Home » Bigg Boss-12 : ಸುದೀಪ್ ಹೇಳಿದ ಆ ಒಂದು ಮಾತಿನಿಂದ ರಕ್ಷಿತಾ ಇಮೇಜ್, ಡ್ಯಾಮೇಜ್? ವೀಕ್ಷಕರಿಂದ ಭಾರಿ ಆಕ್ರೋಶ

Bigg Boss-12 : ಸುದೀಪ್ ಹೇಳಿದ ಆ ಒಂದು ಮಾತಿನಿಂದ ರಕ್ಷಿತಾ ಇಮೇಜ್, ಡ್ಯಾಮೇಜ್? ವೀಕ್ಷಕರಿಂದ ಭಾರಿ ಆಕ್ರೋಶ

0 comments

Bigg Boss-12 : ಬಿಗ್ ಬಾಸ್ ಕನ್ನಡ ಸೀಸನ್ 12 ಇದೀಗ ಮುಕ್ತಾಯದ ಹಂತವನ್ನು ತಲುಪಿದ್ದು ಇನ್ನು ಕೆಲವೇ ವಾರಗಳಲ್ಲಿ ಫಿನಾಲೆ ಕೂಡ ನಡೆಯಲಿದೆ. ಫಿನಾಲೆ ಹತ್ತಿರವಾಗುತ್ತಿದ್ದಂತೆ ಮನೆಯೊಳಗಿನ ಆಟದ ಕಾವು ಹೆಚ್ಚಾಗಿದ್ದರೆ, ಹೊರಗಡೆ ವೀಕ್ಷಕರ ಚರ್ಚೆಯೂ ಜೋರಾಗಿದೆ. ಆದರೆ ಮೊನ್ನೆ ನಡೆದ ವಾರಾಂತ್ಯದ ಪಂಚಾಯಿತಿಯಲ್ಲಿನ ಘಟನೆಯೊಂದು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ

ಹೌದು, ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ರಕ್ಷಿತಾ ಶೆಟ್ಟಿ ಅವರ ಕುರಿತಾಗಿ ನೀಡಿದ ಆ ಒಂದು ಹೇಳಿಕೆ ಇದೀಗ ಹೊರಗಡೆ ಸಾರ್ವಜನಿಕ ವಲಯದಲ್ಲಿ ಬಾರಿ ಸದ್ದು ಮಾಡುತ್ತಿದೆ. ವೀಕ್ಷಕರಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟು ಹಾಕಿದೆ. ಹಾಗಿದ್ರೆ ಸುದೀಪ ಅವರು ಹೇಳಿದ್ದೇನು? ರಕ್ಷಿತಾ ಶೆಟ್ಟಿ ಅವರ ಇಮೇಜ್ ಡ್ಯಾಮೇಜ್ ಆಗಲು ಕಾರಣವೇನು?

