Home » ಮತ್ತೆ ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್

ಮತ್ತೆ ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್

0 comments

ಕಾರವಾರ: “ಯಾವುದೋ ಜನ್ಮದಲ್ಲಿ ನಾನು ಕನ್ನಡಿಗನಾಗಿ ಜನಿಸಿರುವೆ ಅನ್ನಿಸುತ್ತದೆ. ಅದಕ್ಕೆ ನನ್ನ ಅತ್ಯುತ್ತಮ ಹಾಡುಗಳೆಲ್ಲ ಕನ್ನಡದಲ್ಲಿವೆ. ಹಿಂದೆ ಆಗಿರುವ ಘಟನೆಗೆ ಕ್ಷಮೆ ಇರಲಿ,” ಎಂದು ಬಾಲಿವುಡ್ ಗಾಯಕ ಸೋನು ನಿಗಮ್ ಹೇಳಿದರು.

ರಾಜ್ಯ ಸರಕಾರದಿಂದ ನಗರದಲ್ಲಿ ಆಯೋಜಿಸಿದ್ದ ಕರಾವಳಿ ಉತ್ಸವ ಸಪ್ತಾಹದ ಮೂರನೇ ದಿನದ ಸಂಗೀತ ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆಗಳನ್ನು ಹೊರಹಾಕಿದ ಅವರು, ”ಕನ್ನಡ ಭಾಷೆ ಮೇಲೆ ನನಗೆ ಅಪಾರ ಗೌರವ ಇದೆ. ಕನ್ನಡದ ಸಾಕಷ್ಟು ಹಾಡುಗಳನ್ನು ಹಾಡಿದ್ದೇನೆ. ಕನ್ನಡ ನನಗೆ ಬಹಳ ಗೌರವ ಕೊಟ್ಟಿದೆ,” ಎಂದರು.

ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಕನ್ನಡ ಹಾಡು ಹಾಡಿ ಎಂದು ಪ್ರೇಕ್ಷಕರು ಬೇಡಿದಾಗ ಸೋನು ನಿಗಮ್ ಸಿಟ್ಟು ತೋರಿಸಿದ್ದರು. ಅದರಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.

You may also like