ರಪಂಚದಲ್ಲೇ ಅತ್ಯಂತ ಹಳೆಯ ಪುಸ್ತಕ ಮಾರುಕಟ್ಟೆ ಇರುವುದು ಎಲ್ಲಿ ಗೊತ್ತಾ? ಈ ಸ್ಥಳದ ವಿಶೇಷತೆ ತಿಳಿದರೆ ಮೂಗಿನ ಮೇಲೆ ಬೆರಳಿಡ್ತೀರಾ…

0 comments

ಓದುವ ಆಸಕ್ತಿ ಹವ್ಯಾಸ ಹೊಂದಿದ್ದವರಿಗೆ ಪುಸ್ತಕದಷ್ಟು ಉತ್ತಮ ಸಂಗಾತಿ ಮತ್ತೊಂದಿಲ್ಲ. ಹೊಸ ಹೊಸ ವಿಚಾರಗಳ ಜೊತೆಗೆ ಓದುಗನ ಭಾವನೆಗಳ ಜೊತೆ ಸಮ್ಮಿಲನವಾಗುವ ಇಲ್ಲವೇ ಓದುಗನ ಮನಸ್ಸಿನಲ್ಲಿ ಕಾತರ, ವಿಮರ್ಶೆಗೆ ತಳ್ಳಿ ಅಕ್ಷರ ಲೋಕದ ಸವಿಪಾಕದ ರುಚಿ ಕೇವಲ ” ಬಲ್ಲವನೇ ಬಲ್ಲ ಬೆಲ್ಲದ ರುಚಿಯ” ಎಂಬಂತೆ ಲೇಖನಿಯಿಂದ ಹೊರ ಹೊಮ್ಮುವ ಭಾವನಾ ಲಹರಿ ಕೆಲವೊಮ್ಮೆ ಖಡ್ಗಕ್ಕಿಂತ ಹರಿತವಾಗಿ ಓದುಗನ ಮನದಲ್ಲಿ ಚಿಂತನ ಮಂಥನ ನಡೆಸಲು ಪ್ರೇರೇಪಿಸಿದರು ಅಚ್ಚರಿಯಿಲ್ಲ.

ನಿಮಗೆ ಪ್ರಪಂಚದ ಅತ್ಯಂತ ಹಳೆಯ ಪುಸ್ತಕ ಮಾರುಕಟ್ಟೆ ಯಾವುದು ಎಂಬ ಮಾಹಿತಿ ನಿಮಗೆ ತಿಳಿದಿದೆಯೇ?
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಎಂಬ ಮಾಯಾವಿ ಬಲೆಗೆ ಬಿದ್ದು ಹೆಚ್ಚಿನವರು ಓದುವ ಆಸಕ್ತಿಯಿಂದ ವಿಮುಖರಾಗುತ್ತಿರುವುದು ವಿಪರ್ಯಾಸ. ಆದರೂ ಕೂಡ, ಜಗತ್ತಿನಲ್ಲಿ ಇಂದಿಗೂ ಅನೇಕ ಪುಸ್ತಕ ಪ್ರೇಮಿಗಳಿದ್ದು ಇತ್ತೀಚೆಗೆ ಟ್ವಿಟ್ಟರ್ ಹ್ಯಾಂಡಲ್ ಪ್ರಪಂಚದ ಅತ್ಯಂತ ಹಳೆಯ ಪುಸ್ತಕ ಮಾರುಕಟ್ಟೆಯ ಬಗ್ಗೆ ಮಾಹಿತಿ ಹಂಚಿಕೊಂಡಿದೆ. Bayt Al Fun ಖಾತೆಯ ಟ್ವಿಟರ್ ಹ್ಯಾಂಡಲ್, ಇರಾಕ್‌ನ ಬಾಗ್ದಾದ್‌ನಲ್ಲಿರುವ ಅಲ್-ಮುತಾನಬಿ ಸ್ಟ್ರೀಟ್‌ನ ಛಾಯಾಚಿತ್ರಗಳು ಮತ್ತು ವೀಡಿಯೊಗಳ ಮೂಲಕ ಈ ಬಗ್ಗೆ ವಿವರಣೆ ನೀಡಿದೆ.

ಈ ಅಲ್-ಮುತಾನಬ್ಬಿ ಬೀದಿಯನ್ನು ಮೊದಲು 1932 ರಲ್ಲಿ ಕಿಂಗ್ ಫೈಸಲ್ I ಸ್ಥಾಪಿಸಿದ್ದಾರೆ. ಇದಕ್ಕೆ 10 ನೇ ಶತಮಾನದ ಪ್ರಸಿದ್ಧ ಕವಿ ಅಬುಲ್ ತಯ್ಯಬ್ ಅಲ್-ಮುತಾನಬ್ಬಿ ಅವರ ಹೆಸರನ್ನು ಇಡಲಾಗಿದೆ. ಈ ಮಾರುಕಟ್ಟೆಯು ಹಳೆಯ ಬಾಗ್ದಾದ್‌ನ ಹೃದಯಭಾಗದಲ್ಲಿರುವ ಅಲ್-ಮುತಾನಬಿಯಲ್ಲಿದೆ. ಸಾಮಾನ್ಯವಾಗಿ ಶುಕ್ರವಾರದಂದು ವಿದ್ಯಾರ್ಥಿಗಳ ಜೊತೆಗೆ ಯುವಕರ ದಂಡು ಇಲ್ಲಿಗೆ ಆಗಮಿಸಿ ಪುಸ್ತಕದ ಓದುವ ಆಸಕ್ತಿ ಹವ್ಯಾಸ ರೂಡಿಸಿ ಕೊಂಡಿದ್ದಾರೆ. ಇದರ ಜೊತೆಗೆ ಪ್ರತಿನಿತ್ಯ ಕೆಲ ಓದುವ ಹವ್ಯಾಸ ಇರುವ ಆಸಕ್ತ ಓದುಗರು ಮತ್ತು ಹಳೆಯ ಪುಸ್ತಕ ಪ್ರೇಮಿಗಳು ಇಲ್ಲಿಗೆ ಭೇಟಿ ನೀಡಿ ತಮ್ಮ ಪುಸ್ತಕ ಪ್ರೇಮವನ್ನು ತೋರ್ಪಡಿಸುತ್ತಾರೆ.

