Home » Kantara Prequel: ರೌದ್ರ ಅವತಾರದಲ್ಲಿ ಮಿಂಚಿದ ತ್ರಿಶೂಲಧಾರಿ! ಟೀಸರ್‌ನಲ್ಲಿ ರಿಷಬ್‌ ಶೆಟ್ಟಿಯ ರೋಮಾಂಚನಕಾರಿ ದೃಶ್ಯ!!!

Kantara Prequel: ರೌದ್ರ ಅವತಾರದಲ್ಲಿ ಮಿಂಚಿದ ತ್ರಿಶೂಲಧಾರಿ! ಟೀಸರ್‌ನಲ್ಲಿ ರಿಷಬ್‌ ಶೆಟ್ಟಿಯ ರೋಮಾಂಚನಕಾರಿ ದೃಶ್ಯ!!!

1 comment
Kantara Prequel

Kantara Prequel:ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸುವ ಬಹುನಿರೀಕ್ಷಿತ ಕಾಂತಾರ ಚಾಪ್ಟರ್‌ 1ರ ಫಸ್ಟ್‌ ಲುಕ್‌ ವಿಡಿಯೋ ಬಿಡುಗಡೆಯಾಗಿದೆ.ಕಾಂತಾರ 2’ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಮೂಡಿಬರಲಿದೆ. ಜನವರಿಯಲ್ಲಿ ಚಿತ್ರಕ್ಕೆ ಶೂಟಿಂಗ್ ಆರಂಭವಾಗಲಿದೆ.

ನಿರ್ದೇಶಕ ರಿಷಬ್‌ ಶೆಟ್ಟಿ ಅವರ ಕಾಂತಾರ ಸಿನಿಮಾದ ಮುಹೂರ್ತ(Kantara Prequel) ಇಂದು ಕುಂಭಾಸಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ನೆರೆವೇರಿದ್ದು, ಇದೀಗ ಚಿತ್ರತಂಡ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ಎ ಲೆಜೆಂಡ್‌ ವಾಸ್‌ ಬಾರ್ನ್‌ ಎಂಬ ಟೈಟಲ್‌ನಡಿ ಈ ಫಸ್ಟ್‌ ಲುಕ್‌( Kantara A Legend Chapter-1 First Look)ಬಿಡುಗಡೆ ಮಾಡಲಾಗಿದೆ.ಕದಂಬರ ಕಾಲದಲ್ಲಿ ನಡೆಯುವ ಕಥೆಯನ್ನು ಸಿನಿಮಾ ಒಳಗೊಂಡಿದೆ ಎನ್ನಲಾಗಿದೆ. ರಿಷಬ್ ಶೆಟ್ಟಿ ಅವರು ಈ ಚಿತ್ರದಲ್ಲಿ ಉಗ್ರಾವತಾರದಲ್ಲಿ ಕಾಣಿಸಲಿದ್ದಾರೆ.

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ʼಕಾಂತಾರʼ ಸಿನಿಮಾದ ಪ್ರೀಕ್ವೆಲ್‌ ಅಂದರೆ ಎರಡನೇ ಭಾಗದ ಮುಹೂರ್ತ ಕಾರ್ಯಕ್ರಮ ಕುಂದಾಪುರದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಿಯಲ್ಲಿ ಸೋಮವಾರ( ನ.27 ರಂದು) ನೆರವೇರಿದೆ. ಕಾಂತಾರದ ಮುಂದಿನ ಆವೃತ್ತಿಯ “ಕಾಂತಾರ ಎ ಲೆಜೆಂಡ್‌ ಚಾಪ್ಟರ್‌-1” ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಕಾಂತಾರ ಚಿತ್ರದ ಫಸ್ಟ್ ಲುಕ್ ಗಾಗಿ ಮಾಡಿದ ಪೋಸ್ಟರ್ ನಲ್ಲಿ ಇದು ಬರಿ ಬೆಳಕಲ್ಲ, ದರ್ಶನ ಎಂದು ಟ್ಯಾಗ್ ಲೈನ್ ನೀಡಿದ್ದು ಅಭಿಮಾನಿಗಳಿಗೆ ಭಾರೀ ಕುತೂಹಲ ಮೂಡಿಸಿದೆ.

ಇದನ್ನು ಓದಿ: Kantara Prequel: Rishab Shetty ನೀಡಿದ್ರು, ಸಿನಿಮಾ ಪಾತ್ರವರ್ಗ, ಶೂಟಿಂಗ್‌ ಬಗ್ಗೆ ಬಿಗ್‌ ಅಪ್ಡೇಟ್‌!!

ಈ ಹಿಂದಿನ ಕಾಂತಾರದ ದೃಶ್ಯಗಳ ನಿರೀಕ್ಷೆಯಲ್ಲಿದ್ದವರಿಗೆ ಅಚ್ಚರಿಯಾಗುವಂತೆ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ರಕ್ತಸಿಕ್ತ ತಪಸ್ವಿಯಂತೆ ಕಾಣಿಸುವ, ಹಳೆ ಕಾಲದ ರಾಜ ಎಂಬಂತೆ ಇರುವ ವ್ಯಕ್ತಿಯಂತೆ ಕಾಣುತ್ತದೆ. ಈ ಲೆಜೆಂಡ್‌ನನ್ನು ತೋರಿಸಿದ ರೀತಿ ರೋಮಾಂಚನ ಮೂಡಿಸಿದ್ದು,ರಿಷಬ್‌ ಶೆಟ್ಟಿ ಯಾರು ಕೂಡ ನಿರೀಕ್ಷೆ ಮಾಡದ ರೀತಿ ತೋರಿಸಲಾಗಿದೆ. ಇದು ಕದಂಬರ ಕಾಲದ ಚಿತ್ರಣವೇ ಇಲ್ಲವೇ ಪರಶುರಾಮ ಸೃಷ್ಟಿ ತುಳುನಾಡಿನ ಚಿತ್ರಣವೋ ಎಂಬ ಅನುಮಾನ ಹುಟ್ಟು ಹಾಕುತ್ತವೆ. ಈ ಸಂದರ್ಭದಲ್ಲಿ ಬಿಡುಗಡೆಯಾದ ಈ ಫಸ್ಟ್‌ಲುಕ್‌ನ ಕುರಿತು ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಮೂಡಿಸಿದೆ.ಯೂಟ್ಯೂಬ್‌ನಲ್ಲಿ ಫಸ್ಟ್‌ ಲುಕ್‌ ಬಿಡುಗಡೆಯಾದ ಕೇವಲ ಹದಿನೈದು ನಿಮಿಷದಲ್ಲಿ ಹಲವು ಲಕ್ಷ ಜನರು ಈ ಫಸ್ಟ್‌ಲುಕ್‌ ವಿಡಿಯೋ ವೀಕ್ಷಿಸಿದ್ದಾರೆ.

ಇದನ್ನೂ ಓದಿ: Job Interview:ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಬಂದ ಅಭ್ಯರ್ಥಿ, ರೆಸ್ಯೂಮ್ ಬದಲು ಈತ ತಂದ್ದದೇನೆಂದು ತಿಳಿದ್ರೆ ನೀವೇ ಹೌಹಾರುತ್ತೀರಾ !!

 

You may also like

Leave a Comment