Home » Roopesh Shetty: ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ರೂಪೇಶ್ ಶೆಟ್ಟಿ;

Roopesh Shetty: ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ರೂಪೇಶ್ ಶೆಟ್ಟಿ;

0 comments

Roopesh Shetty: ಬಿಗ್ ಬಾಸ್ (Bigg Boss)ಕನ್ನಡದ ಮೊದಲ ಒಟಿಟಿ ಸೀಸನ್ 01 ಮತ್ತು ಸೀಸನ್ 09ರ ವಿಜೇತರಾದ ನಟ ರೂಪೇಶ್ ಶೆಟ್ಟಿ (Roopesh Shetty)ಇತ್ತೀಚೆಗೆ ವಿಜಯವಾಣಿ ನಡೆಸಿದ ಸಂದರ್ಶನದಲ್ಲಿ ಅನೇಕ ರೋಚಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಮುಂಬರುವ ಕೆಲಸದ ಜೊತೆಗೆ ಮದುವೆ ಜೀವನ ಕುರಿತಂತೆ ಹಲವಾರು ಸಂಗತಿಗಳನ್ನು ಸಂದರ್ಶನದ ಸಂದರ್ಭ ಹಂಚಿಕೊಂಡಿದ್ದಾರೆ.

 

“ನನಗೆ ತುಂಬ ಜನ ಕೇಳುವ ಪ್ರಶ್ನೆ ಎಂದರೆ, ನಿಮ್ಮ ಮದುವೆ ಯಾವಾಗ ?? ನಾನು ಇಷ್ಟು ವರ್ಷ ಒದ್ದಾಟ ನಡೆಸಿದ್ದು ಒಂದು ಆಲ್ಬಂ ಸಿಂಗರ್ ಆಗಿ, ತುಳು ಗಾಯಕನಾಗಿ, ಆರ್ಜೆ, ಟಿವಿ ಆ್ಯಂಕರ್ ಆಗಿ ಎಂಟು ಸಿನಿಮಾಗಳು ಸೋತ ನಂತರ ಒಂದು ದೊಡ್ದ ಮಟ್ಟದ ಗೆಲುವು ಸಿಕ್ಕಿ, ಬಿಗ್ ಬಾಸ್ ವಿಜೇತನಾಗಿ ಹೊರಹೊಮ್ಮಿದೆ”

 

“ಇವಾಗ ರೈಟ್ ಟೈಮ್, ದೇವರ ದಯೆಯಿಂದ ಒಂದಷ್ಟು ಸಿನಿಮಾಗಳು ಬರುತ್ತಿವೆ. ಇನ್ನು ಮದುವೆ ಯಾವಾಗ ಎಂಬುದರ ಬಗ್ಗೆ ನಾನು ಹೆಚ್ಚು ಯೋಚನೆ ಮಾಡಿಲ್ಲ. ಇನ್ನು ಹೆಚ್ಚು ಕೆಲಸ ಮಾಡಬೇಕು ಎನ್ನುವ ಆಸೆಯಿದೆ. ನನಗೆ ಖಾಲಿ ಆಗಿ ಕುಳಿತರೆ ತಲೆ ಗಿರ್ ಅನ್ನುತ್ತೆ.ಹಾಗಾಗಿ, ಸಿನಿಮಾ ಕೆಲಸ ಎಂದು ಸದಾ ಬ್ಯುಸಿಯಾಗಿರೋದಕ್ಕೆ ಬಯಸುತ್ತೀನಿ. ನನ್ನ ಇಷ್ಟಗಳನ್ನು ಅರ್ಥ ಮಾಡಿಕೊಂಡು ನನ್ನನ್ನು ಅರ್ಥ ಮಾಡಿಕೊಂಡು ಬೆಂಬಲ ನೀಡುವ ಹುಡುಗಿ ಸಿಕ್ಕರೆ ಒಪ್ಪಿಕೊಳ್ಳುತ್ತೇನೆ. ನಮ್ಮ ಕೆಲಸಕ್ಕೆ ಇಷ್ಟೇ ಸಮಯ ಎಂದಿಲ್ಲ. ಹಾಗಾಗೀ, ಇದೆಲ್ಲವನ್ನೂ ಒಪ್ಪಿಕೊಳ್ಳುವ ಹುಡುಗಿ ಹೊಂದಿಕೊಳ್ಳುವ ಗುಣವಿದ್ದವಳಾದರೆ ಮದುವೆಯಾಗಬಹುದು. ಆದರೆ, ಸದ್ಯಕ್ಕೆ ಮದುವೆ ಬಗ್ಗೆ ಏನು ಯೋಚನೆ ಮಾಡಿಲ್ಲ”.

 

“ನಾನು ಕೆಲಸದ ವಿಚಾರದಲ್ಲಿ ತಡವಾಗಿ ಬರುವವರಿಗೆ ಬೈತೇನೆ. ಕೆಲಸ ಸರಿಯಾದ ಸಮಯಕ್ಕೆ ಇರಬೇಕು ಅಂತ. ಆಗ ನನ್ನ ಜೊತೆಗೆ ಇರುವವರು ನನಗೆ ತುಂಬ ಬೈತಾರೆ, ನೀನು ಒಂದು ಸಲ ಮದುವೆಯಾಗು, ಆಗ ನಿನಗೆ ಕಷ್ಟ ಅರ್ಥವಾಗುತ್ತದೆ ಎಂದು ಸ್ನೇಹಿತರು ಹೇಳುತ್ತಾರೆ “ಎಂದು ರೂಪೇಶ್ ಶೆಟ್ಟಿ ತಮ್ಮ ಮನಸ್ಸಿನ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.

You may also like

Leave a Comment