Vijayalakshmi Darshan: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣ ಇಡೀ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದಲ್ಲಿಯೂ ಸುದ್ದಿಯಾದ ಪ್ರಕರಣ. ರೇಣುಕಾಸ್ವಾಮಿ ಸಾವಿನ ಸಂದರ್ಭ ಅವರ ಪತ್ನಿ ಗರ್ಭಿಣಿಯಾಗಿದ್ದರು. ಕೆಲವು ರೇಣುಕಾಸ್ವಾಮಿ ಅವರ ಪತ್ನಿ ಡೆಲಿವರಿ ಆಗಿದ್ದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬೆಳವಣಿಗೆ ಬಗ್ಗೆ ಜೈಲಲ್ಲಿರೋ ದರ್ಶನ್(Darshan) ಪ್ರತಿಕ್ರಿಯಿಸಿ ಒಳ್ಳೆಯದಾಗಲಿ ಎಂದೂ ಹಾರೈಸಿದ್ದರು. ಈ ಬೆನ್ನಲ್ಲೇ ದರ್ಶನ್ ತೂಗುದೀಪ್ ಅವರ ಧರ್ಮಪತ್ನಿ ವಿಜಯಲಕ್ಷ್ಮಿ ದರ್ಶನ್(Vijayakalshmi) ಅವರು ರೇಣುಕಾಸ್ವಾಮಿ ಮಗುವನ್ನು ನೋಡಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
ಹೌದು, ರೇಣುಕಾಸ್ವಾಮಿಗೆ ಗಂಡು ಮಗು ಆಗಿರುವ ಸುದ್ದಿ ದರ್ಶನ್ ಅವರಿಗೆ ತಿಳಿದಿದೆ. ಜೈಲು ಸಿಬ್ಬಂದಿ ದರ್ಶನ್ ಗೆ ಮಾಹಿನಿ ನೀಡಿದ್ದು, ವಿಷಯ ತಿಳಿದ ದರ್ಶನ್, ಹೌದಾ.. ಒಳ್ಳೇದಾಗಲಿ ಎಂದು ಹೇಳಿದ್ದಾರಂತೆ. ಮಗುವಾದ ದಿನವೇ ಸಿಬ್ಬಂದಿ ನಟ ದರ್ಶನ್ ಗೆ ಮಾಹಿತಿ ನೀಡಿದ್ದಾರಂತೆ. ಸಿಬ್ಬಂದಿ ಹೇಳ್ತಿದ್ದಂತೆ ಒಳ್ಳೆಯದಾಗಲಿ ಎಂದು ನಟ ದರ್ಶನ್ ಹೇಳಿದ್ದರು.
ಇದೀಗ ದರ್ಶನ್ ತೂಗುದೀಪ್ ಅವರ ಧರ್ಮಪತ್ನಿ ವಿಜಯಲಕ್ಷ್ಮಿ ದರ್ಶನ್ ಕೊಲೆಯಾದ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿ, ರೇಣುಕಾಸ್ವಾಮಿ ಹೆಂಡತಿ ಜನ್ಮ ನೀಡಿರುವ ಗಂಡು ಮಗುವನ್ನು ನೋಡಿಕೊಂಡು ಬರಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಚಿತ್ರದುರ್ಗ ಜಿಲ್ಲೆಯಲ್ಲಿ ಇರುವ ದರ್ಶನ್ ತೂಗುದೀಪ್ ಅವರ ಅಭಿಮಾನಿ ಸಂಘದ ಮುಖಂಡರನ್ನು ಸಂಪರ್ಕಿಸಲಾಗಿದೆ. ಈ ಮೂಲಕ ರೇಣುಕಾಸ್ವಾಮಿ ಹೆಂಡತಿ ಜನ್ಮ ನೀಡಿರುವ ಗಂಡು ಮಗುವನ್ನು ನೋಡಿಕೊಂಡು ಬರಲು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಪತ್ನಿ, ವಿಜಯಲಕ್ಷ್ಮೀ ಅವರು ಯೋಚಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಅಂದಹಾಗೆ ಅಕ್ಟೋಬರ್ 16ರಂದು ಬೆಳಗ್ಗೆ ಜಾವ 7ಗಂಟೆ 1 ನಿಮಿಷಕ್ಕೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಸಹನಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ನಿಗದಿತ ದಿನಾಂಕಕ್ಕಿಂತ ಒಂದು ವಾರ ಮೊದಲೇ ಮಗು ಜನನವಾಗಿದೆ ಎನ್ನಲಾಗಿದೆ. ಮಗುವನ್ನು ಅಬ್ಜರ್ವೇಶನ್ ನಲ್ಲಿ ಇಡಲಾಗಿತ್ತು. ಇದೀಗ ತಾಯಿ-ಮಗು ಆರೋಗ್ಯವಾಗಿದ್ದಾರೆ.
