ಎಣ್ಣೆ ಪ್ರಿಯರು ಒಮ್ಮೆಯಾದರೂ ಬಾರ್ ಗೆ ಎಂಟ್ರಿ ಕೊಡದೆ ಇದ್ದರೆ ಮನಕ್ಕೆ ಸಮಾಧಾನವೇ ಇರುವುದಿಲ್ಲ. ಎಣ್ಣೆ ಪ್ರಿಯರ ಬಳಿ ಯಾವುದೆಲ್ಲ ಬ್ರಾಂಡ್ ಇದೆ ಅಂತ ಕೇಳಿದ್ರೆ ಸಾಕು ಪಟಾಪಟ್ ಅಂತ ಉದ್ದದ ಲಿಸ್ಟ್ ಕೊಟ್ಟು ಬಿಡ್ತಾರೆ!!. ಎಣ್ಣೆ ಪ್ರಿಯರಿಗೆ ಬಂಪರ್ ಸಿಹಿ ಸುದ್ದಿ . ಈ ಮೊದಲೂ ಕೂಡ ಮದ್ಯಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ತೀರ್ಮಾನ ಕೈಗೊಂಡಿರುವ ದುಬೈನಲ್ಲಿ ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.
ಈಗ ಈ ಮುಸ್ಲಿಂ ದೇಶದಲ್ಲಿ ಮದ್ಯ ತೆರಿಗೆ ಮುಕ್ತವಾಗಲಿದೆ. ಹೌದು!!..ದುಬೈನ ಎರಡು ಸರ್ಕಾರಿ ಮದ್ಯದ ಕಂಪನಿಗಳಾದ ಮೆರಿಟೈಮ್ ಮತ್ತು ಮರ್ಕೆಂಟೈಲ್ ಇಂಟರ್‌ನ್ಯಾಶನಲ್ ಮದ್ಯದ ಮೇಲಿನ ತೆರಿಗೆ ಮತ್ತು ಪರವಾನಗಿ ಶುಲ್ಕವನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದು, ಈ ಎರಡೂ ಕಂಪನಿಗಳು ಎಮಿರೇಟ್ಸ್ ಸಮೂಹದ ಭಾಗವಾಗಿವೆ ಎಂಬುದನ್ನು ಗಮನಿಸಬೇಕು.
ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ರಾಷ್ಟ್ರ ದುಬೈ ಆಗಿದ್ದು, ದುಬೈ ಆಡಳಿತ ಪ್ರವಾಸಿಗರಿಗಾಗಿ ಹಲವು ಕ್ರಮಗಳನ್ನು ಅನುಷ್ಠಾನ ಮಾಡುತ್ತಲೇ ಇರುತ್ತದೆ. ಹೊಸ ವರ್ಷದ ಸಂದರ್ಭದಲ್ಲಿ ದುಬೈ ಆಡಳಿತವು ಮದ್ಯದ ಮೇಲಿನ ತೆರಿಗೆ ಮತ್ತು ಪರವಾನಗಿ ಶುಲ್ಕವನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದು, ಈ ಮೂಲಕ ದುಬೈ ಸ್ಥಳೀಯರಿಗೆ ಮಾತ್ರವಲ್ಲದೆ, ಪ್ರವಾಸಿಗರಿಗೂ ಕೂಡ ಭರ್ಜರಿ ಉಡುಗೊರೆ ನೀಡಿದೆ.
ದುಬೈನಲ್ಲಿ ಕಾನೂನು ಹೀಗಿವೆ:
ಮದ್ಯ ಸೇವನೆಗಾಗಿ ದುಬೈ ಪೊಲೀಸರಿಂದ ಪ್ಲಾಸ್ಟಿಕ್ ಕಾರ್ಡ್ ಹೊಂದಿಲ್ಲದೆ ಇದ್ದಲ್ಲಿ ಹೆಚ್ಚಿನ ದಂಡ ಮತ್ತು ಬಂಧನ ಮಾಡಬಹುದು.
ಪ್ರವಾಸಿಗರ ಅತ್ಯಾಕರ್ಷಕ ಕೇಂದ್ರವಾಗಿರುವ ದುಬೈನ ಕಾನೂನಿನ ಅನುಸಾರ, ಮುಸ್ಲಿಮೇತರರು ಮದ್ಯ ಸೇವಿಸಲು 21 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು.
ಮದ್ಯ ಸೇವಿಸುವವರು ಬಿಯರ್, ವೈನ್ ಮತ್ತು ಮದ್ಯವನ್ನು ಖರೀದಿಸಲು, ಸಾಗಿಸಲು ಮತ್ತು ಸೇವಿಸಲು ಅನುಮತಿಸುವ ದುಬೈ ಪೊಲೀಸರು ನೀಡಿದ ಪ್ಲಾಸ್ಟಿಕ್ ಕಾರ್ಡ್ ಅನ್ನು ಹೊಂದಿರಬೇಕು.
ಆಡಳಿತಾರೂಢ ಅಲ್ ಮಖ್ತೂಮ್ ಕುಟುಂಬದ ಆದೇಶದ ಮೇರೆಗೆ ಈ ಘೋಷಣೆ ಮಾಡಲಾಗಿದೆ. ಆದರೆ, ಈ ಘೋಷಣೆಯಿಂದಾಗಿ ಎರಡೂ ಕಂಪನಿಗಳಿಗೆ ಆದಾಯದ ದೊಡ್ಡ ಮೂಲದ ಮೇಲೆ ಪ್ರಭಾವ ಬೀರುತ್ತದೆ. ವಾಸ್ತವವಾಗಿ, ಈ ಮೊದಲು ದುಬೈನಲ್ಲಿ ಮದ್ಯದ ಮೇಲೆ 30% ತೆರಿಗೆ ಮತ್ತು ಮದ್ಯದ ಪರವಾನಗಿ ಪಡೆದವರು ನಿರ್ದಿಷ್ಟ ಶುಲ್ಕವನ್ನು ನೀಡಬೇಕಾಗಿತ್ತು.
