Home » ದ್ರೌಪದಿ ರಾಷ್ಟ್ರಪತಿಯಾದರೆ…ಪಾಂಡವರು ಯಾರು….?ವಿವಾದಾತ್ಮಕ ಟ್ವೀಟ್ ಮಾಡಿದ RGV! ದೂರು ದಾಖಲು!

ದ್ರೌಪದಿ ರಾಷ್ಟ್ರಪತಿಯಾದರೆ…ಪಾಂಡವರು ಯಾರು….?ವಿವಾದಾತ್ಮಕ ಟ್ವೀಟ್ ಮಾಡಿದ RGV! ದೂರು ದಾಖಲು!

by Mallika
0 comments

NDA ರಾಷ್ಟ್ರಪತಿ ಅಭ್ಯರ್ಥಿ ವಿರುದ್ಧ ವಿವಾದಾತ್ಮಕ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮ ವಿರುದ್ಧ ದೂರು ನೀಡಲಾಗಿದೆ.

ತೆಲಂಗಾಣ ಬಿಜೆಪಿ ಮುಖಂಡ ಗುಡೂರು ನಾರಾಯಣರೆಡ್ಡಿ ದೂರು ನೀಡಿದ್ದಾರೆ.

ದೌಪದಿ ರಾಷ್ಟ್ರಪತಿಯಾದರೆ ಪಾಂಡವರು ಯಾರು..? ಮುಖ್ಯವಾಗಿ ಕೌರವರು ಯಾರು ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದರು. ವರ್ಮಾ ಟ್ವೀಟ್ ಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಎಸ್.ಸಿ. ಮತ್ತು ಎಸ್.ಟಿ. ಸಮುದಾಯಕ್ಕೆ ವರ್ಮಾ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ನಿರ್ದೇಶಕರ ವಿರುದ್ಧ ಅಬಿದ್ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಆರ್.ಜಿ.ವಿ.ಯವರ ಇಂತಹ ಕಾಮೆಂಟ್ ಗಳಿಂದ ಬಿಜೆಪಿ ಕಾರ್ಯಕರ್ತರಾದ ನಮಗೆ ನೋವಾಗಿದೆ. ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಲಾಗಿದೆ.

You may also like

Leave a Comment