Home » Jhanavi: ‘ಅವರನ್ನು ಚಾನೆಲ್ ಅವರೇ ಉಳಿಸಿಕೊಳ್ಳುತ್ತಾರೆ’ – ಬಿಗ್ ಬಾಸ್ ಮನೆಯಲ್ಲಿ ಜಾನ್ವಿ ವಿವಾದ!!

Jhanavi: ‘ಅವರನ್ನು ಚಾನೆಲ್ ಅವರೇ ಉಳಿಸಿಕೊಳ್ಳುತ್ತಾರೆ’ – ಬಿಗ್ ಬಾಸ್ ಮನೆಯಲ್ಲಿ ಜಾನ್ವಿ ವಿವಾದ!!

0 comments

Jhanavi: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳನ್ನು ಉಳಿಸಲು ಜನರು ವೋಟ್ ಮಾಡಿದರು ಕೂಡ ಚಾನೆಲ್ ನಿರ್ಧರಿಸಿ ತೀರ್ಮಾನವನ್ನು ಕೈಗೊಳ್ಳುತ್ತದೆ ಎಂಬುದು ಹಲವರ ಆರೋಪ. ಈ ಕುರಿತಾಗಿ ಚಾನೆಲ್ ಎಷ್ಟೇ ಸ್ಪಷ್ಟೀಕರಣ ಕೊಟ್ಟರೂ ಕೂಡ ಅನೇಕರು ಇದನ್ನು ನಂಬುವುದಿಲ್ಲ. ಇದೀಗ ಈ ಅನುಮಾನಕ್ಕೆ ತುಪ್ಪ ಸುರಿಯುವಂತೆ ಬಿಗ್ ಬಾಸ್ ಸ್ಪರ್ದಿಯಾಗಿರುವ ಜಾನ್ವಿ ಮಾತನಾಡಿದ್ದಾರೆ.

ಹೌದು, ಬಿಗ್ ಬಾಸ್ ಮನೆಯೊಳಗೆ ಸೂರಜ್ ಮತ್ತು ರಾಶಿಕಾ ಅವರನ್ನು ಕುರಿತು ಜಾನ್ವಿಯವರು ‘ಚಾನಲ್ ಅವರು ಇವರನ್ನು ಉಳಿಸಿಕೊಳ್ಳುತ್ತಾರೆ’ ಎಂದು ಹೇಳಿದ್ದಾರೆ. ಜಾನ್ವಿ, ಸೂರಜ್ ಹಾಗೂ ರಾಶಿಕಾ ಒಟ್ಟಿಗೆ ನಿಂತು ಮಾತನಾಡುತ್ತಿದ್ದರು. ಈ ವೇಳೆ ಜಾನ್ವಿ ಈ ವಾದ ಮುಂದೆ ಇಟ್ಟರು. ರಾಶಿಕಾ ಹಾಗು ಸೂರಜ್ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇದರಿಂದ ಚಾನೆಲ್​ ಅವರು ಇವರನ್ನು ಕಳುಹಿಸಿಕೊಡಲ್ಲ ಎಂಬ ನಂಬಿಕೆಯಲ್ಲಿ ಜಾನ್ವಿ ಇದ್ದಂತೆ ಇದೆ.

ಇನ್ನೂ ಇದಕ್ಕೆ ಸೂರಜ್ ಉತ್ತರಿಸಿದ್ದು, ‘ರಾಶಿ ಹಾಗೂ ಸೂರಜ್ ಮಧ್ಯೆ ಒಂದು ಲವ್​ ಟ್ರ್ಯಾಕ್ ನಡೆಯುತ್ತಿದೆ. ಇದರಿಂದ ಚಾನೆಲ್ ಅವರು ಉಳಿಸುತ್ತಾರೆ ಎಂದು ನೀವು ಹೇಳ್ತಾ ಇದೀರಾ. ಇದು ತಪ್ಪು. ಮೊದಲನೆಯದಾಗಿ ನಮ್ಮ ಮಧ್ಯೆ ಲವ್ ಇಲ್ಲ. ಚಾನೆಲ್ ಆ್ಯಂಗಲ್​ನಿಂದ ನೀವು ಮಾತನಾಡುತ್ತಿರುವುದು ಕೂಡ ತಪ್ಪೇ. ವೀಕೆಂಡ್​ನಲ್ಲಿ ಈ ವಿಚಾರ ಬಂದ್ರೆ ಸಮಸ್ಯೆ ಆಗುತ್ತೆ. ನಿಮ್ಮ ಹಳ್ಳ ನೀವೇ ತೋಡಿಕೊಳ್ಳಬೇಡಿ’ ಎಂದು ಸೂರಜ್ ಅವರು ಜಾನ್ವಿಗೆ ಕಿವಿಮಾತು ಹೇಳಿದರು.

You may also like