ಯಸ್, ರಕ್ಷಿತಾ ಶೆಟ್ಟಿ ಅವರನ್ನು ಕುರಿತು ಸುದೀಪ್ ಬಳಕೆ ಮಾಡಿದ ಪದಕ್ಕೆ ಬಿಗ್‌ಬಾಸ್ ವೀಕ್ಷಕರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪ್ರೋಮೋ ವಿಡಿಯೋಗೆ ಕಮೆಂಟ್‌ ಮೂಲಕ ಸುದೀಪ್ ಅವರ ಬಾಯಲ್ಲಿ ಈ ಮಾತು ಬರಬಾರದಿತ್ತು ಎಂದು ಸುಮತಿ ಕಮೆಂಟ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಅವರು ರಕ್ಷಿತಾ ಶೆಟ್ಟಿ ಅವರ ಮುಖಭಾವ ಅಥವಾ ಪ್ರತಿಕ್ರಿಯೆಯನ್ನು ಉದ್ದೇಶಿಸಿ ಉರಿಯುತ್ತಾ ಇದೆಯಾ ಎಂಬರ್ಥದ ಪದವನ್ನು ಬಳಸಿದ್ದಾರೆ. ಸಾಮಾನ್ಯವಾಗಿ ಮನೆಯ ಸದಸ್ಯರ ತಪ್ಪುಗಳನ್ನು ತಿದ್ದಿ ಬುದ್ಧಿ ಹೇಳಬೇಕಾದ ನಿರೂಪಕರೇ, ಸ್ಪರ್ಧಿಯೊಬ್ಬರ ಬಗ್ಗೆ ಇಂತಹ ಆಡುಭಾಷೆಯ ಅಥವಾ ವ್ಯಂಗ್ಯದ ಪದವನ್ನು ಬಳಸಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಎದ್ದಿದೆ. ಈ ಮಾತು ರಕ್ಷಿತಾ ಅವರ ವ್ಯಕ್ತಿತ್ವಕ್ಕೆ ಡ್ಯಾಮೇಜ್ ಮಾಡುವಂತಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಸುಮತಿ ಕೆಮ್ಮಣ್ಣು ಎಂಬ ವೀಕ್ಷಕರು ಕಮೆಂಟ್ ಮಾಡಿ, ರಕ್ಷಿತಾ ಎಷ್ಟೇ ದಡ್ಡ ಪ್ರೇಮಿಯಂತೆ ಇದ್ದರೂ ಅಥವಾ ಆಟದ ಬಗ್ಗೆ ಗೊಂದಲವಿದ್ದರೂ, ಸುದೀಪ್ ಅವರ ಬಾಯಲ್ಲಿ ಅಂತಹ ಪದ ಬರಬಾರದಿತ್ತು. ಇದು ನೇರವಾಗಿ ಅವರ ವ್ಯಕ್ತಿತ್ವಕ್ಕೆ ಡ್ಯಾಮೇಜ್ ಮಾಡುವ ಮಾತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ವೀಕ್ಷಕರಾದ ಮೋಹನ್ ಕುಮಾರ್, ಉರಿಯುತ್ತೆ ಅಂತ ಸುದೀಪ್ ಹೇಳೋದು ಸರಿ ಇಲ್ಲ. ಈ ಸೀಸನ್‌ನಲ್ಲಿ ಸುದೀಪ್ ಅವರ ಯಾವ ಪಂಚಾಯಿತಿಯೂ ನಿರೀಕ್ಷಿತ ಮಟ್ಟದಲ್ಲಿಲ್ಲ. ಅವರು ಪಕ್ಷಪಾತಿಯಂತೆ ಕಾಣುತ್ತಿದ್ದಾರೆ ಎಂದು ನೇರವಾಗಿಯೇ ಆರೋಪಿಸಿದ್ದಾರೆ.

ಈ ಹಿಂದೆ ರಕ್ಷಿತಾ ವಿರುದ್ಧ ಮಾತನಾಡುವ ಸಂದರ್ಭದಲ್ಲಿ ಧ್ರುವಂತ್, ಉರೀತಾ ಇದೆಯಾ ಎಂಬ ಪದ ಬಳಕೆ ಮಾಡಿದ್ದರು. ಈ ಪದ ಬಳಕೆಯನ್ನು ಮಾಳು ತೀವ್ರವಾಗಿ ಖಂಡಿಸಿದ್ದರು. ಇದೇ ರೀತಿ ಈ ಬಾರಿಯ ಸೀಸನ್‌ನಲ್ಲಿ ಪದ ಬಳಕೆಯ ಕುರಿತು ವೀಕೆಂಡ್ ಸಂಚಿಕೆಯಲ್ಲಿಯೂ ಸುದೀರ್ಘವಾಗಿ ಸುದೀಪ್ ಚರ್ಚೆ ನಡೆಸಿದ್ದಾರೆ. ಇದೀಗ ಸುದೀಪ್ ಅವರೇ ಉರೀತಾ ಇದೆ ಎಂಬ ಪದ ಬಳಕೆ ಮಾಡಿರೋದನ್ನು ಕಂಡು ಕೆಲ ವೀಕ್ಷಕರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

You may also like