Home » Pavitra Gowda: ಕೊಲೆ ಪ್ರಕರಣ ಬಗ್ಗೆ ಶಾಕಿಂಗ್ ಸತ್ಯ ಬಿಚ್ಚಿಟ್ಟ ಪವಿತ್ರ ಗೌಡ !!

Pavitra Gowda: ಕೊಲೆ ಪ್ರಕರಣ ಬಗ್ಗೆ ಶಾಕಿಂಗ್ ಸತ್ಯ ಬಿಚ್ಚಿಟ್ಟ ಪವಿತ್ರ ಗೌಡ !!

0 comments
Pavitra Gowda

Pavitra Gowda: ಇಡೀ ರಾಜ್ಯದ್ಯಾಂತ ಸಂಚಲನ ಸೃಷ್ಟಿಸಿದ ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಕುರಿತು ಪ್ರತೀ ದಿನವೂ ಸ್ಪೋಟಕ ವಿಚಾರಗಳು ಹೊರಬರುತ್ತಿವೆ. ಅಂತೆಯೇ ಇದೀಗ ಆರೋಪಿ ಪವಿತ್ರಾ ಗೌಡ(Pavitra Gowda) ಶಾಕಿಂಗ್ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.

ದೇವರ ಆಶೀರ್ವಾದ ಪಡೆಯಲು ಬ್ರಹ್ಮ ಮುಹೂರ್ತದಲ್ಲಿ ಈ ಒಂದು ಕೆಲಸ ಮಾಡಿ ಸಾಕು!

ಹೌದು, ತನಿಖೆ ವೇಳೆ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ಪವಿತ್ರಾ, ಕೊಲೆ ಪ್ರಕರಣಕ್ಕೂ ಮುನ್ನ ನಡೆದ ಘಟನೆ ಬಗ್ಗೆ ಬೆಚ್ಚಿಬೀಳಿಸೋ ಮಾಹಿತಿ ಹಂಚಿಕೊಂಡಿದ್ದಾಳೆ. ಅದೇನೆಂದರೆ ‘ರೇಣುಕಾಸ್ವಾಮಿ(Renukaswamy) ನನಗೆ ಆಶ್ಲೀಲ ಸಂದೇಶ ಮತ್ತು ಫೋಟೋ ಕಳುಹಿಸಿದ್ದನ್ನು ಕಂಡು ನಾನು ಪವನ್‌ಗೆ (ಪವಿತ್ರಾ ಮನೆ ಕೆಲಸದವನು) ತೋರಿಸಿದೆ. ಈತ ಯಾರು? ಇವನ ಮೂಲವೇನು ಎಂಬುದನ್ನು ಹುಡುಕು. ಆದರೆ, ಈ ವಿಷಯ ಯಾವುದೇ ಕಾರಣಕ್ಕೂ ದರ್ಶನ್(Darshan) ಕಿವಿಗೆ ಬೀಳುವುದು ಬೇಡ. ಬಿದ್ದರೆ ಏನಾದ್ರೂ ಅನಾಹುತ ಆಗಬಹುದು ಎಂದು ಹೇಳಿದ್ದೆ” ಎಂದು ಬಾಯಿಬಿಟ್ಟಿದ್ದಾಳೆ.

ಇಷ್ಟೇ ಅಲ್ಲದೆ ‘ದರ್ಶನ್‌ಗೆ ಈ ವಿಚಾರ ಗೊತ್ತಾಗಬಾರದು ಎಂದಿದ್ದೆ. ಆದರೂ ಅದು ಹೇಗೋ ತಿಳಿಯಿತು. ಆದರೆ ಅವರು ಕೊಲೆ ಮಾಡುತ್ತಾರೆ ಎಂಬ ಸಣ್ಣ ಕಲ್ಪನೆಯೂ ಸಹ ನನಗೆ ಇರಲಿಲ್ಲ. ಹತ್ಯೆ ಮಾಡುತ್ತಾರೆ ಅಂದಿದ್ದರೆ, ನಾನೇ ಕಂಪ್ಲೆಂಟ್ ಕೊಟ್ಟು ಸರಿಮಾಡಿಕೊಳ್ಳುತ್ತಿದ್ದೆ” ಎಂದು ಸಮಜಾಯಿಷಿ ನೀಡಿದ್ದಾರೆ ಎಂದ ತಿಳಿದುಬಂದಿದೆ.

Actor Darshan Arrest: ನಟ ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಎಲ್ಲಿ? ʼಡಿʼ ಗ್ಯಾಂಗ್‌ ಮೇಲೆ ಅನುಮಾನ

You may also like

Leave a Comment