Home » ವಿಕಲಚೇತನ ಮಕ್ಕಳನ್ನು ದತ್ತು ಪಡೆದ ‘ಕಿಸ್’ ಸಿನಿಮಾ ಖ್ಯಾತಿಯ ನಟಿ ಶ್ರೀಲೀಲಾ| ನಟಿಯ ಈ ಕೆಲಸಕ್ಕೆ ಎಲ್ಲರಿಂದ ಪ್ರಶಂಸೆಗಳ ಮಹಾಪೂರ

ವಿಕಲಚೇತನ ಮಕ್ಕಳನ್ನು ದತ್ತು ಪಡೆದ ‘ಕಿಸ್’ ಸಿನಿಮಾ ಖ್ಯಾತಿಯ ನಟಿ ಶ್ರೀಲೀಲಾ| ನಟಿಯ ಈ ಕೆಲಸಕ್ಕೆ ಎಲ್ಲರಿಂದ ಪ್ರಶಂಸೆಗಳ ಮಹಾಪೂರ

0 comments

‘ ಕಿಸ್ ‘ ಸಿನಿಮಾದ ಮೂಲದ ಚಂದನವನಕ್ಕೆ ಕಾಲಿಟ್ಟ ಕನ್ನಡದ ಖ್ಯಾತ ನಟಿ ಶ್ರೀಲೀಲಾ. ಅನಂತರ ಕೆಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ. ತೆಲುಗಿನ ‘ ಪೆಳ್ಳಿ ಸಂದಡಿ’ ಚಿತ್ರದಲ್ಲಿ ನಟಿಸಿದ ಬಳಿಕ ನಟಿಯ ಖ್ಯಾತಿ ಹೆಚ್ಚಾಗಿದೆ. ಸದ್ಯಕ್ಕೆ ‘ ಬೈ ಟೂ ಲವ್’ ಸಿನಿಮಾದ ಪ್ರಚಾರ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಈ ಸಂದರ್ಭದಲ್ಲಿ ನಟಿ ಮಹತ್ವದ ಕಾರ್ಯವೊಂದನ್ನು ಮಾಡಿದ್ದಾರೆ. ಇಬ್ಬರು ವಿಶೇಷ ಚೇತನ ಮಕ್ಕಳನ್ನು ಶ್ರೀಲೀಲಾ ದತ್ತು ಪಡೆದಿದ್ದಾರೆ. ಈ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ಶ್ರೀಲೀಲಾಗೆ ಇನ್ನೂ ಇಪ್ಪತ್ತರ ಹರೆಯದ ನಟಿ. ಚಿತ್ರರಂಗದಲ್ಲಿ ಈಗತಾನೇ ಮಿಂಚಲು ಆರಂಭಿಸಿದ್ದಾರೆ. ಈ ಸಮಯದಲ್ಲಿ ತಮ್ಮ ಸಿನಿಮಾ ಬಗ್ಗೇನೇ ಯೋಚನೆ ಮಾಡುವವರ ಮಧ್ಯೆ ಶ್ರೀಲೀಲಾ ಎದ್ದು ಕಾಣುತ್ತಾರೆ. ನಟಿಯ ಈ ಕೆಲಸಕ್ಕೆ ಎಲ್ಲರೂ ಸಂತೋಷ ವ್ಯಕ್ತಪಡಿಸಿದ್ದಾರೆ.

ಮಾತೃಶ್ರೀ ಮನೋವಿಕಾಸ ಕೇಂದ್ರ. ಇದು ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆ‌. ಗುರು ಮತ್ತು ಶೋಭಿತಾ ಎಂಬ ಇಬ್ಬರು ಮಕ್ಕಳನ್ನು ಶ್ರೀಲೀಲಾ ದತ್ತು ತೆಗೆದುಕೊಂಡಿದ್ದಾರೆ. ಮಕ್ಕಳ ಭವಿಷ್ಯದ ಸಂಪೂರ್ಣ ಜವಾಬ್ದಾರಿಯನ್ನು ನಟಿ ಶ್ರೀಲೀಲಾ ವಹಿಸಿಕೊಂಡಿದ್ದಾರೆ.

You may also like

Leave a Comment