Home » ಸಾಯಿ ಪಲ್ಲವಿ ನಟನೆಯ ‘ ವಿರಾಟ ಪರ್ವಂ’ ಒಟಿಟಿಯಲ್ಲಿ!

ಸಾಯಿ ಪಲ್ಲವಿ ನಟನೆಯ ‘ ವಿರಾಟ ಪರ್ವಂ’ ಒಟಿಟಿಯಲ್ಲಿ!

by Mallika
0 comments

ಸಾಯಿ ಪಲ್ಲವಿ, ರಾಣಾದಗ್ಗುಬಾಟಿ ನಟನೆಯ ‘ವಿರಾಟ ಪರ್ವಂ’ ಸಿನಿಮಾ ಚಿತ್ರಮಂದಿರಗಳ ಆ ಮುಗಿಸಿ,ಈಗ ಒಟಿಟಿಯತ್ತ ಲಗ್ಗೆ ಇಟ್ಟಿದೆ.

ಜೂನ್ ತಿಂಗಳ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ‘ವಿರಾಟ ಪರ್ವಂ’ ಸಿನಿಮಾ ಬಿಡುಗಡೆ ಆದ ಹದಿನೈದು ದಿನಗಳಲ್ಲೇ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ.

ನಕ್ಸಲೈಟ್ ಕತೆ ಹೊಂದಿರುವ ‘ವಿರಾಟ ಪರ್ವ’ ಸಿನಿಮಾ ಜುಲೈ 1 ರಿಂದ ನೆಟ್‌ಫಿಕ್ಸ್‌ನಲ್ಲಿ ತೆರೆಗೆ ಬರಲಿದ್ದು, ವಿದೇಶಗಳಲ್ಲಿಯೂ ಈ ಸಿನಿಮಾ ಸ್ಟ್ರೀಮ್ ಆಗಲಿದೆ.

ಜೂನ್ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾಕ್ಕೆ ಉತ್ತಮ ವಿಮರ್ಶೆ ದೊರಕಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಈ ಸಿನಿಮಾ ಹಿಟ್ ಆಗಲಿಲ್ಲ. ಸಿನಿಮಾ ಮೂಲಗಳ ಪ್ರಕಾರ ಹದಿನೈದು ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಚಿತ್ರಮಂದಿರಗಳಿಂದ ಕೇವಲ 12 ಕೋಟಿ ಗಳಿಸಿದೆ ಎನ್ನಲಾಗುತ್ತದೆ.

ಆದರೆ ನೆಟ್‌ಫಿಕ್ಸ್ ಡೀಲ್‌ನಿಂದ ಬಹಳ ಒಳ್ಳೆಯ ಹಣವನ್ನೇ ‘ವಿರಾಟ ಪರ್ವಂ’ ಗಳಿಸಿದೆ ಎಂಬ ಮಾತುಗಳು ಟಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ. ‘ವಿರಾಟ ಪರ್ವಂ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಮುನ್ನವೇ ಸುಮಾರು ಹತ್ತು ಕೋಟಿಗೆ ನೆಟ್‌ಫ್ಲಿಕ್ಸ್ ಗೆ ಮಾರಾಟವಾಗಿದೆಯಂತೆ. ಅದೇ ಕಾರಣಕ್ಕೆ ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.

‘ವಿರಾಟ ಪರ್ವಂ’ ಸಿನಿಮಾ ನಕ್ಸಲ್ ನಾಯಕ ಹಾಗೂ ಒಬ್ಬ ಹಳ್ಳಿ ಯುವತಿಯ ನಡುವಿನ ಕತೆ ಹೊಂದಿದೆ. ನಿಜ ಘಟನೆ ಆಧರಿತ ಸಿನಿಮಾ ಇದಾಗಿದೆ. ಸಿನಿಮಾದಲ್ಲಿ ವೆನ್ನೆಲ ಹೆಸರಿನ ಹಳ್ಳಿ ಹುಡುಗಿ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ರವನ್ನ ಹೆಸರಿನ ನಕ್ಸಲ್ ನಾಯಕನ ಪಾತ್ರದಲ್ಲಿ ರಾಣಾ ದಗ್ಗಬಾಟಿ ನಟಿಸಿದ್ದಾರೆ. ಸಿನಿಮಾವನ್ನು ವೇಣು ಉದ್ದಗಲ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಪ್ರಿಯಾಮಣಿ ಸಹ ಇದ್ದಾರೆ.

You may also like

Leave a Comment