Home » ಪುತ್ತೂರು ಜನಪ್ರಿಯ ಕಂಬಳದ ವೇಳೆ ಮುಜುಗರಕ್ಕೀಡಾದ ಸಾನ್ಯ ಅಯ್ಯರ್!!

ಪುತ್ತೂರು ಜನಪ್ರಿಯ ಕಂಬಳದ ವೇಳೆ ಮುಜುಗರಕ್ಕೀಡಾದ ಸಾನ್ಯ ಅಯ್ಯರ್!!

0 comments

ಪುತ್ತೂರು : ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಒಡಿಸುವ ಸ್ಪರ್ಧೆಯೇ ಕಂಬಳ. ದಕ್ಷಿಣ ಕನ್ನಡ ಮತ್ತು ಈಗಿನ ಉಡುಪಿ ಜಿಲ್ಲೆಯ ಜಾನಪದದೊಂದಿಗೆ ಹಾಸು ಹೊಕ್ಕಾಗಿದೆ. ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಕಂಬಳ ನೋಡೋದಕ್ಕೆ ಸಾವಿರಾರು ಜನರು ಆಗಮಿಸುತ್ತಾರೆ. ಇದೀಗ ನಮ್ಮ ಕರಾವಳಿಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ಶನಿವಾರ 30ನೇ ವರ್ಷದ ಕೋಟಿಚೆನ್ನಯ್ಯ ಜೋಡುಕರೆ ಕಂಬಳ ನಡೆಸಲಾಯಿತು.

ಈ ಸಂದರ್ಭದಲ್ಲಿ ಸೆಲ್ಫಿ ನೆಪದಲ್ಲಿ ಅಭಿಮಾನಿಯೋರ್ವ ಕುಡಿದು ರಂಪಾಟ ಮಾಡಿದ್ದಾರೆ. ಅದ್ದೂರಿ ಕಾರ್ಯಕ್ರಮಕ್ಕೆ ವಿಶೇಷ ಅಹ್ವಾನಿತರಾಗಿ ಆಗಮಿಸಿದ್ದ ಬಿಗ್‌ಬಾಸ್‌ ಖ್ಯಾತಿಯ ಸಾನಿಯಾ ಅಯ್ಯರ್ ಅವರಿಗೆ ಐ ಲವ್‌ ವ್ಯೂ ಹೇಳುತ್ತಾ ಕೈ ಹಿಡಿದು ಎಳೆದ ದುರಂತ ಘಟನೆ ಬೆಳಕಿಗೆ ಬಂದಿದೆ.ಇನ್ನೂ ಕಂಬಳದ ಅದ್ದೂರಿ ವೇದಿಕೆಯಲ್ಲಿ ಸಾನಿಯಾ ಕರಾವಳಿಯ ಕಲೆಯ ಬಗ್ಗೆ ವರ್ಣನೆ ಮಾಡುತ್ತಾ ಭಾಷಣ ಮಾಡಿದರು ಬಳಿಕ ತೆರಳುತ್ತಿದ್ದಂತೆ ಕಂಠ ಪೂರ್ತಿ ಕುಡಿದ ಅಭಿಮಾನಿಯೊಬ್ಬರು ಸಾನಿಯಾ ಐ ಲವ್ ಹೇಳುತ್ತ ಕೈ ಹಿಡಿದು ಎಳೆದಿದ್ದಾರೆ.ಈ ಘಟನೆಯಿಂದ ಬಿಗ್ ಬಾಸ್ ಖ್ಯಾತಿಯ ಸಾನಿಯಾಗೆ ಮುಜುಗರಕ್ಕೆ ಒಳಗಾದರು. ಕೂಡಲೇ ಕುಡಿದು ತೂರಾಡುತ್ತಿದ್ದ ಅಭಿಮಾನಿಗೆ ಧರ್ಮದೇಟು ನೀಡಿ ಕಂಬಳದಿಂದ ಹೊರಗೆ ನಡೆಯಲು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದು, ದೂರು ದಾಖಲಾಗಿಲ್ಲ ಎನ್ನಲಾಗಿದೆ.

You may also like

Leave a Comment