Home » Silk Smitha: ಸಿಲ್ಕ್ ಸ್ಮಿತಾಳ ಹೆಣದೊಂದಿಗೆ ನಡೆಯಿತು ಸಂಭೋಗ ?! ಇಡೀ ಚಿತ್ರರಂಗವೇ ಬೆಚ್ಚಿಬೀಳುವಂತ ಹೇಳಿಕೆ ನೀಡಿದ ಖ್ಯಾತ ನಟ

Silk Smitha: ಸಿಲ್ಕ್ ಸ್ಮಿತಾಳ ಹೆಣದೊಂದಿಗೆ ನಡೆಯಿತು ಸಂಭೋಗ ?! ಇಡೀ ಚಿತ್ರರಂಗವೇ ಬೆಚ್ಚಿಬೀಳುವಂತ ಹೇಳಿಕೆ ನೀಡಿದ ಖ್ಯಾತ ನಟ

0 comments

Kollywood actor sensational statement: ಸಣ್ಣ ಹರೆಯದಲ್ಲೇ ಸಿನಿ ಜಗತ್ತಿನಲ್ಲಿ ದೊಡ್ಡ ಮಟ್ಟದ ಖ್ಯಾತಿ ಪಡೆದ ನಟಿಯರಲ್ಲಿ ಸಿಲ್ಕ್ ಸ್ಮಿತಾ (Kollywood actor Silk Smitha)ಕೂಡ ಒಬ್ಬರಾಗಿದ್ದಾರೆ. ಇವರ ಡಾನ್ಸ್ ನೋಡೋದಕ್ಕೆ ಕಿಕ್ಕಿರಿದು ಜನ ಚಿತ್ರಮಂದಿರಕ್ಕೆ ಹೋಗುತ್ತಿದ್ದರಂತೆ. ಈ ನಡುವೆ, ನಟಿ ಸಿಲ್ಕ್ ಸ್ಮಿತಾ ಕುರಿತಂತೆ ನಟನೊಬ್ಬ ಕೊಟ್ಟ ಹೇಳಿಕೆ( Kollywood actor sensational statement)ಭಾರೀ ಸಂಚಲನ ಸೃಷ್ಟಿ ಮಾಡಿದೆ.

ಸಿನಿ ಜಗತ್ತಿನಲ್ಲಿ ಸುಮಾರು 450 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿ ಖ್ಯಾತಿ ಪಡೆದ ನಟಿ ತನ್ನ ವೈಯಕ್ತಿಕ ಬಾಳಲ್ಲಿ ಏಳು- ಬೀಳುಗಳ ನಡುವೆ ಸಂತೋಷವನ್ನು ಕಂಡೇ ಇಲ್ಲವೇನೋ ಎಂದರು ತಪ್ಪಾಗದು. ಇದೀಗ ಈ ಖ್ಯಾತ ನಟಿಯ ಬಗ್ಗೆ ಕಾಲಿವುಡ್‌ (Kollywood)ನಟ ಸಂಚಲನ ಮೂಡಿಸುವ ಹೇಳಿಕೆ ನೀಡಿದ್ದಾರೆ. ಕಾಲಿವುಡ್ ನಟ ಮತ್ತು ಪತ್ರಕರ್ತರಾದ ಬೈಲ್ವಾನ್ ರಂಗನಾಥನ್‌ ಹಲವು ದಿನಗಳಿಂದ ಸಿಲ್ಕ್‌ ಸಿಲ್ಕ್ ಸ್ಮಿತಾ ಕುರಿತು ನಾನಾ ಸುದ್ದಿಗಳನ್ನು ಹೇಳುತ್ತಿದ್ದು, ಇವರ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ರಂಗನಾಥನ್ ದಿವಂಗತ ನಟಿ ಸಿಲ್ಕ್ ಸ್ಮಿತಾ ಮೃತದೇಹದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದ ಕುರಿತು ಹೇಳಿಕೆ ನೀಡಿದ್ದಾರೆ. ” ಸಾಮಾನ್ಯವಾಗಿ ಶವಾಗಾರದಲ್ಲಿರುವ ನೌಕರರು ಮದ್ಯ ಸೇವಿಸಿ ಕೆಲಸ ಮಾಡುತ್ತಾರೆ. ಹೀಗಾಗಿ ಶವಾಗಾರದಲ್ಲಿ ನಿಲ್ಲಲು ಆಗುವುದಿಲ್ಲ. ಈಗಿನಂತೆ ಆಗೆಲ್ಲ ಶವಾಗಾರಗಳು ಸ್ವಚ್ಛವಾಗಿರಲಿಲ್ಲ. ಅಷ್ಟೇ ಅಲ್ಲ, ಆಸ್ಪತ್ರೆಯಲ್ಲಿ ಅದೇ ಹೆಚ್ಚು ದುರ್ವಾಸನೆ ಬೀರುವ ಸ್ಥಳವಾಗಿದ್ದು, ಇನ್ನು ಅಲ್ಲಿ ಕೆಲಸ ಮಾಡುವವರಿಗೆ ಮೈಮೇಲೆ ಪ್ರಜ್ಞೆಯೇ ಇರುವುದಿಲ್ಲ. ಕೆಲಸ ಪ್ರಾರಂಭವಾದಾಗ ಕುಡಿದ ಮತ್ತಿನಲ್ಲಿ ಅಡ್ಡಾಡುತ್ತಾರೆ. ಈ ಪರಿಸ್ಥಿತಿಯಲ್ಲಿ ಸಿಲ್ಕ್ ಸ್ಮಿತಾಳ ಕಣ್ಮನ ಸೆಳೆಯುವಂತಹ ಮೈಮಾಟ ಕಂಡಾಗ ಯಾರಾದರೂ ಸುಮ್ಮನಿರಲು ಸಾಧ್ಯವೇ? ಅದರಲ್ಲಿಯೂ ಕುಡಿದು ಪ್ರಜ್ಞಾಹೀನರಾಗಿರುವ ನೌಕರರು ಹೇಗೆ ತಾನೇ ಸುಮ್ಮನಿರುತ್ತಾರೆ? ಅವರು ತಮ್ಮನ್ನೇ ತಾವು ಮರೆತು ಆಕೆಯ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವ ಸಂಭವನೀಯತೆ ಹೆಚ್ಚಿದೆ” ಎಂದು ಇದೀಗ ಬೈಲ್ವಾನ್ ರಂಗನಾಥನ್ ಹೇಳಿಕೆ ನೀಡಿದ್ದಾರೆ. ಇವರ ಮಾತುಗಳು ವೈರಲ್ ಆಗುತ್ತಿದ್ದಂತೆ ಇವರ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

You may also like

Leave a Comment