ಇಂದಿನ ದಿನಗಳಲ್ಲಿ ಓಡಾಟ ನಡೆಸಲು ವಾಹನಗಳು ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಹನಗಳು ಇರೋದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹೆಚ್ಚಳ ಕಂಡುಬರುತ್ತಿರುವ ಹಿನ್ನೆಲೆ ಹೆಚ್ಚಿನವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಭಾರತದ ಮಾರುಕಟ್ಟೆಯಲ್ಲಿ ನವೀನ ಮಾದರಿಯ ಹೊಸ ವೈಶಿಷ್ಟ್ಯದ ಮೂಲಕ ಜನರ ಅಭಿರುಚಿಗೆ ತಕ್ಕಂತೆ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟು ಜನ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಬೈಕ್ ಅನ್ನುವ ಕ್ರೇಜ್ ಯಾರಿಗಿಲ್ಲ ಹೇಳಿ?? ಆಕರ್ಷಕ ಲುಕ್, ವಿಭಿನ್ನ ಫೀಚರ್ ಮೂಲಕ ಲಗ್ಗೆ ಇಡುವ ಬೈಕ್ ಕೊಳ್ಳಲು ಯುವ ಜನತೆ ಹೆಚ್ಚಿನ ಆಸಕ್ತಿ ತೋರುತ್ತಾರೆ. ಅಷ್ಟರ ಮಟ್ಟಿಗೆ ಬೈಕ್ಗಳು ಹವಾ ಸೃಷ್ಟಿ ಮಾಡುತ್ತವೆ. ಅದರಲ್ಲಿಯೂ ಸುಜುಕಿ ವಾಹನಗಳು ವಿಶೇಷ ಟ್ರೆಂಡ್ ಸೃಷ್ಟಿ ಮಾಡಿದ್ದು, ಸುಜುಕಿ ಕಂಪನಿಯ ವಾಹನಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ. ವಾಹನಗಳ ಆಕರ್ಷಕ ಲುಕ್ ಜೊತೆಗೆ ಕಾರ್ಯಕ್ಷಮತೆಯಿಂದ ಜನಪ್ರಿಯತೆ ಗಳಿಸಿದ್ದು ಸದ್ಯ, ಬೈಕ್ ಪ್ರಿಯರಿಗೆ ಬಂಪರ್ ಸಿಹಿ ಸುದ್ದಿ ಎದುರು ನೋಡುತ್ತಿದೆ. ಹೌದು!!! ಸುಜುಕಿ ಕಂಪನಿಯು ಭಾರತದಲ್ಲಿ ನವೀಕರಿಸಿದ ಜಿಕ್ಸರ್ ಸರಣಿ ಬೈಕ್ಗಳನ್ನು ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ. ಸುಜುಕಿ ಕಂಪನಿಯು ಜಿಕ್ಸರ್ ಸರಣಿ ಬೈಕ್ಗಳನ್ನು ಅತ್ಯಾಕರ್ಷಕವಾಗಿ ನವೀಕರಿಸಿದ್ದು, ಸಾಕಷ್ಟು ಆಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ದೇಶೀಯ ಮಾರುಕಟ್ಟೆಯಲ್ಲಿ ಸುಜುಕಿ, ಜಿಕ್ಸರ್ ಸರಣಿಯಲ್ಲಿ ಜಿಕ್ಸರ್, ಜಿಕ್ಸರ್ ಎಸ್ಎಫ್, ಜಿಕ್ಸರ್ 250 ಹಾಗೂ ಜಿಕ್ಸರ್ ಎಸ್ಎಫ್ 250 ಎಂಬ ನಾಲ್ಕು ಮಾದರಿಗಳ ಮೋಟಾರ್ಸೈಕಲ್ ಗಳನ್ನು ಮಾರಾಟ ಮಾಡುತ್ತಿದೆ. ಇವು ತನ್ನದೇ ಆದ ವಿಶೇಷತೆಯನ್ನು ಒಳಗೊಂಡಿವೆ. ಯುವ ರೈಡರ್ ಗಳನ್ನು ಆಕರ್ಷಿಸುವ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಜಿಕ್ಸರ್ ಎಸ್ಎಫ್ 250 ಟಾಪ್ ಎಂಡ್ ಮಾದರಿಯಾಗಿದ್ದು, ಪಇದೀಗ ನವೀಕರಣಗೊಳ್ಳುವ ಮೂಲಕ ಬಿಡುಗಡೆಯಾಗಿದೆ.

ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ಸುಜುಕಿ ಜಿಕ್ಸರ್ ಸರಣಿ ಬೈಕ್ಗಳ ವೈಶಿಷ್ಟ್ಯತೆ ಬಗ್ಗೆ ಗಮನ ಹರಿಸಿದರೆ, ಎಂಜಿನ್ ಕಾರ್ಯಕ್ಷಮತೆಯ ಅನುಸಾರ, 155 ಸಿಸಿ, ಸಿಂಗಲ್ – ಸಿಲಿಂಡರ್ ಎಂಜಿನ್ ಹೊಂದಿದ್ದು, 13.4 bhp ಗರಿಷ್ಠ ಪವರ್ ಹಾಗೂ 13.8 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5 – ಸ್ವೀಡ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು ಇದರ ಎಂಜಿನ್ ಕಾರ್ಯಕ್ಷಮತೆ ಅತ್ಯುತ್ತಮವಾಗಿದೆ. ಉಳಿದ ಬೈಕ್ ಗಳಿಗೆ ಟಕ್ಕರ್ ನೀಡಲು ಇದು ಮುಂದಾಗಿದ್ದು, ಯುವಜನತೆಯ ಮೆಚ್ಚುಗೆಗೆ ಪಾತ್ರವಾಗುವುದರಲ್ಲಿ ಸಂಶಯವಿಲ್ಲ.
ಜಿಕ್ಸರ್ 250 ಮೆಟಾಲಿಕ್ ಮ್ಯಾಟ್ ಸ್ಟೆಲ್ಲರ್ ಬ್ಲೂ ಮತ್ತು ಮೆಟಾಲಿಕ್ ಮ್ಯಾಟ್ ಬ್ಲಾಕ್ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಜಿಕ್ಸರ್ ಎಸ್ಎಫ್ 250, ಮೆಟಾಲಿಕ್ ಸೋನಿಕ್ ಸಿಲ್ವರ್, ಪರ್ಲ್ ಬ್ಲೇಜ್ ಆರೆಂಜ್, ಮೆಟಾಲಿಕ್ ಟ್ರೈಟಾನ್ ಬ್ಲೂ ಮತ್ತು ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಾಗಲಿದೆ. ಇಷ್ಟೇ ಅಲ್ಲದೆ ಈ ಬೈಕ್ ಮಾದರಿಗೆ ಸರಿಸಾಟಿಯೆ ಇಲ್ಲ ಎಂದರೂ ತಪ್ಪಾಗಲಾರದು.

ಸುಜುಕಿ ಜಿಕ್ಸರ್ ಸರಣಿ ಬೈಕ್ಗಳ ವೈಶಿಷ್ಟ್ಯದ ಬಗ್ಗೆ ಗಮನಿಸಿದರೆ, ಇದು ಬ್ಲೂಟೂತ್ ಕನೆಕ್ಟ್ದ್ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟರ್ನ್ – ಬೈ – ಟರ್ನ್ ನ್ಯಾವಿಗೇಷನ್, ಎಸ್ಟಿಮೇಟೆಡ್ ಟೈಮ್ ಆಫ್ ಅರೈವಲ್ (ಇಟಿಎ), ಇನ್ – ಕಾಮಿಂಗ್ ಕಾಲ್, ಮಿಸ್ಡ್ ಕಾಲ್, ಎಸ್ಎಂಎಸ್ ಮತ್ತು ವಾಟ್ಸಾಪ್ ಅಲರ್ಟ್ ಡಿಸ್ಪ್ಲೇ, ಸ್ವೀಡ್, ಫೋನ್ ಬ್ಯಾಟರಿ ಲೆವೆಲ್ ಡಿಸ್ಪ್ಲೇ ಸೇರಿದಂತೆ ಹತ್ತು ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹೊಚ್ಚ ಹೊಸ ಮಾದರಿಯ ಜಿಕ್ಸರ್ ಸರಣಿ ಮೋಟಾರ್ಸೈಕಲ್ಸ್ ಆರಂಭಿಕ ಮಾದರಿಯ ಬೆಲೆ ರೂ.1.40 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು (ಎಕ್ಸ್ ಶೋರೂಂ). ಟಾಪ್ ಎಂಡ್ ಮಾದರಿ ಜಿಕ್ಸರ್ ಎಸ್ಎಫ್ 250, ರೂ.2.02 ಲಕ್ಷ ದರವನ್ನು ಒಳಗೊಂಡಿದೆ.
