Home » Varthur Santosh: ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ರಾತ್ರೋ ರಾತ್ರಿ ಎಸ್ಕೇಪ್ !!

Varthur Santosh: ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ರಾತ್ರೋ ರಾತ್ರಿ ಎಸ್ಕೇಪ್ !!

1 comment
Varthur Santosh

Varthur Santosh: ಹಳ್ಳಿಕಾರ್ ಒಡೆಯ ಎಂದೇ ಖ್ಯಾತರಾಗಿರುವ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್(Varthur santosh) ಅವರು ರಾತ್ರೋ ರಾತ್ರಿ ಬಿಗ್ ಬಾಸ್ ಮನೆಯಿಂದ ಕಾಣೆಯಾಗಿದ್ದಾರೆ, ಎಸ್ಕೇಪ್ ಆಗಿದ್ದಾರೆ ಎನ್ನುವ ವಿಚಾರವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಹಾಗಿದ್ರೆ ಇದು ನಿಜವೇ? ಇದರ ಅಸಲಿ ವಿಚಾರ ಏನು? ಇಲ್ಲಿದೆ ನೋಡಿ.

ಬಿಗ್ ಬಾಸ್ ಮನೆಯೊಳಗಿರೋ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಅಂದ್ರೆ ನಾಡಿನ ಹಲವರಿಗೆ ಪ್ರೀತಿ. ಇದಕ್ಕೆ ಕಳೆದೆರಡು ವಾರಗಳ ಹಿಂದೆ ಅವರಿಗೆ ಬಂದ ವೋಟ್ ಗಳೇ ಸಾಕ್ಷಿ. ಆದರೂ ಹುಲಿ ಉಗುರಿನ ವಿಚಾರದಿಂದ ವಿಚಲಿತರಾಗಿ ಸಂತೋಷ್ ಅವರು ನಾನು ಬಿಗ್ ಬಾಸ್ ನಿಂದ ಹೊರ ಹೋಗುತ್ತೇನೆ ಅಂದಿದ್ರು. ನಂತರ ಅವರ ತಾಯಿ ಬಂದು ಸಮಾಧಾನಾಡಿ, ಸಾಂತ್ವನ ಹೇಳಿ ಆಡುವ ಛಲವನ್ನು ತುಂಬಿದ್ದರು. ಆದರೀಗ ಮತ್ತೆ ವರ್ತೂರ್ ಸಂತೋಷ್ ಕಾಣೆಯಾಗಿರುವ ಸುದ್ದಿ ವೈರಲ್ ಆಗಿದೆ.

ಹೌದು, ವರ್ತೂರ್ ಅವರಿಗೆ ಅವರ ತಾಯಿಯೇ ಬಂದು ಸಮಾಧಾನ ಮಾಡಿದರೂ ಮನೆಯಿಂದ ಹೊರ ಹೋಗುತ್ತೇನೆ ಎನ್ನುವ ಚಾಳಿಯನ್ನು ಇನ್ನೂ ಬಿಟ್ಟಿಲ್ಲ. ಯಾಕೆಂದರೆ JioCinemaಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ವಾರಾಂತ್ಯದ ‘ಉತ್ತಮ’ ಮತ್ತು ‘ಕಳಪೆ’ ವೋಟಿಂಗ್‌ಗಳಲ್ಲಿ ಅತಿ ಹೆಚ್ಚು ವೋಟ್ ಪಡೆದು ವರ್ತೂರ್‍ ’ಕಳಪೆ’ಯ ಹಣೆಪಟ್ಟಿ ಪಡೆದು ಜೈಲೊಳಗೆ ಹೋಗಿದ್ದಾರೆ. ಇದರಲ್ಲಿ ವರ್ತೂರ್ ಅವರು ‘ಯಾರು ಏನೇ ಹೇಳಲಿ ನಾನು ಏನು ಎನ್ನುವುದು ನನಗೆ ಗೊತ್ತು’ ಎಂದು ಹೇಳುವದನ್ನು ಕೇಳಬಹುದು.

ಅಲ್ಲದೆ ರಾತ್ರಿ ಎಲ್ಲರೂ ಮಲಗಿದ ಮೇಲೆ ತುಕಾಲಿ ಹಾಗೂ ವರ್ತೂರ್ ಸಂತೋಷ್ ಮಾತನಾಡುತ್ತಿದ್ದು, ವರ್ತೂರ್ ಅವರು ತುಕಾಲಿ ಬಳಿ ‘ಜೈಲಿಗೆ ಬಂದವರಾರೂ ಈವರೆಗೆ ಆಚೆಗೆ ಬಂದಿಲ್ಲ ಅಲ್ವಾ?’ ಎಂದು ಕೇಳಿದ್ದಾರೆ. ತುಕಾಲಿ ಸಂತೋಷ್‌, ‘ಆಗಿದ್ದಾಗ್ಲಿಈಚೆಗೆ ಬಂದ್ಬಿಡು’ ಎಂದು ಕುಮ್ಮಕ್ಕು ಕೊಟ್ಟಿದ್ದಾರೆ. ವರ್ತೂರ್ ಸಂತೋಷ್ ಜೈಲಿನ ಕಂಬಿಗಳ ನಡುವಿಂದ ನುಸುಳಿಕೊಂಡು ಆಚೆಗೆ ಬಂದಿದ್ದಾರೆ. ‘ಮನೆಯವರೆಲ್ಲ ಮಲ್ಕೊಂಡಿದ್ದಾರಲ್ವಾ?’ ಎಂದು ಅವರು ಕೇಳುತ್ತಿದ್ದ ಹೊತ್ತಿನಲ್ಲೇ ಸೋಪಾದ ಮೇಲೆ ಮಲಗಿದ್ದ ಸಂಗೀತಾ ತಲೆ ಎತ್ತಿ ನೋಡಿದ್ದಾರೆ. ಆದರೆ ನಂತರ ಏನಾಗುತ್ತೆ ಎಂಬುದು ಸಸ್ಪೆನ್ಸ್ ಆಗಿದೆ.

You may also like

Leave a Comment