Home » ರಿಷಬ್‌ ಶೆಟ್ಟಿ ನಿರ್ದೇಶನದ ಕಿರಿಕ್‌ ಪಾರ್ಟಿಗೆ 6 ವರ್ಷ | ರಶ್ಮಿಕಾಗೆ ಮತ್ತೊಮ್ಮೆ ಅವಮಾನ ಮಾಡಿದ್ರಾ ಶೆಟ್ರು?

ರಿಷಬ್‌ ಶೆಟ್ಟಿ ನಿರ್ದೇಶನದ ಕಿರಿಕ್‌ ಪಾರ್ಟಿಗೆ 6 ವರ್ಷ | ರಶ್ಮಿಕಾಗೆ ಮತ್ತೊಮ್ಮೆ ಅವಮಾನ ಮಾಡಿದ್ರಾ ಶೆಟ್ರು?

0 comments

ರಿಷಬ್‌ ಶೆಟ್ಟಿ ನಿರ್ದೇಶನದ ಕಿರಿಕ್‌ ಪಾರ್ಟಗೆ ಭರ್ಜರಿ 6 ವರ್ಷವಾಗಿದೆ. ಈ ಸಿನಿಮಾ ರಿಷಬ್‌ ಶೆಟ್ಟಿಗೆ ನಿಜಕ್ಕೂ ದೊಡ್ಡ ಮಟ್ಟಿನ ಬ್ರೇಕ್‌ ಕೊಟ್ಟ ಸಿನಿಮಾ. ರಕ್ಷಿತ್‌ ಶೆಟ್ಟಿ ಹೀರೋ ಮತ್ತು ನಿರ್ಮಾಪಕನಾಗಿ ದೊಡ್ಡ ಗೆಲುವು ಕೊಟ್ಟ ಚಿತ್ರ. ಡಿ.30, 2016 ತೆರೆಕಂಡ ಈ ಸಿನಿಮಾದ ಕೆಲವೊಂದು ಫೋಟೋಗಳನ್ನು ರಿಷಬ್‌ ಶೆಟ್ಟಿ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಿಕ್ಕಿ ಸಿನಿಮಾ ನಂತರ ರಿಷಬ್‌ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ ಕಿರಿಕ್‌ ಪಾರ್ಟಿ. ‘ಕಿರಿಕ್ ಪಾರ್ಟಿ ನಡೆದು ಆರು ವರ್ಷಗಳ ನಂತರವೂ ಪಾರ್ಟಿಗೆ ಕಳೆ ತಂದ ನಿಮ್ಮ ಸದ್ದು, ಗದ್ದಲ, ಶಿಳ್ಳೆಗಳು ಇನ್ನೂ ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ. ಮತ್ತೆ ಹಿಂತಿರುಗಿ ನೋಡುವಂತೆ ಮಾಡುತ್ತವೆ. ಈ ಸಂಭ್ರಮದ ಭಾಗವಾದ ಪ್ರತಿಯೊಬ್ಬರಿಗೂ ಧನ್ಯವಾದಗಳು…’ ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.

ಈ ಸಿನಿಮಾದ ಮೂಲಕನೇ ಈಗ ನ್ಯಾಷನಲ್‌ ಕ್ರಶ್‌ ಎಂದು ಅಭಿಮಾನಿಗಳ ಮೂಲಕ ಕರೆಯಲ್ಪಡುವ ರಶ್ಮಿಕಾ ಮಂದಣ್ಣ ಗ್ರ್ಯಾಂಡ್‌ ಎಂಟ್ರಿ ನೀಡಿದ್ದರು. ಈಗ ಟಾಲಿವುಡ್‌, ಕಾಲಿವುಡ್‌ ಮತ್ತು ಬಾಲಿವುಡ್‌ನಲ್ಲಿ ಮಿಂಚುತ್ತಿರುವ ರಶ್ಮಿಕಾ ತನಗೆ ಮೊದಲು ಬ್ರೇಕ್‌ ನೀಡಿದ ಸಿನಿಮಾದ ಹೆಸರು ಹೇಳದೇ ಕೇವಲ ಸನ್ನೆ ಮೂಲಕ ಹೇಳಿ ಅವಮಾನ ಮಾಡಿದ ವೀಡಿಯೋಗಳು ವೈರಲ್‌ ಕೂಡಾ ಆಗಿತ್ತು.

ಅದಕ್ಕಾಗಿಯೋ ಅಥವಾ ಬೇರೆ ಏನು ಕಾರಣವೋ ರಿಷಬ್‌ ತಮ್ಮ ಸಿನಿಮಾ ಕಿರಿಕ್‌ ಪಾರ್ಟಿಯ ಫೋಟೋ ಶೇರ್‌ ಮಾಡುವ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣರ ಫೋಟೋ ಹಂಚಿಕೊಂಡಿಲ್ಲ. ತಮ್ಮ ಗೆಲುವಿಗೆ ಮೂಲ ಕಾರಣವಾದ, ತನಗೆ ಭರ್ಜರಿ ಎಂಟ್ರಿ ಕೊಟ್ಟ ಸಿನಿಮಾವನ್ನು ಹಲವಾರು ಬಾರಿ ಕಡೆಗಣಿಸಿದ್ದು, ಇದನ್ನು ಕಂಡ ರಿಷಬ್‌ ಕೂಡಾ ತಮ್ಮ ಕಾಂತಾರ ಸಿನಿಮಾದ ಸಂದರ್ಶನವನ್ನು ಒಂದು ಮಾಧ್ಯಮವೊಂದಕ್ಕೆ ನೀಡುತ್ತಿದ್ದಾಗ, ರಶ್ಮಿಕಾ ರೀತಿಯಲ್ಲಿ ಕೈ ಸನ್ನೆ ಮಾಡಿ ಉತ್ತರ ಕೊಟ್ಟಿದ್ದು ನಿಜಕ್ಕೂ ಅಭಿಮಾನಿಗಳಿಗೆ ಬಹಳ ಖುಷಿ ಕೊಟ್ಟಿತ್ತು. ಈಗ ಮತ್ತೊಮ್ಮೆ ಕಿರಿಕ್‌ ಪಾರ್ಟಿ ಸಿನಿಮಾದ ಫೋಟೊ ಹಂಚುವ ಮೂಲಕ ರಶ್ಮಿಕಾಗೆ ರಿಷಬ್‌ ಟಾಂಗ್‌ ಕೊಟ್ಟಿದ್ದಾರೆ ಎಂದೇ ಹೇಳಬಹುದು.

You may also like

Leave a Comment