Home » RCB ಅಭಿಮಾನಿಗಳಿಗೆ ಸಿಹಿ ಸುದ್ದಿ | RCB ಗಾಗಿ ಹೊಸವರ್ಷಕ್ಕೆ ಹೊಸ ಹಾಡು ಬಿಡುಗಡೆ!

RCB ಅಭಿಮಾನಿಗಳಿಗೆ ಸಿಹಿ ಸುದ್ದಿ | RCB ಗಾಗಿ ಹೊಸವರ್ಷಕ್ಕೆ ಹೊಸ ಹಾಡು ಬಿಡುಗಡೆ!

0 comments

RCB ಅಭಿಮಾನಿಗಳಿಗೆ ಗುಡ್​ ನ್ಯೂಸೊಂದು ಇಲ್ಲಿದೆ. ಅದೇನೆಂದರೆ, ಐಪಿಎಲ್​ 2023ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಹಾಡನ್ನು ಬಿಡುಗಡೆ ಮಾಡಿದೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಸದ್ಯ ವಿರಾಟ್ ಕೊಹ್ಲಿ ಕ್ರಿಕೆಟ್ ಕ್ಷೇತ್ರದಿಂದ ದೂರವಿದ್ದರೂ, ಸೋಷಿಯಲ್ ಮಿಡಿಯಾದಲ್ಲಿ ನಿರಂತರ ಚರ್ಚೆಯಲ್ಲಿರುತ್ತಾರೆ. ಇನ್ನೂ, ಈ ವೀಡಿಯೊದಲ್ಲಿ ಕೊಹ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮ್ಯೂಸಿಕ್ ವಿಡಿಯೋ ಐಪಿಎಲ್ (IPL) ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಸಂಬಂಧಿಸಿದೆ. ಹಾಗಾದ್ರೆ ಈ ಹೊಸ ಹಾಡು ಯಾವುದಿರಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ. RCB ಗಾಗಿ ಬಿಡುಗಡೆ ಮಾಡಲಾದ ಹೊಸ ಹಾಡು ‘ನಯಾ ಶೇರ್’ ಎಂಬ ಹೆಸರಿನದ್ದಾಗಿದೆ.

‘ನಯಾ ಶೇರ್’ ಹಾಡಿನ ವೀಡಿಯೋ 2 ನಿಮಿಷ 23 ಸೆಕೆಂಡುಗಳದ್ದಾಗಿದ್ದು, ಈ ಹಾಡಿನಲ್ಲಿ ಖ್ಯಾತ ರಾಪರ್ ಡಿವೈನ್ ಮತ್ತು ಗಾಯಕಿ ಜೊನಿತಾ ಗಾಂಧಿ ಅವರ ಜೊತೆಗೆ ವಿರಾಟ್ ಕೊಹ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಅಧಿಕೃತ ಯೂಟ್ಯೂಬ್ ಖಾತೆಯಲ್ಲಿ ಹಂಚಿಕೊಂಡಿದ್ದು, ಶೀರ್ಷಿಕೆಯಲ್ಲಿ , ‘ಇದು ನಿಮ್ಮದೇ ಹಾದಿಯನ್ನು ಆರಿಸಿಕೊಳ್ಳಲು ಹಾಗೂ ನಿಮ್ಮದೇ ಆಟವನ್ನು ಆಡುವ ಸಮಯ‘ ಎಂದು ಬರೆದುಕೊಂಡಿದೆ. ಈ ವೀಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, RCB ಅಭಿಮಾನಿಗಳಿಗಂತೂ ಬಹುದೊಡ್ಡ ಸಂತಸದ ವಿಷಯವಾಗಿದೆ.

ಇನ್ನೂ, ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮಾತನಾಡಿದ್ದು, “ನಾನು ಪ್ರತಿಬಾರಿಯೂ ಉತ್ತಮ ಆಟಗಾರನಾಗಲು ಬಯಸುತ್ತೇನೆ. ಕ್ರೀಡಾಂಗಣದಲ್ಲಿ ಅಥವಾ ಬೇರೆ ಯಾವುದೇ ಸ್ಥಳಗಳಲ್ಲೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಯಸುತ್ತೇನೆ” ಎಂದು ಹೇಳಿದರು.

ಸದ್ಯ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಇಂಡಿಯಾದಿಂದ ದೂರವಿದ್ದಾರೆ. ಆದರೆ ಮುಂದಿನ ವಾರ ಪ್ರಾರಂಭವಾಗುವ 3 ಏಕದಿನ ಸರಣಿಯಲ್ಲಿ ಕೊಹ್ಲಿ ಮತ್ತೆ ಕಂಬ್ಯಾಕ್​ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಇದು ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದ್ದು, ಕೊಹ್ಲಿ ಕಂಬ್ಯಾಕ್​ ಗೆ ಕಾತುರದಿಂದ ಕಾದು ಕುಳಿತಿದ್ದಾರೆ.

You may also like

Leave a Comment