Home » ಪತ್ನಿಗೆ ಕತ್ತೆಯನ್ನು ಗಿಫ್ಟ್ ಕೊಟ್ಟ ಪತಿ | ಯಾಕೆ ಗೊತ್ತಾ?

ಪತ್ನಿಗೆ ಕತ್ತೆಯನ್ನು ಗಿಫ್ಟ್ ಕೊಟ್ಟ ಪತಿ | ಯಾಕೆ ಗೊತ್ತಾ?

0 comments

ಪ್ರತಿಯೊಬ್ಬರು ತಮಗಿಷ್ಟವಾದ ವ್ಯಕ್ತಿಗೆ ಗಿಫ್ಟ್ ಕೊಡಬೇಕಾದರೆ ಅವರಿಗೆ ಏನಿಷ್ಟನೋ ಅದನ್ನೇ ಕೊಡುತ್ತಾರೆ. ಅಥವಾ ಎಂದೆಂದಿಗೂ ನೆನಪಿನಲ್ಲಿ ಉಳಿಯುವಂತಹ ಉಡುಗೊರೆಯನ್ನ ಕೊಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತಾನು ಮದುವೆಯಾದ ಹುಡುಗಿಗೆ ಕತ್ತೆಯನ್ನು ಉಡುಗೊರೆಯಾಗಿ ನೀಡಿದ್ದಾನೆ. ಕೇಳಿದರೆನೇ ಆಶ್ಚರ್ಯದ ಜೊತೆಗೆ ಕುತೂಹಲ ಎನಿಸುತ್ತದೆ ಅಲ್ವಾ!!! ಇನ್ನೂ ಯಾಕಾಗಿ ಈ ವಿಶೇಷ ಗಿಫ್ಟ್ ಎಂದು ನೋಡೋಣ.

ಈತ ಪಾಕಿಸ್ತಾನದ ಯೂಟ್ಯೂಬರ್, ತಮ್ಮ ಮದುವೆಯ ದಿನದಂದು ತನ್ನ ಪತ್ನಿಗೆ ಕತ್ತೆಯನ್ನು ಉಡುಗೊರೆ ನೀಡಿದ್ದಾರೆ. ಮದುವೆಗೆ ಆಗಮಿಸಿದ್ದ ಜನರೆಲ್ಲಾ ಕಣ್ಣುಮಿಟುಕಿಸದೆ ಈ ದೃಶ್ಯವನ್ನು ನೋಡಿದ್ದಾರೆ, ಏನಿದು ವಿಶೇಷವಾಗಿದೆ ಎಂದು. ಒಂದು ಕ್ಷಣ ವರ ಅಲ್ಲಿ ನೆರೆದಿದ್ದ ಜನರ ಗಮನಸೆಳೆದುಬಿಟ್ಟ ಎನ್ನಬಹುದು.

ಕರಾಚಿಯ ಯೂಟ್ಯೂಬರ್ ಅಜ್ಲಾನ್ ಶಾ ಎಂಬವರು ಆರಕ್ಷತೆಯಲ್ಲಿ ಕತ್ತೆ ಮರಿಯೊಂದನ್ನು ತಂದು ತನ್ನ ಹೆಂಡತಿಗೆ ಉಡುಗೊರೆಯಾಗಿ ನೀಡಿದ್ದಾರೆ. ಕತ್ತೆ ಮರಿಯನ್ನು ನೋಡುತ್ತಿದ್ದ ಹಾಗೆ ಆತನ ಪತ್ನಿ ವಾರಿಷಾ ಅಚ್ಚರಿಯ ಜೊತೆಗೆ ಸಂತಸಗೊಂಡಿದ್ದಾರೆ.

ಸಂತಸ ಯಾಕಂದ್ರೆ, ವಾರಿಷಾಗೆ ಕತ್ತೆ ಮರಿಗಳೆಂದರೆ ತುಂಬಾ ಇಷ್ಟವಂತೆ. ಹಾಗಾಗಿ ಆಕೆಗೆ ಮದುವೆಯ ಉಡುಗೊರೆಯಾಗಿ ಕತ್ತೆ ಮರಿಯನ್ನು ಕೊಟ್ಟಿದ್ದೇನೆ. ಇನ್ನೂ, ಕತ್ತೆಯೂ ವಿಶ್ವದ ಅತ್ಯಂತ ಶ್ರಮಶೀಲ ಹಾಗೂ ಪ್ರೀತಿಯ ಪ್ರಾಣಿಯಾಗಿದೆ ಎಂದು ಅಜ್ಲಾನ್ ಕತ್ತೆ ಗಿಫ್ಟ್ ಕೊಟ್ಟಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಈ ಅದ್ಭುತ ದೃಶ್ಯವು ಫೋಟೋ, ವಿಡಿಯೋ ಮೂಲಕ ಸೆರೆಯಾಗಿದ್ದು, ಇದನ್ನು ಅಜ್ಲಾನ್ ಶಾ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಹಲವು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಭಿನ್ನ ವಿಭಿನ್ನ ಕಾಮೆಂಟ್ ಗಳಲ್ಲಿ, ಹಾಸ್ಯ ಮಾಡಿದವರು ಒಂದು ಕಡೆಯಾದ್ರೆ, ಇನ್ನೊಂದು ಕಡೆ ಗ್ರೇಟ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದವರೂ ಇದ್ದಾರೆ. ಅದರಲ್ಲೂ ಒಂದು ಕಾಮೆಂಟ್ ಹೀಗಿತ್ತು, ಒಂದು ಕತ್ತೆಯ ಜೊತೆ ಮತ್ತೊಂದು ಕತ್ತೆ ಫ್ರೀ ಎಂದು ಹೇಳಲಾಗಿತ್ತು.

https://www.instagram.com/tv/Cl6tOLxj33Y/?igshid=YmMyMTA2M2Y=

You may also like

Leave a Comment