Home » OTT: ಕನ್ನಡ ಸಿನಿಮಾಗಳಿಗೆ ಇನ್ನು ಸರ್ಕಾರದಿಂದಲೇ OTT ಪ್ರಾರಂಭ!!

OTT: ಕನ್ನಡ ಸಿನಿಮಾಗಳಿಗೆ ಇನ್ನು ಸರ್ಕಾರದಿಂದಲೇ OTT ಪ್ರಾರಂಭ!!

0 comments

OTT: ಕನ್ನಡ ಸಿನಿಮಾಗಳಿಗೆ ಸರ್ಕಾರದಿಂದಲೇ ಓಟಿಟಿ ಯನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಕನ್ನಡ ಸಿನಿಮಾಗಳಿಗೆ ವೇದಿಕೆ ಕಲ್ಪಿಸಲು ಸಹಕಾರಿಯಾಗುತ್ತದೆ ಎಂದು ಕಂಠೀರವ ಸ್ಟುಡಿಯೋಸ್ ನಿಯಮಿತ ಅಧ್ಯಕ್ಷ ಮಹಬೂಬ್ ಪಾಷ ತಿಳಿಸಿದ್ದಾರೆ.

ಈ ಕುರಿತಾಗಿ ಮಾತನಾಡಿದವರು ‘ಈ ಬಗ್ಗೆ ಚರ್ಚಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ನಿರ್ಮಾಕರು, ಕಲಾವಿದರು, ತಂತ್ರಜ್ಞರು ಸಂಕಷ್ಟದಲ್ಲಿ ಇದ್ದಾರೆ. ಕನ್ನಡದ ಎಲ್ಲ ಸಿನಿಮಾಗಳಿಗೆ ವೇದಿಕೆ ಕಲ್ಪಿಸಲು ಒತ್ತು ನೀಡಲಾಗುವುದು. ಅಮೆಜಾನ್, ಜೀವ, ಜಿಯೋ ಹಾಟ್‌ರ್ಸ್ಟಾ, ನೆಟ್‌ಫಿಕ್ಸ್ ಇತರೆ ಒಟಿಟಿಗಳಲ್ಲಿ ಕನ್ನಡದ ಆಯ್ದ ಚಲನಚಿತ್ರಗಳಿಗಷ್ಟೇ ವೇದಿಕೆ ಸಿಗುತ್ತಿದೆ. ಇದರಿಂದ 4 ಸಾವಿರಕ್ಕೂ ಅಧಿಕ ಕನ್ನಡ ಚಿತ್ರಗಳು ಬಿಡುಗಡೆಗೊಂಡಿಲ್ಲ. ವಿತರಕರು, ಚಿತ್ರಮಂದಿರಗಳ ಸಮಸ್ಯೆಯೂ ಕಾಡುತ್ತಿದೆ’ ಎಂದರು.

‘ಒಟಿಟಿ ಸ್ಥಾಪನೆಗೆ ತಾಂತ್ರಿಕ ಸಿದ್ಧತೆ ಆಗಿದೆ. ಈ ಕ್ರಮದಿಂದ ಹೊಸ ಪ್ರತಿಭೆಗಳಿಗೂ ಹೆಚ್ಚಿನ ಅವಕಾಶ ದೊರಕಲಿದೆ. ವೀಕ್ಷಣೆ ಆಧಾರದಲ್ಲಿ ನಿರ್ಮಾಪಕರ ಜೊತೆಗೆ ಲಾಭಾಂಶವನ್ನು ಹಂಚಿಕೊಳ್ಳಲಾಗುವುದು. ಓ ಟಿ ಟಿ ನಿರ್ಮಾಣವಾದರೆ ಕನ್ನಡ ಧಾರಾವಾಹಿಗಳು, ಸಿನಿಮಾಗಳು, ಜನಪದ ಕಲೆ, ಬುಡಕಟ್ಟು ಸಂಸ್ಕೃತಿಗಳಿಗೆ ಜಾಗತಿಕ ಮನ್ನಣೆ ದೊರೆಯುತ್ತದೆ ಎಂದು ಭರವಸೆಯನ್ನು ನೀಡಿದರು.

You may also like