Radhika Kumaraswamy: ರಾಧಿಕಾ ಕುಮಾರಸ್ವಾಮಿ(Radhika Kumaraswamy) ಮದುವೆಯಾದ ಮೇಲೆ ಸಿನಿಮಾ ರಂಗದಿಂದ ಸ್ವಲ್ಪ ಬ್ರೇಕ್ ತಗೊಂಡಿದ್ದರೂ, ಆಮೇಲೆ ಮತ್ತೆ ತಮ್ಮ ಸಿನಿ ಕೆರಿಯರ್ ಶುರು ಮಾಡಿಕೊಂಡಿದ್ದರು. ರಾಧಿಕಾ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ. ಈಗ ಅವರು ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಅದರಲ್ಲಿ ನಾಯಕಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಚಿತ್ರಕ್ಕೆ ʼಅಜಾಗ್ರತʼ ಎಂದು ಹೆಸರಿಡಲಾಗಿದೆ.
ಬಾಲಿವುಡ್‌ನ ಹೆಸರಾಂತ ನಟ ಶ್ರೇಯಸ್ ತಲಪಡೆ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ರಾಧಿಕಾ. ಈ ಚಿತ್ರದಲ್ಲಿ ಶ್ರೇಯಸ್ ನಾಯಕ ನಟನಾಗಿ ಮಿಂಚಲಿದ್ದಾರೆ. ಗೋಲ್ ಮಾಲ್ ಚಿತ್ರದ ಮೂಲಕ ಹಾಸ್ಯದ ಚಟಾಕಿಯನ್ನೇ ಹಾರಿಸಿದ ನಟ ಎಂದರೆ ಶ್ರೇಯಸ್ ತಲಪಾಡೆ( Shreyas Talpade).

Image Credit Source: The Indian Express
ಮೇ.13 ರಂದು ಈ ಸಿನಿಮಾದ ಮುಹೂರ್ತ ಹೈದರಾಬಾದ್‌ನ ರಾಮನಾಯ್ಡು ಸ್ಟುಡಿಯೋದಲ್ಲಿ ನಡೆಯಲಿದೆ. ಈ ಸಿನಿಮಾವು ಬರೋಬ್ಬರಿ ಏಳು ಭಾಷೆಗಳಲ್ಲಿ ಸಿದ್ಧಗೊಳ್ಳಲಿದೆ. ರವಿರಾಜ್ ಈ ಸಿನಿಮಾದ ನಿರ್ಮಾಣ ಹೊಣೆ ಹೊತ್ತಿದ್ದಾರೆ. ಯುವ ನಿರ್ದೇಶ ಎಂ. ಶಶಿಧರ್ ಈ ಚಿತ್ರ ನಿರ್ದೇಶಿಸಲಿದ್ದಾರೆ.
ಸಿನಿಮಾ ಆಯ್ಕೆ ವಿಚಾರದಲ್ಲಿ ಬಹಳ ಚ್ಯೂಸಿ ಆಗಿರುವ ರಾಧಿಕಾ ಕುಮಾರಸ್ವಾಮಿ ಅವರು ಈಗ ಈ ಸಿನಿಮಾ ಮೂಲಕ ತಮ್ಮ ಮತ್ತೆ ತಮ್ಮ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ‘ಅಜಾಗ್ರತ’ ಸೈಕಾಲಜಿಕಲ್ ಕ್ರೈಂ ಥ್ರಿಲರ್ ಶೈಲಿಯಲ್ಲಿ ಮೂಡಿ ಬರುತ್ತಿದೆ. ಭಿನ್ನ ಪ್ರಯತ್ನ ಹೊಂದಿರುವ ಅಜಾಗ್ರತ ಸಿನಿಮಾ ಸಿನಿ ಪ್ರಿಯರಿಗಾಗಿ ಏಕಕಾಲಕ್ಕೆ ಏಳು ಭಾಷೆಗಳಲ್ಲಿ ಬರುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿ ಇತರ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.
ನಿರ್ದೇಶಕ ಶಶಿಧರ್ ಅವರು ಈ ಸಿನಿಮಾದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಕಲಾವಿದರ ದಂಡೇ ಇದೆ. ರಾಧಿಕಾ ಕುಮಾರಸ್ವಾಮಿ, ಸ್ಪರ್ಶ ರೇಖಾ, ದೇವರಾಜ್, ಸುಚೇಂದ್ರ ಪ್ರಸಾದ್, ವಿನಯ್ ಪ್ರಸಾದ್, ಚಿತ್ರ ಶೆಣೈ, ಮುಂತಾದವರು ಸಿನಿಮಾದಲ್ಲಿ ನಟಿಸಲಿದ್ದಾರೆ. ತೆಲುಗು ಚಿತ್ರರಂಗದ ರಾವ್ ರಮೇಶ್, ಪುಷ್ಪ ಸುನಿಲ್, ರಾಘವೇಂದ್ರ ಶ್ರವಣ್ ಈ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ ತಮಿಳಿನಿಂದ ಆದಿತ್ಯ ಮೆನನ್, ಸಮುದ್ರ ಕಣಿ, ಜಯ್ ಪ್ರಕಾಶ್ ಇದ್ದಾರೆ.
ಇದನ್ನೂ ಓದಿ: ಚಲಿಸುವ ಬೈಕ್ ಮೇಲೆ ಒಬ್ಬರನ್ನೊಬ್ಬರು ಅಪ್ಪಿಕೊಂಡು ಲಿಪ್ಲಾಕ್ ಮಾಡಿದ ಹುಡುಗಿಯರು!
