Home » ಆಸ್ಕರ್ ಆವಾರ್ಡ್‌ಗೆ ಎಂಟ್ರಿ ಪಡೆದಿದ್ದ ಛೆಲ್ಲೋ ಶೋ ಬಾಲ‌ನಟ ರಾಹುಲ್ ಇನ್ನು ನೆನಪು ಮಾತ್ರ

ಆಸ್ಕರ್ ಆವಾರ್ಡ್‌ಗೆ ಎಂಟ್ರಿ ಪಡೆದಿದ್ದ ಛೆಲ್ಲೋ ಶೋ ಬಾಲ‌ನಟ ರಾಹುಲ್ ಇನ್ನು ನೆನಪು ಮಾತ್ರ

by Praveen Chennavara
0 comments

95ನೇ ಆಸ್ಕರ್‌ ಅಕಾಡೆಮಿ ಆವಾರ್ಡ್ಸ್‌ ಗೆ ಎಂಟ್ರಿ ಪಡೆದ ಗುಜರಾತಿ ಸಿನಿಮಾ ʼಛೆಲ್ಲೋ ಶೋʼದಲ್ಲಿ ಬಾಲನಟನಾಗಿ ನಟಿಸಿದ್ದ ರಾಹುಲ್‌ ಕೋಲಿ ಕ್ಯಾನ್ಸರ್‌ ನಿಂದ ಮೃತಪಟ್ಟಿದ್ದಾರೆ.

ರಾಹುಲ್‌ ಕೋಲಿ(15) ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ ಎಂದು ರಾಹುಲ್‌ ತಂದೆ ತಿಳಿಸಿದ್ದಾರೆ.

ಮಾಧ್ಯಮದ ಜೊತೆ ಮಾತಾನಾಡಿದ ಅವರು, ಅ.2 ರಂದು ರಾಹುಲ್‌ ತಿಂಡಿ ಮುಗಿಸಿದ ಮೇಲೆ, ವಿಪರೀತ ಜ್ವರ ಕಾಣಿಸಿಕೊಂಡಿದೆ. ಮೂರು ಬಾರಿ ರಕ್ತದ ವಾಂತಿ ಮಾಡಿದ್ದಾನೆ. ಆ ಬಳಿಕ ನಮ್ಮನ್ನು ಅಗಲಿದ್ದಾನೆ. ನಮ್ಮ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ. ಅವನು ನಟಿಸಿರುವ ʼಛೆಲ್ಲೋ ಶೋʼ ಅ.14 ರಂದು ರಿಲೀಸ್‌ ಆಗಲಿದೆ ಅದನ್ನು ನಾವೆಲ್ಲಾ ಒಟ್ಟಾಗಿ ನೋಡಿದ ಬಳಿಕ, ಆತನ ಅಂತಿಮ ಕ್ರಿಯಾವಿಧಾನವನ್ನು ಮಾಡುತ್ತೇವೆಂದು ದುಃಖವನ್ನು ಹಂಚಿಕೊಂಡರು.

ಬಳಿಕ ಮಾತನಾಡಿದ ರಾಹುಲ್‌ ತಂದೆ, ಮಗನ ಚಿಕಿತ್ಸೆಗಾಗಿ ನನ್ನ ಕೈಯಲ್ಲಿ ಹಣವಿರಲಿಲ್ಲ ಅದಕ್ಕಾಗಿ ಆಟೋವನ್ನು ಮಾರಬೇಕಾಯಿತು. ಆದರೆ ಈ ವಿಚಾರ ಚಿತ್ರ ತಂಡದವರಿಗೆ ಗೊತ್ತಾಗಿ ಆಟೋವನ್ನು ಹಿಂದಕ್ಕೆ ಪಡೆದು ನನಗೆ ನೀಡಿದ್ದಾರೆ ಎಂದರು.

ಸಿನಿಮಾ ಬಿಡುಗಡೆ ಆದ ಮೇಲೆ ನಮ್ಮ ಜೀವನ ಬದಲಾಗುತ್ತದೆ ಎಂದು ಆತ ಹೇಳುತ್ತಿದ್ದ. ಆದರೆ ಅದಕ್ಕೂ ಮುನ್ನ ಆತ ನಮ್ಮನ್ನು ಬಿಟ್ಟು ಹೋಗಿದ್ದಾನೆ ಎಂದರು

You may also like

Leave a Comment