Home » Shubha Poonja: ರಾಗಿಣಿ, ಶುಭಾ ಪೂಂಜಗೂ ಅಶ್ಲೀಲ ಮೆಸೇಜ್ ಕಳಿಸಿದ್ನಾ ರೇಣುಕಾ ಸ್ವಾಮಿ? ನಟಿ ಶುಭಾ ಪೂಂಜ ಹೇಳಿದ್ದೇನು?

Shubha Poonja: ರಾಗಿಣಿ, ಶುಭಾ ಪೂಂಜಗೂ ಅಶ್ಲೀಲ ಮೆಸೇಜ್ ಕಳಿಸಿದ್ನಾ ರೇಣುಕಾ ಸ್ವಾಮಿ? ನಟಿ ಶುಭಾ ಪೂಂಜ ಹೇಳಿದ್ದೇನು?

0 comments

Shuba Poonja: ರೇಣುಕಾಸ್ವಾಮಿ (Renukaswamy) ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಕೋರ್ಟಿಗೆ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ವಿಷಯಗಳು ಬಯಲಾಗ್ತಿವೆ. ದರ್ಶನ್ ಹಾಗೂ ಪವಿತ್ರ ಗೌಡಳ ಕರಾಳ ಮುಖಗಳು ಹೊರಬರುತ್ತಿವೆ. ಇದರೊಂದಿಗೆ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾದ ರೇಣುಕಾ ಸ್ವಾಮಿಯ ಕುರಿತು ಕೆಲವು ಅಚ್ಚರಿ ಮಾಹಿತಿ ಹೊರಬಂದಿವೆ. ಅದೇನೆಂದರೆ ರೇಣುಕಾಸ್ವಾಮಿ ಕೇವಲ ಪವಿತ್ರಾಗೆ ಮಾತ್ರ ಮೆಸೇಜ್ ಕಳುಹಿಸಿರಲಿಲ್ಲ. ಕನ್ನಡದ ಸ್ಟಾರ್ ನಟಿಯರಿಗೂ ಅವನು ಅಶ್ಲೀಲ ಮೆಸೇಜ್ ಕಳುಹಿಸಿದ್ದ ಅನ್ನೋದು ಬಯಲಾಗಿದೆ.

ಹೌದು, ಕನ್ನಡದ ಹೆಸರಾಂತ ನಟಿಯರಾದ ರಾಗಿಣಿ ದ್ವಿವೇದಿ (Ragini Dwivedi), ಶುಭಾ ಪೂಂಜಾ (Shubha Poonja) ಸೇರಿದಂತೆ ಅನೇಕ ನಟಿಯರಿಗೆ ರೇಣುಕಾಸ್ವಾಮಿ ತನ್ನ ನಕಲಿ ಅಕೌಂಟ್ ನಿಂದ ಅಶ್ಲೀಲ ಸಂದೇಶ ಕಳುಹಿಸಿದ್ದನಂತೆ. ಪೊಲೀಸರ ವಿಚಾರಣೆ ವೇಳೆಯಲ್ಲಿ ಈ ಕುರಿತು ಇಬ್ಬರು ಆರೋಪಿಗಳಾದ ಪ್ರದೋಶ್ ಮತ್ತು ವಿನಯ್‍ ‘ರೇಣುಕಾಸ್ವಾಮಿ ಮೊಬೈಲ್ ನಲ್ಲಿ ನಾವು ರಾಗಿಣಿ, ಶುಭಾ ಪೂಂಜಾ ಸೇರಿದಂತೆ ಅನೇಕ ನಟಿಯರಿಗೆ ರೇಣುಕಾಸ್ವಾಮಿ ಅಶ್ಲೀಲ ಮಸೇಜ್ ಕಳುಹಿಸಿದ್ದನ್ನು ನಾವು ನೋಡಿದ್ದೇವೆ’ ಎಂದು ಪೊಲೀಸರಿಗೆ ಆರೋಪಿಗಳು ಹೇಳಿದ್ದಾರೆ.

ಇನ್ನು ಈ ಸುದ್ದಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ನನ್ನ ಖಾತೆಗೆ ಯಾವುದೇ ಮೆಸೇಜ್‌ಗಳು ಬಂದಿಲ್ಲ ಎಂದು ಶುಭಾ ಪೂಂಜಾ (Shubha Poonja) ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು ‘ನನ್ನ ಎಲ್ಲಾ ಮಾಧ್ಯಮ ಮಿತ್ರರೇ ಬೆಳಗ್ಗೆಯಿಂದ ರೇಣುಕಾಸ್ವಾಮಿ ಪ್ರಕರಣದ ಕುರಿತು ನನಗೆ ಕರೆ ಮಾಡುತ್ತಿದ್ದೀರಾ, ಅದಕ್ಕೆಲ್ಲಾ ನಾನು ಸ್ಪಷ್ಟನೆ ನೀಡಲು ಬಯಸುತ್ತೇನೆ. ನನ್ನ ವೈಯಕ್ತಿಕ ಖಾತೆಯಲ್ಲಿ ಅಂತಹ ಯಾವುದೇ ಮೆಸೇಜ್‌ಗಳು ಬಂದಿಲ್ಲ’ ಎಂದು ನಟಿ ಕ್ಲ್ಯಾರಿಟಿ ನೀಡಿದ್ದಾರೆ

You may also like

Leave a Comment