ರಿಷಿಕಾ ಸಿಂಗ್ ಕನ್ನಡ ಚಿತ್ರರಂಗದ ಪ್ರಮುಖ ನಾಯಕನಟಿ. ಇವರು ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಎಸ್.ವಿ ರಾಜೇಂದ್ರಸಿಂಗ್ ಬಾಬುರವರ ಪುತ್ರಿ. ಇವರು ಸಹೋದರ ಆದಿತ್ಯ ಕೂಡ ಕನ್ನಡ ಚಿತ್ರರಂಗದಲ್ಲಿ ಪ್ರಮುಖ ನಾಯಕನಟನಾಗಿದ್ದಾರೆ. ನಿರ್ಮಾಪಕಿ ವಿಜಯಲಕ್ಷ್ಮಿ ಸಿಂಗ್ ಮತ್ತು ಜೈ ಜಗದೀಶ್ ಇವರ ಸಂಬಂಧಿಕರು. ಚಿತ್ರರಂಗದಲ್ಲಿ ಮಿಂಚ ಬೇಕಾಗಿದ್ದ ನಟಿ ಬಾಳಲ್ಲಿ ವಿಧಿ ಬೇರೆನೇ ಬರೆದಿತ್ತು. ಆ ದಿನ ರಿಷಿಕಾ ಸಿಂಗ್ ಪಾಲಿಗೆ ದುರಾದೃಷ್ಟದ ದಿನ ಎಂದೇ ಹೇಳಬಹುದು. 2020 ಜುಲೈ 28 ರಂದು ನಡೆದ ಭೀಕರ ರಸ್ತೆ ಅಫಘಾತದಲ್ಲಿ ನಟಿ ರಿಷಿಕಾ ಸಿಂಗ್ ತನ್ನ ಬೆನ್ನು ಮೂಳೆಗೆ ಬಲವಾಗಿ ಪೆಟ್ಟು ಮಾಡಿಕೊಂಡಿದ್ದರು. ಈ ಘಟನೆ ನಡೆದು ಹತ್ತಿರತ್ತಿರ ಎರಡು ವರ್ಷ ಆಗ್ತಾ ಬಂತು. ಈಗ ರಿಷಿಕಾ ಅವರು ಹೇಗಿದ್ದಾರೆ ಎಂಬ ಮಾಹಿತಿಯೊಂದು ದೊರಕಿದೆ.
ಸ್ನೇಹಿತರೊಂದಿಗೆ ಪಾರ್ಟಿ ಮಾಡಲೆಂದು ಹೋಗಿದ್ದ ರಿಷಿಕಾ ಅವರು ವೈಟ್‌ಫೀಲ್ಡ್ ಬಳಿ ವಾಪಸಾಗುವ ಸಂದರ್ಭದಲ್ಲಿ ಭೀಕರ ಅಪಘಾತ ನಡೆದಿತ್ತು. ಈ ಆಕ್ಸಿಂಡೆಂಟ್ ನಂತರ ನಟಿಗೆ ಏನಾಯಿತು, ಹೇಗಿದ್ದಾರೆ ಎಂಬ ಮಾಹಿತಿ ಇರಲಿಲ್ಲ. ಈಗ ರಿಷಿಕಾ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಅವರು ತಮ್ಮ ರಿಕವರಿ ಹಾಗೂ ಇಷ್ಟು ದಿನದ ಜರ್ನಿ ಬಗ್ಗೆ ಮಾತನಾಡಿದ್ದಾರೆ.
ರಿಷಿಕಾ ಸಿಂಗ್ ತಮ್ಮ ಪೋಸ್ಟ್‌ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ “1.5 ವರ್ಷಗಳ ಹಿಂದೆ ಅಪಘಾತವಾಗಿತ್ತು. ದೇವರ ದಯೆಯಿಂದ ನಾನು ಸುಧಾರಿಸಿಕೊಂಡೆ. ವೈದ್ಯೋ ನಾರಾಯಣೋ ಹರಿಃ ಎಂದು ಹೇಳುವ ಹಾಗೆ, ನನಗೆ ಧೈರ್ಯ ತುಂಬಿ ನನ್ನ ಬೆನ್ನುಮೂಳೆ ಸರಿ ಹೋಗುವಂತೆ ಮಾಡಿ, ಐರನ್ ಮಹಿಳೆಯನನ್ನಾಗಿಸಿದ ವೈದ್ಯರಿಗೆ ಧನ್ಯವಾದಗಳು. ನನ್ನ ಕುಟುಂಬ ನನ್ನ ಶಕ್ತಿಯಾಗಿ ನಿಂತಿತ್ತು. ಭಯಕ್ಕಿಂತ ಜಾಸ್ತಿ ನನಗೆ ನಂಬಿಕೆಯಿತ್ತು. ಅದೇ ನನ್ನನ್ನು ಸುಧಾರಿಸಿತು. ಅಸಾಧ್ಯವಾದುದು ಯಾವುದೂ ಇಲ್ಲ. ನನ್ನ ಆರೋಗ್ಯ ಸುಧಾರಣೆಗೆ ಹಾರೈಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಬರೆದಿದ್ದಾರೆ.
ರಿಷಿಕಾ ಸಿಂಗ್ ಇವರ ಬಾಲ್ಯದ ಹೆಸರು ರೋಹಿಣಿ. ಬೆಂಗಳೂರಿನ ಮೌಂಟ್ ಕಾರ್ಮೇಲ್ ಶಾಲೆಯಿಂದ ಪದವಿ ಪಡೆದಿರುವ ಇವರು ಜೀ ಕನ್ನಡದ `ರಗಳೆ ವಿತ್ ರಿಷಿಕಾ’ ಕಾರ್ಯಕ್ರಮದಿಂದ ಪ್ರಸಿದ್ಧಾರಾಗಿದ್ದರು. ಬಿಗ್‌ಬಾಸ್ ಕನ್ನಡದ ಮೊದಲನೇ ಸೀಸನ್‌ನ ಸ್ಪರ್ಧಿಯಾಗಿದ್ದರು. ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ರಿಷಿಕಾ ಉತ್ತಮ ನಟಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದರು. ಕಂಠೀರವ, ಕಳ್ಳ ಮಳ್ಳ ಸುಳ್ಳ, ಕಠಾರಿ ವೀರ ಸುರ ಸುಂದರಾಂಗಿ, ಬೆಂಕಿ ಬಿರುಗಾಳಿ, ಮಾಣಿಕ್ಯ ಸಿನಿಮಾಗಳಲ್ಲಿ ರಿಷಿಕಾ ಸಿಂಗ್ ನಟಿಸಿದ್ದು, ಕನ್ನಡ ಚಿತ್ರರಂಗ ಪ್ರತಿಭಾನ್ವಿತ ನಟಿ ಎಂದರೇ ತಪ್ಪಾಗಲಾರದು.
https://www.instagram.com/reel/CoFlEyDg-ej/?utm_source=ig_web_copy_link
