Home » Bigg Boss ಮನೆಯಿಂದ ರಂಜಿತ್, ಲಾಯರ್ ಜಗದೀಶ್ ಔಟ್ – ಮನೆಯಿಂದ ಹೊರ ನಡೆಯುವಂತೆ ಬಿಗ್ ಬಾಸ್ ನಿಂದ ಆದೇಶ !!

Bigg Boss ಮನೆಯಿಂದ ರಂಜಿತ್, ಲಾಯರ್ ಜಗದೀಶ್ ಔಟ್ – ಮನೆಯಿಂದ ಹೊರ ನಡೆಯುವಂತೆ ಬಿಗ್ ಬಾಸ್ ನಿಂದ ಆದೇಶ !!

0 comments

Bigg Boss: ಬಿಗ್ ಬಾಸ್’ ಅಂಗಳದಿಂದ ಬ್ಲಾಸ್ಟಿಂಗ್ ನ್ಯೂಸ್ ಹೊರಬಿದ್ದಿದೆ. ‘ಬಿಗ್ ಬಾಸ್’ ಮನೆಯಲ್ಲಿ ಹೊಡೆದಾಟ, ಬಡಿದಾಟ ನಡೆದಿದ್ದು, ದೈಹಿಕ ಹಲ್ಲೆ ನಡೆಸಿ, ಸ್ತ್ರೀಯರ ನಿಂದನೆ ಮಾಡಲಾಗಿದೆ. ಹೀಗಾಗಿ ಮೂಲ ನಿಯಮ ಮುರಿದ ಪರಿಣಾಮ ಜಗದೀಶ್ ಹಾಗೂ ರಂಜಿತ್ ಅವರನ್ನು ಬಿಗ್ ಮನೆಯಿಂದ ಹೊರಹಾಕಿದೆ.

ಹೌದು, ಬಿಗ್ ಬಾಸ್ 11 (Bigg Boss Kannada) ಸಖತ್ ಇಂಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ. ಲಾಯರ್ ಜಗದೀಶ್ (Lawyer Jagadish) ಅಂತೂ ಮನೆಯಲ್ಲಿ ಸೌಂಡ್ ಮಾಡೋ ಸ್ಪರ್ಧಿ ಆಗಿದ್ದಾರೆ. ಆದರೆ ಅವರ ಸೌಂಡ್ ಯಾರಿಗೂ ಇಷ್ಟವಾಗುತ್ತಿಲ್ಲ ಎನ್ನುವುದು ಇನ್ನೊಂದು ವಿಚಾರ. ಒಂದೊಂದು ಹೊತ್ತು ಒಂದೊಂದು ರೀತಿ ಇರುವ ಅವರು ಹಲವಾರು ಸಲ ಹೆಣ್ಮಕ್ಕಳ ಬಗ್ಗೆ ಸಲೀಸಾಗಿ ಮಾತನಾಡಿದ್ದಾರೆ ಎನ್ನುವ ಕೋಪ ಮನೆಯಲ್ಲಿರುವ ತುಂಬಾ ಜನರಿಗಿದೆ.

ನಟಿ ಗೌತಮಿ ಅವರು ಲಾಯರ್ ಜಗದೀಶ್ ಬಗ್ಗೆ ಮಾತನಾಡಿ ಅವರಿಗೆ ಹೆಣ್ಮಕ್ಕಳನ್ನು ಗೌರವಿಸುವ ಬೇಸಿಕ್ ಕೂಡಾ ಗೊತ್ತಿಲ್ಲ ಎಂದು ಕಟುವಾಗಿ ಹೇಳಿದ್ದಾರೆ. ಗೌತಮಿ ಮಾತ್ರವಲ್ಲದೆ ಮನೆ ಮಂದಿಯಲ್ಲಿರುವ ಇತರ ಮಹಿಳಾ ಸ್ಪರ್ಧಿಗಳಾದ ಚೈತ್ರಾ ಕುಂದಾಪುರ, ಹಂಸ, ಮಾನಸ ಕೂಡಾ ಲಾಯರ್ ಮೇಲೆ ಗರಂ ಆಗಿದ್ದಾರೆ.

ಇನ್ನು ಉಗ್ರಂ ಮಂಜು ಹಾಗೂ ಜಗದೀಶ್‌ ಜಗಳ ಆಡುತ್ತಿರುತ್ತಾರೆ. ಆಗ ರಂಜಿತ್‌ ಹಿಂದೆ ನಿಂತಿರುತ್ತಾರೆ. ಬೇಕು ಅಂತಲೇ ರಂಜಿತ್ ಬಂದು ಜಗದೀಶ್‌ ಅವರಿಗೆ ಬಂದು ಗುದ್ದಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೀಗಾಗಿ ಇದು ಸಾಭೀತಾಗಿರುವ ಕಾರಣ ಬಿಗ್​ಬಾಸ್ ಲಾಯರ್ ಜಗದೀಶ್ ಹಾಗೂ ರಂಜಿತ್ ಅವರನ್ನು ಮನೆಯಿಂದ ಹೊರಗೆ ಹೋಗುವಂತೆ ಆದೇಶಿಸಿದ್ದಾರೆ.

ಮುಂದಿನ ಸಂಚಿಕೆಯ ತುಣುಕಿನಲ್ಲಿ ಜಗದೀಶ್ ಮತ್ತು ರಂಜಿತ್ ಬ್ಯಾಗ್ ಪ್ಯಾಕ್ ಮಾಡುತ್ತಿದ್ದಾರೆ. ಮನೆಯ ಮುಖ್ಯ ಬಾಗಿಲು ಓಪನ್ ಆಗುತ್ತದೆ. ಅಲ್ಲದೆ ಮನೆ ಮಂದಿ ಎಲ್ಲರೂ ದಯವಿಟ್ಟು ಇದೊಂದು ಸಲ ಕ್ಷಮಿಸಿ ಬಿಗ್ ಬಾಸ್ ಎಂದು ಕಣ್ಣೀರು ಹಾಕುತ್ತಿದ್ದಾರೆ. ಆದರೆ ಬಿಗ್ ಬಾಸ್ ನಿರ್ಧಾರ ಏನು ಅನ್ನೋದು ನಾಳೆ ಗೊತ್ತಾಗಬೇಕಿದೆ.

You may also like

Leave a Comment