Home » Ramya: ‘ನಾನು ಹಲವು ಬಾರಿ ಮದುವೆಯಾಗಿದ್ದೇನೆ, ಆದರೆ….’ – ಮೋಹಕತಾರೆ ರಮ್ಯ ಶಾಕಿಂಗ್ ಹೇಳಿಕೆ !!

Ramya: ‘ನಾನು ಹಲವು ಬಾರಿ ಮದುವೆಯಾಗಿದ್ದೇನೆ, ಆದರೆ….’ – ಮೋಹಕತಾರೆ ರಮ್ಯ ಶಾಕಿಂಗ್ ಹೇಳಿಕೆ !!

0 comments

 

Ramya: ರಾಷ್ಟ್ರದಲ್ಲಿ ರಾಹುಲ್ ಗಾಂಧಿ ಮದುವೆ ವಿಚಾರ ಆಗಾಗ ಸುದ್ದಿಯಾಗುವಂತೆ ರಾಜ್ಯದಲ್ಲಿ ಮೋಹಕತಾರೆ ರಮ್ಯ ಮದುವೆ ವಿಚಾರ ಕೂಡ ಆಗಾಗ ಸದ್ದುಮಾಡುತ್ತಿರುತ್ತದೆ. ರಮ್ಯಾ(Ramya) ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ ಅಲ್ಲಿ ಮದುವೆ ವಿಷಯ ಪ್ರಸ್ತಾಪ ಆಗಿಯೇ ಆಗತ್ತೆ. ಈ ವೀಕೆಂಡ್ ನಲ್ಲೂ ರಮ್ಯಾ ಮದುವೆ ವಿಷ್ಯ ಬ್ರೇಕಿಂಗ್ ಆಗಿತ್ತು. ಚಂದನವನದ ತುಂಬಾ ರಮ್ಯ ಉದ್ಯಮಿಯೊಬ್ಬರನ್ನು ಮದುವೆ ಆಗುವುದು ಪಕ್ಕಾ ವಿಚಾರ ಗುಲ್ಲೆಬ್ಬಿತ್ತು. ಈ ಎಲ್ಲಾ ಗಾಸಿಪ್ ಗೆ ತೆರೆ ಎಳೆದ ರಮ್ಯ ನಾನು ಹಲವು ಬಾರಿ ಮದುವೆಯಾಗಿದ್ದೇನೆ ಎಂದು ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ.

ಹೌದು, ಇತ್ತೀಚೆಗೆ ಮಾಧ್ಯಮಗಳಲ್ಲಿ ರಮ್ಯಾ ಅವರ ಮದುವೆ ಬಹುತೇಕ ಫಿಕ್ಸ್‌ ಆಗಿದೆ ಎಂದು ವರದಿಯಾಗಿತ್ತು. ಅಲ್ಲದೆ ಸದ್ಯದಲ್ಲೇ ರಮ್ಯಾ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಕೂಡ ನಡೆಯಲಿದೆ. ನವೆಂಬರ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧತೆ ನಡೆಸಿದ್ದಾರೆ. ರಮ್ಯಾಗೆ ರಾಜಸ್ಥಾನ(Rajasthan) ಮೂಲದ ಟೆಕ್ಸ್‌ಟೈಲ್ ಉದ್ಯಮಿ (Businessman) ಜೊತೆ ರಮ್ಯಾ ನಿಶ್ಚಿತಾರ್ಥ ಫಿಕ್ಸ್ ಆಗಿದೆ. ಆಪ್ತರು ಹೇಳುವಂತೆ ಅಕ್ಟೋಬರ್ ನಲ್ಲಿ ಎಂಗೇಜ್‌ಮೆಂಟ್ ಆಗಲಿದ್ದಾರಂತೆ. ನವೆಂಬರ್‌ನಲ್ಲಿ ಬೆಂಗಳೂರಿನ ಅರಮನೆಯಲ್ಲಿ ಮದುವೆ ನಡೆಯಲಿದೆ. ರಾಜಸ್ಥಾನದ ಲ್ಲಿ ಆರತಕ್ಷತೆ ನಡೆಲಿದೆ ಅನ್ನೋ ಮಾಹಿತಿ ಹೊರಬಿದ್ದಿತ್ತು. ಇದನ್ನು ಅವರ ಆಪ್ತರು ಕೂಡ ಖಚಿತ ಪಡಿಸಿದ್ದು, ಅವರ ಹುಟ್ಟುಹಬ್ಬದ ದಿನ (ನವೆಂಬರ್ 29) ಮದುವೆ ನಡೆಯಲಿದೆ ಎಂದು ಸುದ್ದಿಯೂ ಹರಡಿತ್ತು.

ಈ ಬಗ್ಗೆ ಕೊನೆಗೂ ಮೌನ ಮುರಿದಿರುವ ನಟಿ ರಮ್ಯಾ, ಇನ್‌ಸ್ಟಾಗ್ರಾಂ ಪೋಸ್ಟ್‌ ಮೂಲಕ ಮದುವೆ ವದಂತಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ʼನಾನು ಹಲವಾರು ಬಾರಿ ಮದುವೆಯಾಗಿದ್ದೇನೆ, ಆದರೆ ಅದೆಲ್ಲಾ ಮಾಧ್ಯಮಗಳು ಮಾಡಿಸಿದ ಮದುವೆ. ನಾನು ಇದರ ಲೆಕ್ಕ ಕಳೆದುಕೊಂಡಿದ್ದೇನೆ. ಒಂದು ವೇಳೆ ನಾನು ಮದುವೆ ಮಾಡಿಕೊಳ್ಳುವುದಾದರೆ ಆ ವಿಚಾರವನ್ನು ನಾನೇ ನಿಮಗೆ ಹೇಳುತ್ತೇನೆ. ದಯವಿಟ್ಟು ಆಧಾರವಿಲ್ಲದೆ ಎಲ್ಲಿಂದಲೋ ಬರುವ ಈ ವದಂತಿಗಳನ್ನು ನಂಬುವುದನ್ನು ನಿಲ್ಲಿಸಿʼ ಎಂದು ಎಲ್ಲ ಗೊಂದಲಕ್ಕೂ ತೆರೆ ಎಳೆದಿದ್ದಾರೆ.

You may also like

Leave a Comment