Home » Ananth Ambani: ಅನಂತ್ ಅಂಬಾನಿ ಮದುವೆಯಲ್ಲಿ ರಾಕಿಂಗ್ ಸ್ಟಾರ್ ಯಶ್​ಗೆ ಸಿಕ್ಕಿತು ಎರಡು ಕೋಟಿ ಮೌಲ್ಯದ ಸ್ಪೆಷಲ್ ಗಿಫ್ಟ್!

Ananth Ambani: ಅನಂತ್ ಅಂಬಾನಿ ಮದುವೆಯಲ್ಲಿ ರಾಕಿಂಗ್ ಸ್ಟಾರ್ ಯಶ್​ಗೆ ಸಿಕ್ಕಿತು ಎರಡು ಕೋಟಿ ಮೌಲ್ಯದ ಸ್ಪೆಷಲ್ ಗಿಫ್ಟ್!

0 comments
Ananth Ambani

Ananth Ambani: ವಿಶ್ವದ ಟಾಪ್ ಹತ್ತು ಶ್ರೀಮಂತರಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ತಮ್ಮ ಪುತ್ರ ಅನಂತ್ ಅಂಬಾನಿ -ರಾಧಿಕಾ ಮದುವೆಯಲ್ಲಿ ದೇಶ-ವಿದೇಶದ ಹಲವು ಗಣ್ಯರು, ಚಿತ್ರ ನಟರು ಅತಿಥಿಗಳಾಗಿ ಭಾಗಿಯಾಗಿದ್ದರು. ಹಾಗೆಯೇ ನಟ ರಾಕಿಂಗ್ ಸ್ಟಾರ್ ಯಶ್ ಸಹ ಮದುವೆಯಲ್ಲಿ ಭಾಗಿಯಾಗಿದ್ದರು. ಸದ್ಯ ಯಶ್​ಗೆ ಅಂಬಾನಿ ಕುಟುಂಬದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಉಡುಗೊರೆ ದೊರೆತಿದೆ ಎಂಬ ಮಾಹಿತಿ ಇದೆ.

ಅಂದಾಜು 6000 ಕೋಟಿ ಹಣವನ್ನು ಮುಕೇಶ್ ಅಂಬಾನಿ ತಮ್ಮ ಮಗನ ಮದುವೆಗೆ ಖರ್ಚು ಮಾಡಿದ್ದು, ಎಷ್ಟರ ಮಟ್ಟಿಗೆ ಅದ್ಧೂರಿಯಾಗಿ ಮದುವೆ ಮಾಡುತ್ತಿದ್ದಾರೆಂದರೆ ಮದುವೆಗೆ ಬಂದ ಅತಿಥಿಗಳಿಗೆ ಕೋಟ್ಯಂತರ ಮೌಲ್ಯದ ಉಡುಗೊರೆಯನ್ನು ಅಂಬಾನಿ ನೀಡಿದ್ದಾರೆ.

ಇದೀಗ ಕನ್ನಡದ ನಟ ಯಶ್ ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್ ಸಹ ಮದುವೆಯಲ್ಲಿ ಭಾಗಿಯಾಗಿದ್ದು, ಅವರಿಗೂ ಸಹ ಕೋಟ್ಯಂತರ ಮೌಲ್ಯದ ಉಡುಗೊರೆ ಅಂಬಾನಿ ಅವರಿಂದ ದೊರೆತಿದೆ. ಅಂಬಾನಿ (Ananth Ambani)  ಮದುವೆಗೆ ಬಂದ ಅತಿಥಿಗಳಿಗೆ ಬರೋಬ್ಬರಿ ಕೋಟಿ ರೂಪಾಯಿ ಮೌಲ್ಯದ ದುಬಾರಿ ವಾಚ್ ಅನ್ನು ಉಡುಗೊರೆಯಾಗಿ ನೀಡಿದ್ದಾರಂತೆ. ಸದ್ಯ ಮದುವೆಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಯಶ್ ಗೆ ಕೂಡಾ ಈ ವಾಚ್ ಉಡುಗೊರೆಯಾಗಿ ನೀಡಲಾಗಿದೆ.

ಹೌದು, ಸ್ವಿಟ್ಜರ್​ಲ್ಯಾಂಡ್​ನ ಆಡಿಮೆರಾಸ್ ಪಿಗೆಟ್ ಬ್ರ್ಯಾಂಡ್​ನ ಲಿಮಿಟೆಡ್ ಎಡಿಷನ್ ವಾಚ್ ಅನ್ನು ಅಂಬಾನಿ ಕುಟುಂಬದವರು ಬಂದ ಅತಿಥಿಗಳಿಗೆ ನೀಡಿದ್ದಾರೆ. ಈ ವಾಚಿನ ಬೆಲೆ ಸುಮಾರು 1.5 ರಿಂದ 2 ಕೋಟಿ ಎನ್ನಲಾಗುತ್ತಿದ್ದು, ಬಂದ ಪ್ರತಿಯೊಬ್ಬ ಅತಿಥಿಗೂ ಈ ವಾಚನ್ನು ನೀಡಲಾಗಿದೆ. ಮದುವೆಯಲ್ಲಿ ಭಾಗವಹಿಸಿದ ನಟಿಯರು ಹಾಗೂ ಇತರೆ ಸೆಲೆಬ್ರಿಟಿ ಮಹಿಳೆಯರಿಗೆ ಭಾರಿ ದುಬಾರಿ ಸೀರೆಯ ಜೊತೆಗೆ ಚಿನ್ನದ ಆಭರಣವನ್ನು ಸಹ ನೀಡಲಾಗಿದೆ ಎನ್ನಲಾಗುತ್ತಿದೆ. ಸುಮಾರು ಎರಡು ಸಾವಿರ ಕೋಟಿಗಿಂತಲೂ ಹೆಚ್ಚಿನ ಮೊತ್ತವನ್ನು ಕೇವಲ ಉಡುಗೊರೆಗಾಗಿಯೇ ಮುಕೇಶ್ ಅಂಬಾನಿ ಖರ್ಚು ಮಾಡಿದ್ದಾರೆ.

Pavitra Gowda: ನಟ ದರ್ಶನ್‌ ನಂತರ ಇದೀಗ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು

 

You may also like

Leave a Comment