Home » Roopesh Shetty: ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಗೆ ಎಂಟ್ರಿ, ಬಿಗ್ ಬಾಸ್ ಮನೇಲಿ ‘ ಕ್ಯಾಚ್ ‘ ಹಾಕೋ ಅವಕಾಶ ಸಿಕ್ರೆ ಬಿಡಲ್ಲ ಎಂದ ರೂಪೇಶ್ ಶೆಟ್ಟಿ

Roopesh Shetty: ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಗೆ ಎಂಟ್ರಿ, ಬಿಗ್ ಬಾಸ್ ಮನೇಲಿ ‘ ಕ್ಯಾಚ್ ‘ ಹಾಕೋ ಅವಕಾಶ ಸಿಕ್ರೆ ಬಿಡಲ್ಲ ಎಂದ ರೂಪೇಶ್ ಶೆಟ್ಟಿ

0 comments

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್​ ಒಟಿಟಿ’ಗೆ ನಿನ್ನೆ ಸಂಜೆ, ಅಂದರೆ ಆಗಸ್ಟ್ 6 ಸಂಜೆ 7 ಗಂಟೆಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಒಬ್ಬೊಬ್ಬರು ಸ್ಫರ್ಧಿಗಳು ದೊಡ್ಮನೆಯೊಳಗೆ ಎಂಟ್ರಿ ನೀಡುತ್ತಿದ್ದಾರೆ.

ಉಳಿದ ಎಂಟ್ರಿ ಕೊಟ್ಟವರು : ಈಗಾಗಲೇ ಆರ್ಯವರ್ಧನ್​ ಗುರೂಜಿ, ಸೋನು ಶ್ರೀನಿವಾಸ್ ಗೌಡ, ಸ್ಪೂರ್ಥಿ ಗೌಡ, ಹಾಸ್ಯ ಕಲಾವಿದ ಲೋಕೇಶ್ ಅವರು ಬಿಗ್​ ಬಾಸ್ ಮನೆ ಸೇರಿದ್ದಾರೆ.

ಈಗ, ಕರಾವಳಿಯ ಸೂಪರ್ ಸ್ಟಾರ್ ರೂಪೇಶ್ ಶೆಟ್ಟಿ ಕೂಡ ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ವೇದಿಕೆ ಮೇಲೆ ರೂಪೇಶ್ ಬರುತ್ತಿದ್ದಂತೆ ಅವರನ್ನು ಸುದೀಪ್ ಚೆನ್ನಾಗಿ ಕಾಲೆಳೆದರು. ಅದರಲ್ಲೂ ಮನೆಯೊಳಗೆ ಯಾಕಾಗಿ ಹೋಗುತ್ತೀರಿ ಎಂದು ಕಿಚ್ಚ ಕೇಳಿದ್ದಕ್ಕೆ ಚೆನ್ನಾಗಿ ಆಡಬೇಕು, ಗೆಲ್ಲಬೇಕು ಎಂದು ರೂಪೇಶ್ ನಿಜ ಉತ್ತರ ಹೇಳಿದರು. ಇದಕ್ಕೆ ತಿರುಗಾ ಪ್ರಶ್ನೆ ಕೇಳಿದ ಸುದೀಪ್ 30 ವರ್ಷ ಕಳೆದರೂ ಬ್ಯಾಚುಲರ್ ಆಗಿದ್ದೀರಿ, ಒಳಗಡೆ ಬೇರೇನಾದ್ರು ಮಾಡ್ಬೇಕಲ್ವಾ ಎಂದು ಹೇಳಿದ್ದಾರೆ. ಆಗ ರೂಪೇಶ್ ಅವರು ಒಳಗಡೆ ಹಾಗೇನಾದ್ರು ಸಿಕ್ಕಿದ್ರೆ, ಬಿಡೋ ಪ್ರಶ್ನೆ ಎಂದು ನಗೆ ಚಟಾಕಿ ಹಾರಿಸಿದ್ದಾರೆ.

