Home » ಚಂದನವನದ ಕ್ವೀನ್ ರಮ್ಯಾ ಜೊತೆ ಇರುವ ಹುಡುಗ ಯಾರು? ಗುಡ್ ನ್ಯೂಸ್ ನೀಡಲು ಮೋಹಕತಾರೆ ರೆಡಿ!

ಚಂದನವನದ ಕ್ವೀನ್ ರಮ್ಯಾ ಜೊತೆ ಇರುವ ಹುಡುಗ ಯಾರು? ಗುಡ್ ನ್ಯೂಸ್ ನೀಡಲು ಮೋಹಕತಾರೆ ರೆಡಿ!

by Mallika
0 comments

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಮ್ಯಾ ಸಿನಿಮಾಗಳಿಂದ ದೂರನೇ ಉಳಿದುಕೊಂಡು ತುಂಬಾನೇ ವರ್ಷಗಳಾಗಿದೆ. ಸಿನಿಮಾ ಬಿಡೋಕೆ ಕಾರಣ ರಾಜಕೀಯವಾಗಿತ್ತು. ಹಾಗಂತ ಚಿತ್ರರಂಗದ ಜೊತೆಗಿನ ನಂಟನ್ನು ಪೂರ್ತಿಯಾಗಿ ಬಿಡದಿದ್ದರೂ, ಸಿನಿಮಾ ಕುರಿತು ತಮ್ಮ ಅನಿಸಿಕೆಯನ್ನು ರಮ್ಯಾ ಹಂಚಿಕೊಳ್ಳುತ್ತಲೇ ಇರುತ್ತಾರೆ.

ರಮ್ಯಾ ಅವರ ಅಭಿಮಾನಿ ಬಳಗಕ್ಕೇನೂ ಕಮ್ಮಿ ಇಲ್ಲ. ಈಗಲೂ ಅವರನ್ನು ಆರಾಧಿಸುವವರ ಬಳಗ ಅದೆಷ್ಟೋ ಇದೆ. ಆದಷ್ಟು ಬೇಗ ಕನ್ನಡ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗಲಿ ಎನ್ನುವುದೇ ಅವರ ಅಭಿಮಾನಿಗಳ ಮಹದಾಸೆ.

ಈ ನಡುವೆ ರಮ್ಯಾ ಅವರ ಒಂದು ಫೋಟೋ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಫೋಟೋ ನೋಡಿದ ಮೇಲೆ ಅಭಿಮಾನಿಗಳ ಮನದಲ್ಲಿ ಹತ್ತು ಹಲವು ಪ್ರಶ್ನೆಗಳು ಮೂಡಿವೆ.

ಕರಣ್ ಜೋಶಿ ಅವರ ಜೊತೆ ಇರುವ ರಮ್ಯಾ ಫೋಟೋ ಹಿಂದಿನ ಉದ್ದೇಶವೇನು? ಯಾರದು ಈ ಕರಣ್ ಜೋಶಿ ಹೀಗೆ ಅನೇಕ ಮಾರ್ಗದಲ್ಲಿ ಹುಡುಕಾಟ ಆರಂಭಿಸಿದ್ದಾರೆ ಅಭಿಮಾನಿಗಳು. ನಿನ್ನೆಯಷ್ಟೇ ರಮ್ಯಾ ಅವರು ಈ ಫೋಟೋವನ್ನು ಇನ್ಸ್ಟಾ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದರು. ಅನಂತರ ರಮ್ಯಾ ಅಫೀಶಿಯಲ್ ಪೇಜ್ ನಲ್ಲೂ ಅದನ್ನು ಶೇರ್ ಮಾಡಿದ್ದಾರೆ.

ಈ ಫೋಟೋ ವೈರಲ್ ಆದ ಬೆನ್ನಲ್ಲೇ ರಮ್ಯಾ ಅವರು ಏನಾದರೂ ಗುಡ್ ನ್ಯೂಸ್ ನೀಡುತ್ತಾರೆಯೇ ಎಂಬ ಕುತೂಹಲ ಸೃಷ್ಟಿಯಾಗಿದೆ. ಆದರೆ ಈ ಬಗ್ಗೆ ಸ್ಪಷ್ಟತೆ ಸಿಗಲು ರಮ್ಯಾ ಉತ್ತರಿಸಬೇಕಷ್ಟೇ.

You may also like

Leave a Comment