ತನ್ನ ವೃತ್ತಿ ಜೀವನದಲ್ಲಾಗಲಿ ಅಥವಾ ತನ್ನ ರಿಯಲ್ ಲೈಫ್‌ನಲ್ಲಾಗಲಿ ಒಂದೇ ಒಂದು ಕಪ್ಪು ಚುಕ್ಕೆ ಬರದ ಹಾಗೇ ನೋಡಿಕೊಂಡ ವ್ಯಕ್ತಿ ವಿಜಯ್. ಕಾಲಿವುಡ್ ಸ್ಟಾರ್ ತಳಪತಿ ವಿಜಯ್ ದಾಂಪತ್ಯ ಜೀವನದಲ್ಲಿ ಇತ್ತೀಚೆಗೆ ಒಂದು ಮಾತು ಸಾಮಾಜಿಕ ಜಾಲತಾಣದಲ್ಲಿ, ಅಭಿಮಾನಿಗಳ ಬಾಯಿಂದ ಬಾಯಿಗೆ ಬಹಳ ಜೋರಾಗಿ ಸದ್ದು ಮಾಡುತ್ತಿದೆ. ಅದುವೇ ವಿಜಯ್ ತನ್ನ ಪತ್ನಿ ಸಂಗೀತಾ ಅವರಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎಂದು. ದಕ್ಷಿಣ ಭಾರತದ ಸುಂದರ ದಂಪತಿಗಳಲ್ಲಿ ಒಂದಾಗಿದ್ದ ಈ ಜೋಡಿ, ಈಗ ದೂರಾಗುತ್ತಿರುವ ವಿಷಯ ಕೇಳಿ ನಿಜಕ್ಕೂ ನಂಬೋಕೆ ಸಾಧ್ಯವಾಗುತ್ತಿಲ್ಲ. ಅದೇನೇ ಇರಲಿ ಈ ಜೋಡಿ ದೂರ ಆಗದೇ ಇರಲಿ ಎನ್ನುವುದೇ ಎಲ್ಲರ ಆಶಯ.
ವಿಜಯ್ ವಿಚ್ಛೇದನ ಸುದ್ದಿ ವೈರಲ್ ಆಗುತ್ತಿದ್ದಂತೆ ಅನೇಕ ನಟಿಯರ ಜೊತೆ ಹೆಸರು ಕೇಳಿ ಬರುತ್ತಿದೆ. ಅಂದಹಾಗೆ ವಿಜಯ್ ಇದುವರೆಗಿನ ವೃತ್ತಿ ಜೀವನದಲ್ಲಿ ಯಾರ ಜೊತೆ ಕೂಡಾ ಅವರ ಹೆಸರು ಥಳಕು ಹಾಕಿಕೊಂಡಿಲ್ಲ. ಸಿನಿಮಾ ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದ ವಿಜಯ್ ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ವಿಚಾರಕ್ಕೆ ಸುದ್ದಿಯಾಗುತ್ತಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಈ ಸುಂದರ ಜೋಡಿಯ ದಾಂಪತ್ಯದಲ್ಲಿ ಹುಳಿ ಹಿಂಡಿದ್ದು ಓರ್ವ ಪ್ರಖ್ಯಾತ ನಟಿ ಎಂಬ ಮಾತು ಈಗ ಕೇಳಿ ಬರುತ್ತಿದೆ. ತಮಿಳಿನ ಖ್ಯಾತ ನಟಿ ಕೀರ್ತಿ ಸುರೇಶ್ ವಿಜಯ್ ಜೀವನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದವರು ಎಂದು ಹೇಳಲಾಗುತ್ತಿದೆ. ಇವರಿಬ್ಬರು ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಬಹಳ ಕ್ಲೋಸ್ ಆಗಿದ್ದು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಮಾತೊಂದು ಕೇಳಿ ಬರುತ್ತಿದೆ. ಇವರಿಬ್ಬರು ಕ್ಲೋಸ್ ಆಗಿದ್ದು ಮಾತ್ರವಲ್ಲದೇ, ಇವರಿಬ್ಬರು ಮದುವೆ ಕೂಡಾ ಆಗುತ್ತಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ಕೀರ್ತಿಗೋಸ್ಕರ ವಿಜಯ್ ತಮ್ಮ ಪತ್ನಿಯಿಂದ ದೂರ ಆಗುತ್ತಿದ್ದಾರೆಂಬ ಗುಲ್ಲೆಬ್ಬಿದೆ. ಕಾಲಿವುಡ್ ಅಂಗಳದಲ್ಲಿ ಈ ಮಾತು ಎಲ್ಲರ ಬಾಯಿಯಲ್ಲಿ ಹರಿದಾಡುತ್ತಿದೆ.

ವಿಜಯ್ ಮತ್ತು ಸಂಗೀತಾ ಅವರದ್ದು ಲವ್ ಮ್ಯಾರೇಜ್. ವಿಜಯ್ ಸಿನಿಮಾ ನೋಡಿ ಇಂಪ್ರೆಸ್ ಆದ ಸಂಗೀತಾ ಬಳಿಕ ವಿಜಯ್ ಅವರನ್ನು ಭೇಟಿಯಾದರು. 1996ರಲ್ಲಿ ಮೊದಲ ಬಾರಿಗೆ ಇಬ್ಬರೂ ಭೇಟಿಯಾಗಿದ್ದು, ಚೆನ್ನೈ ಶೂಟಿಂಗ್ ಸೆಟ್ ನಲ್ಲಿ ಸಂಗೀತ ಮೊದಲ ಬಾರಿಗೆ ವಿಜಯ್ ಅವರನ್ನು ಭೇಟಿಯಾದರು. ಅಂದಹಾಗೆ ಸಂಗೀತ ಯುಕೆಯಲ್ಲಿ ಇದ್ದರು. ವಿಜಯ್ ಇಷ್ಟವಾದ ಬಳಿಕ ಚೆನ್ನೈಗೆ ಬರಲು ಪ್ರಾರಂಭಿಸಿದರು. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದ ಬಳಿಕ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾದರು.
ಅಭಿಮಾನಿಗಳಿಗೆ ಕೀರ್ತಿ ಸುರೇಶ್ ಮತ್ತು ವಿಜಯ್ ಸುದ್ದಿ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ #JusticeForSangeetha ಎನ್ನುವ ಹ್ಯಾಶ್ ಟ್ಯಾಗ್ ವೈರಲ್ ಆಗಲು ಶುರುವಾಗಿದೆ. ಈ ಕಾರಣದಿಂದ ಎಲ್ಲರೂ ವಿಜಯ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. 23ವರ್ಷಗಳಿಂದ ಸುಂದರ ಸಾಂಸಾರಿಕ ಜೀವನ ನಡೆಸುತ್ತಿದ್ದ ವಿಜಯ್ ಮತ್ತು ಸಂಗೀತಾ ಇಬ್ಬರೂ ಒಟ್ಟಿಗೆ ಚೆನ್ನಾಗಿ ಇರಲಿ ಎಂದು ಹಾರೈಸುತ್ತಿದ್ದಾರೆ.