ರೂಪೇಶ್ ಶೆಟ್ಟಿ ತುಳು ಮತ್ತು ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ. ಇವರು ಕನ್ನಡದಲ್ಲಿ ನಿಶಬ್ಧ 2, ಡೇಂಜರ್ ಜೋನ್, ಪಿಶಾಚಿ 2 ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮೂಲತಃ ಕಾಸರಗೋಡಿನವರಾದ ರೂಪೇಶ್ ಮಂಗಳೂರಿನಲ್ಲಿರುವ ಒಂದು ಚಾನೆಲ್​ ನಲ್ಲಿ ನಿರೂಪಕನಾಗಿ ಹೆಸರು ಮಾಡಿದ್ದಾರೆ.

ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿ ತುಳುವಿನಲ್ಲಿ 2018 ರಲ್ಲಿ ಬಿಡುಗಡೆ ಆದ ಅಮ್ಮೆರ್ ಪೊಲೀಸ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ನಂತರ 2019 ರಲ್ಲಿ ನಿರ್ದೇಶನಕ್ಕೂ ಇಳಿದು ನಟಿಸಿದ ಗಿರ್ಗಿಟ್ ಎಂಬ ತುಳು ಸಿನಿಮಾ ಬಾಕ್ಸ್​ ಆಫೀಸ್​ ಬಾಚಿ ಕೊಂಡಿತ್ತು. ತುಳು ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಹೆಗ್ಗಳಕೆಗೂ ಪಾತ್ರ ಆಯಿತು.

ಇವರು ದಿಬ್ಬಣ ಎಂಬ ತುಳು ಚಿತ್ರದಲ್ಲಿ ನಟಿಸುವ ಮೂಲಕ ಖ್ಯಾತಿ ಗಳಿಸಿದರು. 2015 ರಲ್ಲಿ ಡೇಂಜರ್ ಜ಼ೋನ್ ಎಂಬ ಕನ್ನಡ ಚಿತ್ರದಲ್ಲಿ ನಟಿಸುವ ಮೂಲಕ ಪ್ರಾಮುಖ್ಯತೆಯನ್ನು ಪಡೆದರು. ನಂತರ ಐಸ್ ಕ್ರೀಮ್, ಪಿಶಾಚಿ 2 , ನಿಶಬ್ಧ 2 ಮತ್ತು ಸ್ಮೈಲ್ ಪ್ಲೀಜ್ ಎಂಬ ಕನ್ನಡ ಚಲನಚಿತ್ರಗಳಲ್ಲೂ ಕಾಣಿಸಿಕೊಂಡರು.

ಈಗ್ಗೆ ಕನ್ನಡದಲ್ಲೂ ಸುಮಂತ್ ಹಾಗೂ ಭಾವನಾ ಜೊತೆ ಗೋವಿಂದ ಗೋವಿಂದ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಹೀಗೆ ಕಷ್ಟಪಟ್ಟು ಒಂದೊಂದೇ ಮೆಟ್ಟಲು ಹತ್ತಿ ಇವತ್ತಿಗೆ. ಬಿಗ್ ಬಾಸ್ ಮನೆಯ ಹೊಸಿಲು ದಾಟಿ ಒಳ ಹೋಗಿದ್ದಾರೆ. ತೆರೆ ಹಿಂದೆ ಕಷ್ಟ ಪಟ್ಟು, ಬಣ್ಣದ ಪರದೆ ಮೇಲೆ ಕಾಣಿಸಿಕೊಳ್ಳುವ ಮಹೋತ್ತರ ಕನಸು ಹೊತ್ತು, ಕಷ್ಟದ ದಿನಗಳನ್ನು ಅನುಭವಿಸಿ ಇಂದು ತುಳು ಭಾಷೆಯ ಸೂಪರ್ ಸ್ಟಾರ್ ಆಗಿರುವ ನಟ ರೂಪೇಶ್ ಶೆಟ್ಟಿ ಇದೀಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

You may also like

Leave a Comment