ಈ ಸ್ಥಳವನ್ನು ಪ್ರಾಚೀನ ಕಾಲದಿಂದಲೂ ಬಾಗ್ದಾದ್‌ನ ಸಾಹಿತ್ಯಿಕ ಮತ್ತು ಬೌದ್ಧಿಕ ಸಮುದಾಯದ ಆತ್ಮವೆಂದು ಪರಿಗಣಿಸಲಾಗಿದೆ. ಈ ಮಾರುಕಟ್ಟೆಯ ವಿಶೇಷವೆಂದರೆ ಇಲ್ಲಿ ರಾತ್ರಿಯ ವೇಳೆಯೂ ಸಹ ಬೀದಿಗಳಲ್ಲಿ ಪುಸ್ತಕಗಳನ್ನು ಹರಡಿಡಲಾಗುತ್ತದೆ. ಇಲ್ಲಿಗೆ ಬಂದು ಜನರು ಓದಬಹುದಾಗಿದೆ. ಮುತಾನಬ್ಬಿ ಬೀದಿಯು ಬಾಗ್ದಾದ್‌ನ ಪುಸ್ತಕ ಮಾರಾಟದ ಐತಿಹಾಸಿಕ ಕೇಂದ್ರವಾಗಿದೆ.

ಅಲ್-ಮುತಾನಬಿ ಸ್ಟ್ರೀಟ್ ನೂರಾರು ಪುಸ್ತಕ ಮಳಿಗೆಗಳ ಜೊತೆಗೆ ಹೊರಾಂಗಣ ಪುಸ್ತಕ ಮಳಿಗೆಗಳು, ಕೆಫೆಗಳು, ಸ್ಟೇಷನರಿ ಅಂಗಡಿಗಳು ಮತ್ತು ಟೀ ಸ್ಟಾಲ್‌ ಗಳನ್ನು ಒಳಗೊಂಡಿವೆ. ಕಲಾ ಪ್ರದರ್ಶನಗಳು, ಗ್ಯಾಲರಿ, ಪುಸ್ತಕ ಮೇಳಗಳು ಮತ್ತು ಉತ್ಸವಗಳು ಅಲ್-ಮುತಾನಬಿಯ ಬೀದಿಗಳಲ್ಲಿ ನಡೆಯುವ ಜೊತೆಗೆ ಸಾಂಸ್ಕೃತಿಕ ಪುನರುಜ್ಜೀವನವನ್ನು ಪ್ರತಿನಿಧಿ ಸುತ್ತಿರುವುದು ವಿಶೇಷ.

ಸುಮಾರು ಒಂದು ದಶಕದ ಹಿಂದೆ ಬಾಂಬ್ ಸ್ಫೋಟಗಳ ಹೊರತಾಗಿಯೂ, ಅಲ್ ಮುತಾನಬ್ಬಿಯ ಆತ್ಮವು ಹಿಂದೆಂದಿಗಿಂತಲೂ ಬಲವಾಗಿ ಉಳಿದುಕೊಂಡಿದೆ ಎನ್ನಲಾಗಿದೆ. ಅಲ್-ಮುತಾನಬ್ಬಿ ಸ್ಟ್ರೀಟ್ ತನ್ನ ಪುಸ್ತಕ ಮಾರುಕಟ್ಟೆಯಿಂದಾಗಿ ಕನಿಷ್ಠ 8 ನೇ ಶತಮಾನದಿಂದಲೂ ಎಲ್ಲಾ ಧರ್ಮಗಳ ಬರಹಗಾರರಿಗೆ ಆಶ್ರಯ ನೀಡಿದೆ ಎನ್ನಲಾಗಿದೆ. ಯುದ್ಧ, ನಿರ್ಲಕ್ಷ್ಯ ಮತ್ತು ಅಸ್ಥಿರತೆಯ ನಡುವೆಯೂ ಬಾಗ್ದಾದ್‌ನ ಈ ತಾಣ ತನ್ನ ಸ್ವಂತಿಕೆಯ ಮೂಲಕ ಐತಿಹಾಸಿಕ ಪುನರುಜ್ಜೀವನಕ್ಕೆ ನಿದರ್ಶನವಾಗಿದೆ.

You may also like

Leave a Comment